ಆ್ಯಪ್ನಗರ

ಸಚಿವರ ಹೇಳಿಕೆಗೆ ಸಿಪಿಐಎಂ ಖಂಡನೆ

ದಾಂಡೇಲಿ : ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ಅವಹೇಳನಕಾರಿ, ಅಪಮಾನಕಾರಿ, ಪ್ರಚೋದನಾಕಾರಿಯಾಗಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿ, ಅವರ ಹೇಳಿಕೆ ಖಂಡಿಸಿ ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್‌ ಪಕ್ಷ ದ ಹಳಿಯಾಳ ತಾಲೂಕು ಸಮಿತಿ ನೇತೃತ್ವದಲ್ಲಿ ದಾಂಡೇಲಿಯ ಬಸ್‌ನಿಲ್ದಾಣದ ಎದುರು ಪ್ರತಿಭಟನೆ ನಡೆಯಿತು.

Vijaya Karnataka 14 Feb 2019, 5:00 am
ದಾಂಡೇಲಿ : ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ಅವಹೇಳನಕಾರಿ, ಅಪಮಾನಕಾರಿ, ಪ್ರಚೋದನಾಕಾರಿಯಾಗಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿ, ಅವರ ಹೇಳಿಕೆ ಖಂಡಿಸಿ ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್‌ ಪಕ್ಷ ದ ಹಳಿಯಾಳ ತಾಲೂಕು ಸಮಿತಿ ನೇತೃತ್ವದಲ್ಲಿ ದಾಂಡೇಲಿಯ ಬಸ್‌ನಿಲ್ದಾಣದ ಎದುರು ಪ್ರತಿಭಟನೆ ನಡೆಯಿತು.
Vijaya Karnataka Web KWR-12-DND9


ಪಕ್ಷ ದ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಶಾಂತಾರಾಮ ನಾಯ್ಕ ಮಾತನಾಡಿ, ಕೇಂದ್ರ ಸಚಿವ ಅನಂತಕುಮಾರ ಹೆಗಡೆಯವರು ಅಸಂವಿಧಾನಿಕ ಮತ್ತು ಕೋಮುವಾದಿ ಪ್ರಚೋದನಾಕಾರಿ ಮಾತುಗಳನ್ನಾಡುತ್ತ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿದ್ದಾರೆ. ದೇಶದ ಸಂವಿಧಾನ ಮತ್ತು ಸಂಸ್ಕೃತಿಗೆ ಧಕ್ಕೆ ತರುವಂತಹ ಅನಾಗರಿಕ ಹೇಳಿಕೆ ನೀಡುತ್ತಿದ್ದಾರೆ. ಇದು ಸಮಾಜದಲ್ಲಿ ಸಂಘರ್ಷಕ್ಕೆ ಎಡೆ ಮಾಡಿಕೊಡುವಂತಾಗಿದೆ. ಐದು ಅವಧಿಗೆ ಸಂಸದರಾದ ಇವರು ಈಗ ಸಚಿವರಾಗಿ ಯಾವುದೇ ಕೆಲಸ ಮಾಡದೇ, ತಮ್ಮ ನಿಷ್ಕ್ರಿಯತೆಯನ್ನು ಹೆಚ್ಚಿಸಿಕೊಳ್ಳಲು ದಾರಿ ತಪ್ಪಿಸುವ ಮಾತು ಆಡುತ್ತಿದ್ದಾರೆ. ಐದು ವರ್ಷ ಏನೇನೂ ಮಾಡದ, ಕ್ಷೇತ್ರದ ಅಭಿವೃದ್ಧಿ ಚಿಂತೆಯನ್ನೂ ಮಾಡದ, ಕ್ಷೇತ್ರ ಜನತೆ ಸಮಸ್ಯೆಯನ್ನೂ ಆಲಿಸದ ಇವರಿಗೆ ಚುನಾವಣೆ ಹತ್ತಿರ ಬರುವಾಗ ಜನರ ನೆನಪಾಗುತ್ತದೆ. ಜನರು ಯಾವುದೇ ಕಾರಣಕ್ಕೂ ಕೋಮುವಾದಿ ಶಕ್ತಿಗಳನ್ನು ಬೆಂಬಲಿಸಬಾರದು ಎಂದರು.

ಪಕ್ಷ ದ ತಾಲೂಕು ಸಮಿತಿ ಕಾರ್ಯದರ್ಶಿ ಹಾಗೂ ವೆಸ್ಟಕೋಸ್ಟ್‌ ಎಂಪ್ಲಾಯೀಸ್‌ ಯೂನಿಯನ್‌ ಉಪಾಧ್ಯಕ್ಷ ಉದಯ ನಾಯ್ಕ, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಡಿ.ಸ್ಯಾಮಸನ್‌ ಮಾತನಾಡಿ, ಅನಂತಕುಮಾರ ಹೆಗಡೆಯವರು ತಮ್ಮ ಘನತೆಯನ್ನು ಮರೆತು ಮಾತನಾಡುತ್ತಿದ್ದಾರೆ. ಇದು ನಮ್ಮ ಸಂಸತ್ತಿಗೆ ಆಗುತ್ತಿರುವ ಅವಮಾನವಾಗಿದೆ. ಕೇಂದ್ರ ಸಚಿವರಾಗಿ ಸಂವಿಧಾನ ಬದಲಿಸುತ್ತೇವೆ, ಕೈ ಕತ್ತರಿಸುತ್ತೇವೆ ಎಂಬ ಪ್ರಚೋದನಾಕಾರಿ ಮಾತುಗಳನ್ನಾಡುವುದು ಕಾನೂನು ಉಲ್ಲಂಘನೆಯಾಗುತ್ತದೆ ಜನರು ಇಂತಹವರನ್ನು ತಿರಸ್ಕರಿಸಬೇಕು ಎಂದರು.

ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯ ಆರ್ಯ ಮುಲ್ಲಾ, ಎಚ್‌.ಬಿ.ನಾಯ್ಕ, ಜಯಶ್ರೀ, ತಾಲೂಕು ಸಮಿತಿ ಸದಸ್ಯ ಟಿ.ಎಸ್‌.ನಾಯ್ಕ, ಸಲಿಮ್‌ ಸಯ್ಯದ, ಡಿವೈಎಫ್‌ಐ ಕಾಂತರಾಜ, ರಾಘವೇಂದ್ರ ಭಜಂತ್ರಿ, ಇಮ್ರಾನ ಖಾನ ಮುಂತಾದವರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ