ಆ್ಯಪ್ನಗರ

ಮೊಬೈಲ್‌ ಗೀಳಿನಿಂದ ಸೃಜನಶೀಲತೆ ದೂರ

ಶಿರಸಿ : ಟಿವಿ ಮತ್ತು ಮೊಬೈಲ್‌ಗಳ ಅತಿಯಾದ ಗೀಳಿನಿಂದಾಗಿ ಮಕ್ಕಳಲ್ಲಿರುವ ಸೃಜನಶೀಲತೆ ನಶಿಸಿ ಹೋಗುತ್ತಿದೆ. ರಜಾ ಕಾಲದ ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವ ಮೂಲಕ ಕ್ರಿಯಾಶೀಲರನ್ನಾಗಿಸುವಲ್ಲಿ ಸಹಕಾರಿಯಾಗಲಿವೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ನಿರ್ದೇಶಕಿ ಸರಸ್ವತಿ ಎನ್‌. ರವಿ ಹೇಳಿದರು.

Vijaya Karnataka 27 Mar 2019, 5:00 am
ಶಿರಸಿ : ಟಿವಿ ಮತ್ತು ಮೊಬೈಲ್‌ಗಳ ಅತಿಯಾದ ಗೀಳಿನಿಂದಾಗಿ ಮಕ್ಕಳಲ್ಲಿರುವ ಸೃಜನಶೀಲತೆ ನಶಿಸಿ ಹೋಗುತ್ತಿದೆ. ರಜಾ ಕಾಲದ ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವ ಮೂಲಕ ಕ್ರಿಯಾಶೀಲರನ್ನಾಗಿಸುವಲ್ಲಿ ಸಹಕಾರಿಯಾಗಲಿವೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ನಿರ್ದೇಶಕಿ ಸರಸ್ವತಿ ಎನ್‌. ರವಿ ಹೇಳಿದರು.
Vijaya Karnataka Web SRS-26SRS4B


ಮರಾಠಿಕೊಪ್ಪದ ನಿತ್ಯಾನಂದ ಮಠದಲ್ಲಿ ಆರಂಭವಾದ 10 ದಿನಗಳ ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಮಿತಿ ಮೀರಿದ ಟಿವಿ ಮತ್ತು ಮೊಬೈಲ್‌ಗಳ ಬಳಕೆಯಿಂದಾಗಿ ಇಂದಿನ ಮಕ್ಕಳಲ್ಲಿ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬಗೆಗಿನ ಕಾಳಜಿ ಕಡಿಮೆಯಾಗುತ್ತಿದೆ. ಬಾಲ್ಯಾವಸ್ಥೆಯಲ್ಲಿಯೇ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಅದಕ್ಕೆ ಅನುಗುಣವಾದ ಪ್ರೋತ್ಸಾಹ ನೀಡಿದಾಗ ಮಾತ್ರ ಮಕ್ಕಳಲ್ಲಿರುವ ಪ್ರತಿಭೆ ಹೊರಗೆ ತರಲು ಸಾಧ್ಯ ಎಂದರು.

ವ್ಯಕ್ತಿತ್ವ ವಿಕಸನಕ್ಕೆ ಸಹಾಯಕವಾಗುವ ಹಲವಾರು ವಿಷಯಗಳಲ್ಲಿ ಮಕ್ಕಳು ತೊಡಗಿಕೊಳ್ಳುವುದರಿಂದ ಟಿವಿ ಮತ್ತು ಮೊಬೈಲ್‌ಗಳಿಂದ ದೂರವಿದ್ದು ಮನಸ್ಸನ್ನು ಕೇಂದ್ರಿಕರಿಸಿಕೊಳ್ಳಲು ಸಹಾಯಕವಾಗುತ್ತದೆ. ಇದು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಬಹಳ ಅನುಕೂಲವಾಗಲಿದೆ. ಪಾಲಕರು ಇಂಥ ಶಿಬಿರಗಳ ಪ್ರಯೋಜನವನ್ನು ತಮ್ಮ ಮಕ್ಕಳಿಗೆ ದೊರಕಿಸಿಕೊಡಬೇಕು ಎಂದರು.

ನಗರಸಭೆಯ ಸದಸ್ಯೆ ಶರ್ಮಿಳಾ ಮಾತನಾಡಿ, ಮಕ್ಕಳು ರಜಾ ದಿನಗಳಲ್ಲಿ ಮನೆಯಲ್ಲಿ ಕುಳಿತು ಟಿವಿ ಮತ್ತು ಮೊಬೈಲ್‌ ನೋಡುವ ಮೂಲಕ ತಮ್ಮ ಅಮೂಲ್ಯ ಸಮಯ ವ್ಯರ್ಥ ಮಾಡಬಾರದು. ಇಂಥ ಶಿಬಿರಗಳಲ್ಲಿ ಭಾಗವಹಿಸಿ ರಜೆಯ ಮಜಾವನ್ನು ಅನುಭವಿಸುವಂತಾಗಬೇಕು. ದೇಶದ ಭವಿಷ್ಯದ ಪ್ರಜೆಗಳು ಮಾನಸಿಕ ಮತ್ತು ದೈಹಿಕವಾಗಿ ಪ್ರಬಲತೆ ಹೊಂದಿದಾಗ ಮಾತ್ರ ಸ್ವಸ್ಥ ಸಮಾಜ ರೂಪಿಸಲು ಸಾಧ್ಯ ಎಂದರು.

ಹಿರಿಯರಾದ ವಾಸುದೇವ ಇಂದಿನ ವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಮಕ್ಕಳ ನೈತಿಕ ಹೊಣೆಗಾರಿಕೆ ಕಷ್ಟಕರ. ಇದರಿಂದ ಮಕ್ಕಳು ದಾರಿ ತಪ್ಪುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ಇದರ ಬಗ್ಗೆ ಪಾಲಕರು ಹೆಚ್ಚು ಕಾಳಜಿ ಹೊಂದಬೇಕು ಎಂದರು. ಶಿಬಿರದ ಸಂಚಾಲಕಿ ಮಮತಾ ನಾಯ್ಕ ಸ್ವಾಗತಿಸಿದರು. ವೇದಿಕಾ ಪ್ರಾರ್ಥನೆ ಮಾಡಿದರು. ವಿವೇಕಾನಂದ ಶಾಲೆಯ ನೇತ್ರಾವತಿ ನಿರೂಪಿಸಿದರು. ಅನನ್ಯ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ