ಆ್ಯಪ್ನಗರ

ಬೆಳೆ ಹಾನಿ ಪರಿಹಾರ ಶೀಘ್ರ ನೀಡಿ

ಜೊಯಿಡಾ : ತಾಲೂಕಿನಲ್ಲಿಮಳೆ ಹಾನಿಯಿಂದಾದ ಬೆಳೆ ಮತ್ತು ಇತರ ಹಾನಿಯ ಬಗ್ಗೆ ಹಳಿಯಾಳ -ಜೊಯಿಡಾ ಶಾಸಕ ಆರ್‌.ವಿ.ದೇಶಪಾಂಡೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದರು.

Vijaya Karnataka 4 Nov 2019, 5:00 am
ಜೊಯಿಡಾ :ತಾಲೂಕಿನಲ್ಲಿಮಳೆ ಹಾನಿಯಿಂದಾದ ಬೆಳೆ ಮತ್ತು ಇತರ ಹಾನಿಯ ಬಗ್ಗೆ ಹಳಿಯಾಳ -ಜೊಯಿಡಾ ಶಾಸಕ ಆರ್‌.ವಿ.ದೇಶಪಾಂಡೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದರು.
Vijaya Karnataka Web crop damage relief is quick
ಬೆಳೆ ಹಾನಿ ಪರಿಹಾರ ಶೀಘ್ರ ನೀಡಿ


ಭಾರಿ ಮಳೆಯಿಂದ ಕೃಷಿ ಇಲಾಖೆಯ ಹಾನಿಯ ಬಗ್ಗೆ ಮಾಹಿತಿಯನ್ನು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪಿ.ಐ.ಮಾನೆ ನೀಡಿದರು. ಈ ವೇಳೆ ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿಗೀಡಾದ ರೈತರಿಗೆ ಪರಿಹಾರ ನೀಡುವ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಿ ಎಂದರು.

ರೈತರ ಹೊಲದಲ್ಲಿಭಾರಿ ಮಳೆಯಿಂದ ಉಸುಕು ಶೇಖರಣೆಯಾಗಿದ್ದು, ಅದನ್ನು ಹೊಲದಿಂದ ತೆಗೆದು ಅವರೇ ಬಳಸುವುದಕ್ಕೆ ತೊಂದರೆ ಮಾಡಬೇಡಿ ಎಂದು ಕಂದಾಯ ಇಲಾಖೆಯ ತಹಸೀಲ್ದಾರ ಅವರಿಗೆ ಸೂಚಿಸಿದರು. ರೈತರ ಈ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮತ್ತು ಅರಣ್ಯ ಸಚಿವರ ಜತೆ ದೂರವಾಣಿಯಲ್ಲಿಚರ್ಚಿಸಿದರು.

ಹಾನಿಗೀಡಾದ ಶಾಲಾ ಕೊಠಡಿಗಳ ಬಗ್ಗೆ ಜಿ.ಪಂ. ಅಧಿಕಾರಿಗಳು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಹಿತಿ ನೀಡಿ ಒಟ್ಟು 25 ಶಾಲಾ ಕೊಠಡಿಗಳು ಹಾನಿಯಾಗಿದ್ದು, ಈ ಬಗ್ಗೆ ಮಾಹಿತಿ ನೀಡಲಾಗಿದೆ. 9 ಕೊಠಡಿಗಳಿಗೆ ಮಾತ್ರ ಅನುದಾನ ಮಂಜೂರಿಯಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಜೊಯಿಡಾದ ಕನ್ನಡ ಶಾಲೆಯ ಮೂರು ಕೊಠಡಿಗಳು ಬೀಳುವ ಸ್ಥಿತಿಯಲ್ಲಿದ್ದು, ಈ ಬಗ್ಗೆ ಜಿಲ್ಲಾಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಪರಿಶೀಲಿಸಿ, ನೆಲಸಮ ಗೊಳಿಸಲು ಪ್ರಸ್ತಾವನೆ ಕಳುಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು ಮತ್ತು ಹಾನಿಯಾದ ಉಳಿದ ಶಾಲಾ ಮತ್ತು ಅಂಗನವಾಡಿಗಳ ಕಟ್ಟಡ ಇದ್ದರೆ ಮತ್ತೊಮ್ಮೆ ಮಾಹಿತಿಯನ್ನು ಜಿಲ್ಲಾಧಿಕಾರಿಗೆ ನೀಡುವಂತೆ ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌.ಘೋಟ್ನೆಕರ, ತಾ.ಪಂ. ಅಧ್ಯಕ್ಷೆ ನರ್ಮದಾ ಪಾಟ್ನೇಕರ, ಉಪಾಧ್ಯಕ್ಷ ವಿಜಯ ಪಂಡಿತ, ಜಿ.ಪಂ. ಸದಸ್ಯರಾದ ರಮೇಶ ನಾಯ್ಕ, ಸಂಜಯ ಹಣಬರ, ಜೊಯಿಡಾ ಗ್ರಾ.ಪಂ. ಅಧ್ಯಕ್ಷೆ ಶೈಲಾ ನಾಯ್ಕ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ರೈಲಿಗೆ ಚಾಲನೆ ಸಂತಸದ ವಿಷಯ: ಈ ಸಂದರ್ಬದಲ್ಲಿಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಾಸಕ ಆರ್‌.ವಿ.ದೇಶಪಾಂಡೆ ಜೊಯಿಡಾ, ದಾಂಡೇಲಿ ಭಾಗದಲ್ಲಿಪ್ರವಾಸೋದ್ಯಮ ಚಟುವಟಿಕೆ ಹೆಚ್ಚುತ್ತಿದೆ. ನಮ್ಮ ಸರಕಾರದ ಅವಧಿಯಲ್ಲಿಇಲ್ಲಿಯ ಪ್ರವಾಸೋದ್ಯಮ ಮೂಲ ಸೌಕರ್ಯದ ಬಗ್ಗೆ ನೂರಾರು ಕೋಟಿ ರೂ. ಅನುದಾನವನ್ನು ನೀಡಲಾಗಿದೆ. ಅಂಬೇವಾಡಿ -ಅಳ್ನಾವರ ರೈಲು ಚಾಲನೆಯಿಂದ ಪ್ರವಾಸಿಗರಿಗೆ ಇನ್ನಷ್ಟು ಅನುಕೂಲವಾಗುವುದರ ಜೊತೆಗೆ ಪ್ರವಾಸೋದ್ಯಮ ಬೆಳವಣಿಗೆಗೆ, ಸ್ಥಳೀಯರಿಗೆ ಪ್ರಮುಖ ನಗರ ಸಂಪರ್ಕಕ್ಕೆ ಅನುಕೂಲವಾಗಲಿದೆ. 14 ವರ್ಷಗಳಿಂದ ಈ ರೈಲ್ವೆ ಮಾರ್ಗದ ಬಗ್ಗೆ ನಾವೆಲ್ಲಪ್ರಯತ್ನ ಮಾಡಿದ್ದು ಸಾರ್ಥಕವಾಗಿದೆ. ಕೇಂದ್ರ ಸರಕಾರ ಮತ್ತು ರೈಲ್ವೆ ಸಚಿವರೊಂದಿಗೆ ನಿರಂತರ ಪ್ರಯತ್ನ ಮಾಡಿದ ಫಲವಾಗಿ ಈ ಮಾರ್ಗ ಚಾಲನೆಗೊಳ್ಳುತ್ತಿರುವುದು ಖುಷಿ ತಂದಿದೆ ಎಂದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ