ಆ್ಯಪ್ನಗರ

ಮೌಢ್ಯ ತಡೆಗೆ ಶ್ರಮಿಸಿದ ದಾಸಿಮಯ್ಯ

ಕಾರವಾರ: ವಚನೆ ರಚನೆಯ ಮೂಲಕ ಸಮಾಜದಲ್ಲಿನ ಮೌಢ್ಯಗಳನ್ನು ತಡೆಯಲು ಶ್ರಮಿಸಿದ ವಚನಕಾರರಲ್ಲಿ ದೇವರ ದಾಸಿಮಯ್ಯನವರ ಪಾಲು ಹೆಚ್ಚಿದೆ ಎಂದು ಜಿಲ್ಲಾಧಿಕಾರಿ ಎಸ್‌. ಎಸ್‌. ನಕುಲ್‌ ಹೇಳಿದರು.

Vijaya Karnataka 23 Mar 2018, 5:00 am
ಕಾರವಾರ: ವಚನೆ ರಚನೆಯ ಮೂಲಕ ಸಮಾಜದಲ್ಲಿನ ಮೌಢ್ಯಗಳನ್ನು ತಡೆಯಲು ಶ್ರಮಿಸಿದ ವಚನಕಾರರಲ್ಲಿ ದೇವರ ದಾಸಿಮಯ್ಯನವರ ಪಾಲು ಹೆಚ್ಚಿದೆ ಎಂದು ಜಿಲ್ಲಾಧಿಕಾರಿ ಎಸ್‌. ಎಸ್‌. ನಕುಲ್‌ ಹೇಳಿದರು.
Vijaya Karnataka Web dasimayya who worked hard to silence
ಮೌಢ್ಯ ತಡೆಗೆ ಶ್ರಮಿಸಿದ ದಾಸಿಮಯ್ಯ


ಅವರು ಗುರುವಾರ ಜಿಲ್ಲಾಧಿಕಾರಿ ಸಭಾ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ದೇವರ ದಾಸಿಮಯ್ಯ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಸಮಾಜದ ಲೋಪಗಳನ್ನು ಸರಿಪಡಿಸಲು ತಮ್ಮ ವಚನಗಳ ಮೂಲಕ ಉತ್ತಮ ಸಂದೇಶಗಳನ್ನು ಜನ ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಿದ ಆದ್ಯ ವಚನಕಾರ ದೇವರ ದಾಸಿಮಯ್ಯ. ಅನಿಷ್ಟ ಮತ್ತು ಮೌಢ್ಯಗಳ ವಿರುದ್ದ ಸಮಾಜ ಎಚ್ಚರಿಸುವ ಕೆಲಸವನ್ನು ಮಾಡಿದ್ದಾರೆ ಎಂದರು.

ಬಸವಣ್ಣನವರ ಸವåಕಾಲಿನ ವಚನಕಾರಾದ ದಾಸಿಮಯ್ಯ ಶಿವ ಭಕ್ತನಾಗಿದ್ದು ದೇವರ ಹೆಸರಿನಲ್ಲಿನ ಮೋಸಗಳನ್ನು ಮಾಡಬಾರದು ಹಾಗೂ ಇದರಿಂದ ಯಾವುದೇ ರೀತಿಯ ನೆಮ್ಮದಿ ಸಿಗುವುದಿಲ್ಲ ಎಂಬ ಸಂದೇಶವನ್ನು ತಮ್ಮ ವಚನಗಳ ಸಾರಾಂಶದಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿಸಿದರು.

ನೇಕಾರ ಸಮಾಜದಲ್ಲಿ ಹುಟ್ಟಿ ತಮ್ಮ ಜೀವನವನ್ನೇ ಸಮಾಜದ ಏಳ್ಗೆಗೆ ಸಮರ್ಪಿಸಿದರು. ಸಮಾಜದಲ್ಲಿ ಅರಿವು ಮೂಡಿಸಲು ಸುಮಾರು 150 ಕ್ಕೂ ಹೆಚ್ಚಿನ ವಚನಗಳ ಮೂಲಕ ಸಮಾಜವನ್ನು ತಿದ್ದುವ ಕಾರ್ಯ ನಿರ್ವಹಿಸಿ ದೇವರ ದಾಸಿಮಯ್ಯ ಶ್ರೇಷ್ಠ ವಚನಕಾರರ ಸಾಲಿನಲ್ಲಿ ಗುರುತಿಸಲ್ಪಡುತ್ತಾರೆ ಎಂದು ಸ್ಮರಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಹಿಮಂತರಾಜು. ಜಿ ಪ್ರಸ್ತಾವಿಕವಾಗಿ ಮಾತನಾಡಿ, ಸಂಶೋಧಕರ ಪ್ರಕಾರ ವಿಶ್ವ ವಿಖ್ಯಾತ ವಚನಕಾರ ಬಸವಣ್ಣ ನವರ ಕಾಲಕ್ಕಿಂತಲೂ ದೇವರ ದಾಸಿಮಯ್ಯ ಮೊದಲಿನ ವಚನಕಾರ ಎಂಬ ಅಂಶ ಕಂಡುಕೊಳ್ಳಲಾಗಿದೆ. ತಮ್ಮ ವಚನಗಳ ಮೂಲಕ ಶಿವ ಭಕ್ತಿಯ ಮಹತ್ವವನ್ನು ತಿಳಿಸಿದ್ದಾರೆ ಎಂದರು. ನೇಕಾರ ಸಮಾಜದ ಮುಖಂಡರು, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ