ಆ್ಯಪ್ನಗರ

ಕೈ ಬೀಸಿ ಕರೆವ ದಾಂಡೇಲಿ ವನ್ಯಜೀವಿಧಾಮ

ದಾಂಡೇಲಿ : ದಾಂಡೇಲಿ ವನ್ಯಜೀವಿಧಾಮವೆಂದೇ ಹೆಸರಾಗಿದೆ. ಹೀಗಾಗಿ ಪ್ರವಾಸಿಗರು ದಾಂಡೇಲಿಗೆ ಭೇಟಿ ನೀಡುತ್ತಾರೆ. 2007ರಲ್ಲಿದಾಂಡೇಲಿ ವನ್ಯಜೀವಿ ಧಾಮವನ್ನು ಹುಲಿಗಳ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಯಿತು. ವನ್ಯಜೀವಿ ಧಾಮವು ಕಾಳಿ ನದಿಯ ಉಪನದಿಗಳಾದ ಕಾನೇರಿ ಮತ್ತು ನಾಗಝರಿಯೊಂದಿಗೆ ದಟ್ಟವಾದ ಅರಣ್ಯದಿಂದ ಕೂಡಿದೆ.

Vijaya Karnataka 13 Oct 2019, 5:00 am
ದಾಂಡೇಲಿ : ದಾಂಡೇಲಿ ವನ್ಯಜೀವಿಧಾಮವೆಂದೇ ಹೆಸರಾಗಿದೆ. ಹೀಗಾಗಿ ಪ್ರವಾಸಿಗರು ದಾಂಡೇಲಿಗೆ ಭೇಟಿ ನೀಡುತ್ತಾರೆ. 2007ರಲ್ಲಿದಾಂಡೇಲಿ ವನ್ಯಜೀವಿ ಧಾಮವನ್ನು ಹುಲಿಗಳ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಯಿತು. ವನ್ಯಜೀವಿ ಧಾಮವು ಕಾಳಿ ನದಿಯ ಉಪನದಿಗಳಾದ ಕಾನೇರಿ ಮತ್ತು ನಾಗಝರಿಯೊಂದಿಗೆ ದಟ್ಟವಾದ ಅರಣ್ಯದಿಂದ ಕೂಡಿದೆ.
Vijaya Karnataka Web dandeli wildlife sanctuary
ಕೈ ಬೀಸಿ ಕರೆವ ದಾಂಡೇಲಿ ವನ್ಯಜೀವಿಧಾಮ


ಈ ವನ್ಯಜೀವಿ ಧಾಮವು ಹುಲಿ, ಚಿರತೆ, ಕಾಡಾನೆ, ಜಿಂಕೆ, ಕಾಡೆಮ್ಮೆ, ಕಾಡುಕೋಣ, ಕರಡಿ, ನರಿ ಹಾಗೂ 300ಕ್ಕೂ ಹೆಚ್ಚು ಪಕ್ಷಿಗಳಿಗೆ ಆಶ್ರಯ ನೀಡಿದೆ. ದಾಂಡೇಲಿಯ ಅರಣ್ಯ ಪ್ರದೇಶ ಭಾಗವನ್ನು ಹಾರ್ನಬಿಲ್‌(ಮಂಗಟ್ಟೆ) ಸಂರಕ್ಷಿತ ಪ್ರದೇಶ ಎಂದು ಕರೆಯಲಾಗುತ್ತದೆ.

ಭಾರತದಲ್ಲಿಹಾರ್ನಬಿಲ್‌ಗಳ 9 ಪ್ರಭೇದಗಳಿದ್ದು, ಅವುಗಳಲ್ಲಿ4 ಬಗೆಯ ಹಾರ್ನಬಿಲ್‌ ಪ್ರಭೇದಗÜಳು ದಾಂಡೇಲಿಯ ಸುತ್ತಮುತ್ತಲಿನೆ ಪ್ರದೇಶದಲ್ಲಿಯೇ ಕಂಡುಬರುತ್ತಿವೆ. ಮಲಬಾರ್‌ ಗ್ರೇ ಹಾರ್ನಬಿಲ್‌, ಇಂಡಿಯನ್‌ ಗ್ರೇ ಹಾರ್ನಬಿಲ್‌, ಮಲಬಾರ್‌ ಪೈಡ್‌ ಹಾರ್ನಬಿಲ್‌ ಹಾಗೂ ಗ್ರೇಟ್‌ ಇಂಡಿಯನ್‌ ಹಾರ್ನಬಿಲ್‌ ಇಲ್ಲಿಕಂಡು ಬರುತ್ತವೆ. ಕರ್ನಾಟಕದಲ್ಲೇ ಪ್ರಥಮ ಬಾರಿಗೆ ದಾಂಡೇಲಿಯಲ್ಲಿಹಾರ್ನಬಿಲ್‌ ಹಕ್ಕಿ ಹಬ್ಬವನ್ನು ಆಯೋಜಿಸಲಾಗಿತ್ತು. ಇಲ್ಲಿನ ವನ್ಯಜೀವಿ ನಿಸರ್ಗಧಾಮದಲ್ಲಿಪ್ರವಾಸಿಗರು ರುದ್ರ ರಮಣೀಯ ಪ್ರಪಾತಗಳು, ಆಳವಾದ ನದಿ ನೀರಿನ ಹರಿವು ಮತ್ತು ಬೆಟ್ಟ ಗುಡ್ಡಗಳ ಸೌಂದರ್ಯವನ್ನು ಸವಿಯಬಹುದು.

ಇಲ್ಲಿನ ಕಾಳಿ ನದಿಯಲ್ಲಿಸಾಹಸ ಜಲಕ್ರೀಡೆಗಳಾದ ರಾಫ್ಟಿಂಗ್‌, ಕಯಾಕಿಂಗ್‌, ಬೋಟಿಂಗ್‌, ರಿವರ್‌ ಕ್ರಾಸಿಂಗ್‌ ಸೇರಿದಂತೆ ಮುಂತಾದ ಕ್ರೀಡೆಗಳನ್ನು ಆನಂದಿಸಬಹುದು. ಅಲ್ಲದೇ ಗುಡ್ಡಗಾಡು ಸೈಕಲ್‌ ಸವಾರಿ, ಚಾರಣ ಹಾಗೂ ಮೊಸಳೆಗಳ ಪಾರ್ಕ್, ಮೀನುಗಾರಿಕೆ ಈ ವನ್ಯಜೀವಿ ಧಾಮದಲ್ಲಿಪ್ರವಾಸಿಗರು ಆನಂದಿಸಬಹುದು.

ಪ್ರಖ್ಯಾತ ಧಾರ್ಮಿಕ ಸ್ಥಳ ಉಳವಿ, ಸೈಕ್ಸ್‌ ಪಾಯಿಂಟ್‌, ಸೂಪಾ ಡ್ಯಾಮ್‌, ಸಿಂಥೇರಿರಾಕ್ಸ್‌, ಕವಳಾ ಗುಹೆ, ದಂಡಕಾರಣ್ಯ ಇಕೊ ಪಾರ್ಕ್, ಮೌಳಂಗಿ ಇಕೊ ಪಾಕ್‌ ದಾಂಡೇಲಿಗೆ ಹತ್ತಿರದಲ್ಲಿರುವ ಪ್ರೇಕ್ಷಣೀಯ ಸ್ಥಳಗಳು. ಈ ನಿಸರ್ಗಧಾಮಕ್ಕೆ ಅಕ್ಟೋಬರ್‌ನಿಂದ ಜೂನ್‌ ತಿಂಗಳಲ್ಲಿಭೇಟಿ ನೀಡಲು ಪ್ರವಾಸಿಗರಿಗೆ ಒಳ್ಳೆಯ ಸಮಯ. ಇಡೀ ಅರಣ್ಯವನ್ನು ತೆರೆದ ಜೀಪಿನಲ್ಲಿಪ್ರವಾಸಿಗರು ನೋಡಬಹುದು. ಅರಣ್ಯದ ಮಾಹಿತಿಗಾಗಿ ಮತ್ತು ಸೂಕ್ತ ಮಾರ್ಗದರ್ಶನಕ್ಕಾಗಿ ಗೈಡ್‌ಗಳು ಇಲ್ಲಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ