ಆ್ಯಪ್ನಗರ

ಆನೆ ದಾಳಿಯಿಂದ ಬೆಳೆ ಹಾನಿ

ಜೋಯಿಡಾ :ತಾಲೂಕಿನ ಉಳವಿ ಗ್ರಾಪಂ ವ್ಯಾಪ್ತಿಯ ನೇತುರ್ಗಾ ಗ್ರಾಮದ ತೋಟದಲ್ಲಿ ಭಾನುವಾರ ಆನೆದಾಳಿ ನಡೆದಿದ್ದು, ತೆಂಗು,ಬಾಳೆ, ಅಡಕೆ ನಾಶದಿಂದ ಲಕ್ಷಾಂತರ ರೂ.ಹಾನಿ ಸಂಭವಿಸಿದೆ.

Vijaya Karnataka 18 Jul 2018, 5:00 am
ಜೋಯಿಡಾ :ತಾಲೂಕಿನ ಉಳವಿ ಗ್ರಾಪಂ ವ್ಯಾಪ್ತಿಯ ನೇತುರ್ಗಾ ಗ್ರಾಮದ ತೋಟದಲ್ಲಿ ಭಾನುವಾರ ಆನೆದಾಳಿ ನಡೆದಿದ್ದು, ತೆಂಗು,ಬಾಳೆ, ಅಡಕೆ ನಾಶದಿಂದ ಲಕ್ಷಾಂತರ ರೂ.ಹಾನಿ ಸಂಭವಿಸಿದೆ.
Vijaya Karnataka Web crop damage by elephant attack
ಆನೆ ದಾಳಿಯಿಂದ ಬೆಳೆ ಹಾನಿ

ಭಾನುವಾರ ರಾತ್ರಿ ನೇತುರ್ಗಾ ಗ್ರಾಮದ ಗೋಪಾಲಕೃಷ್ಣ ಭಾಗವತರ ತೋಟಕ್ಕೆ ದಾಳಿ ಇಟ್ಟ ಆನೆಗಳು ಫಲಭರಿತ 34 ಅಡಕೆ, 50 ಬಾಳೆ ಹಾಗೂ 10 ಕ್ಕೂ ಹೆಚ್ಚು ತೆಂಗಿನ ಗಿಡಗಳನ್ನು ನಾಶಮಾಡಿದೆ. ಅಲ್ಲಿಯೇ ಸಮೀಪದ ಇನ್ನೊರ್ವ ರೈತರ ತೋಟದಲ್ಲಿಯೂ ಇದೆ ರೀತಿ ಫಲ ಭರಿತ ಬೆಳೆಗಳನ್ನು ಹಾನಿಮಾಡಿದ್ದಾಗಿ ತಿಳಿದುಬಂದಿದೆ.

ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತ ನೀಡಿದ್ದು, ಕಿರಿಯ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಇಟ್ಟು ಪರಿಶೀಲಿಸಿದ್ದಾರೆ.

3 ವರ್ಷದಿಂದ ದಾಳಿ: ಮೂರು ವರ್ಷದಿಂದ ಆನೆಗಳು ಗೋಪಾಲಕೃಷ್ಣರವರ ತೋಟಕ್ಕೆ ದಾಳಿ ಇಡುತ್ತಲೇ ವೆ. ನೂರಾರು ಗಿಡಗಳನ್ನು ಧರೆಗುರುಳಿಸಿ ಲಕ್ಷಾಂತರ ರೂ.ಹಾನಿಮಾಡುತ್ತಿವೆ. ಕಳೆದ ಬಾರಿ ಆನೆಗಳು ದಾಳಿ ಇಟ್ಟ ಸಂದರ್ಭದಲ್ಲಿ ತೋಟಕ್ಕೆ ಭೇಟಿ ನೀಡಿದ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಓ ಪಾಲಯ್ಯ, 6 ತಿಂಗಳ ಒಳಗಾಗಿ ಸೋಲಾರ ವಿದ್ಯುತ್ತ್‌ ಬೇಲಿ ಅಳವಡಿಸಿಕೊಡುವ ಬರವಸೆ ನೀಡಿದ್ದರು. ಆದರೆ ಇದುವರೆಗೂ ಬೇಲಿಯ ಸುದ್ದಿಯೇ ಇಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಆನೆ ದಾಳಿಯ ಆತಂಕ : ಆನೆಗಳು ಈಗಲೂ ಅಲ್ಲಿನ ಸಮೀಪದ ಕಾಡಿನಲ್ಲೇ ಉಳಿದಿದ್ದು, ಮತ್ತೆ ಮತ್ತೆ ದಾಳಿ ಇಡುವ ಸಂಭವವಿದೆ ಎಂದು ಗ್ರಾಮಸ್ಥರು ಆತಂಕವ್ಯಕ್ತಪಡಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ