ಆ್ಯಪ್ನಗರ

ನಾನಾ ಸಮಸ್ಯೆಗಳ ಪರಿಹಾರಕ್ಕೆ ಡಿಸಿ ಸೂಚನೆ

ಶಿರಸಿ: ನಗರದಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ಮಾಣ ಸಮಸ್ಯೆ ನಿವಾರಿಸಬೇಕು, ಕೃಷಿಕರ ಬೆಳೆ ಹಾನಿ ಸಮೀಕ್ಷೆ ಇನ್ನಷ್ಟು ವೈಜ್ಞಾನಿಕಗೊಳಿಸಿ ರೈತರಿಗೆ ನೆರವಾಗಬೇಕು, ಪರಿಹಾರ ಹಣ ಬಾರದೇ ಇದ್ದವರಿಗೆ ಶೀಘ್ರ ಒದಗಿಸಬೇಕು, ಮಳೆ ಹಾನಿ ಕಾಮಗಾರಿಗಳನ್ನು ವೇಗಗೊಳಿಸಬೇಕು, ಜಲ ಸಂರಕ್ಷ ಣೆಗೆ ಜಾಗೃತಿ ಅಭಿಯಾನ ನಡೆಸಬೇಕು, ಮಳೆನೀರು ಕೊಯ್ಲಿನ ಪ್ರಾತ್ಯಕ್ಷಿಕೆ ನಡೆಸಬೇಕು.

Vijaya Karnataka 23 Jul 2019, 5:00 am
ಶಿರಸಿ: ನಗರದಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ಮಾಣ ಸಮಸ್ಯೆ ನಿವಾರಿಸಬೇಕು, ಕೃಷಿಕರ ಬೆಳೆ ಹಾನಿ ಸಮೀಕ್ಷೆ ಇನ್ನಷ್ಟು ವೈಜ್ಞಾನಿಕಗೊಳಿಸಿ ರೈತರಿಗೆ ನೆರವಾಗಬೇಕು, ಪರಿಹಾರ ಹಣ ಬಾರದೇ ಇದ್ದವರಿಗೆ ಶೀಘ್ರ ಒದಗಿಸಬೇಕು, ಮಳೆ ಹಾನಿ ಕಾಮಗಾರಿಗಳನ್ನು ವೇಗಗೊಳಿಸಬೇಕು, ಜಲ ಸಂರಕ್ಷ ಣೆಗೆ ಜಾಗೃತಿ ಅಭಿಯಾನ ನಡೆಸಬೇಕು, ಮಳೆನೀರು ಕೊಯ್ಲಿನ ಪ್ರಾತ್ಯಕ್ಷಿಕೆ ನಡೆಸಬೇಕು.
Vijaya Karnataka Web dc notice for solution of nana problems
ನಾನಾ ಸಮಸ್ಯೆಗಳ ಪರಿಹಾರಕ್ಕೆ ಡಿಸಿ ಸೂಚನೆ


ಹೀಗೆಂದು ಜಿಲ್ಲಾಧಿಕಾರಿ ಹರೀಶಕುಮಾರ ಕೆ. ಸೋಮವಾರ ಇಲ್ಲಿ ನಾನಾ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರಕ್ಕೆ ಭೇಟಿ ನೀಡಿದ್ದ ಅವರು, ಮಿನಿ ವಿಧಾನಸೌಧದಲ್ಲಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಮಳೆಯ ರಭಸ ಹೆಚ್ಚುತ್ತಿರುವ ಈ ದಿನಗಳಲ್ಲಿ ಅರಣ್ಯ ಇಲಾಖೆ ಜವಾಬ್ದಾರಿ ಹೆಚ್ಚಿನದಿದೆ. ರಸ್ತೆಗಳಲ್ಲಿ ಮರ ಬಿದ್ದು, ಸಂಚಾರ ಸ್ಥಗಿತಗೊಳ್ಳುವ ಘಟನೆಗಳು ಜಿಲ್ಲೆಯಲ್ಲಿ ನಡೆಯುತ್ತಿದೆ. ರಸ್ತೆ ಪಕ್ಕದಲ್ಲಿರುವ, ಬೀಳುವ ಸಾಧ್ಯತೆ ಇರುವ ಮರಗಳನ್ನು ಗುರುತಿಸಿ ಅವುಗಳಿಂದ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದರು.

ಡಾಬಾ ಎದುರು ಲಾರಿ ಬೇಡ: ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಯ ಕೆಲವೆಡೆ ಡಾಬಾಗಳ ಪಕ್ಕ ಲಾರಿ ಮತ್ತು ಇನ್ನಿತರ ವಾಹನಗಳನ್ನು ನಿಲ್ಲಿಸುವುದರಿಂದಾಗಿ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದೇ ಡಾಬಾಗಳನ್ನು ನಡೆಸಲು ಅನುಮತಿ ನೀಡಬಾರದು ಎಂದು ಜಿಲ್ಲಾಧಿಕಾರಿ ಸೂಚಿಸಿದರು. ಶಿಕ್ಷ ಕರ ವರ್ಗಾವಣೆ ಪ್ರಕ್ರಿಯೆ ಈ ವೇಳೆ ಆರಂಭಿಸಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ನೀಡಿಕೊಳ್ಳಬೇಕು.

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪುನಃ ಸೇರಿಸಿಕೊಳ್ಳುವ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಿದೆ. ಶಿರಸಿ ತಾಲೂಕಿನಲ್ಲಿ 74 ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿದ್ದಾರೆ ಎಂದು ಶಿಕ್ಷ ಣ ಇಲಾಖೆ ವರದಿಯಲ್ಲಿ ಹೇಳಿದೆ. ಆದರೆ, ಈ ಸಂಖ್ಯೆ ಜಾಸ್ತಿ ಇರುವ ಸಾಧ್ಯತೆ ಇದ್ದು, ಇನ್ನಷ್ಟು ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಬೇಕು.

ಸಹಾಯಕ ಆಯುಕ್ತ ಈಶ್ವರ ಉಳ್ಳಾಗಡ್ಡಿ, ತಹಸೀಲ್ದಾರ್‌ ಎಂ.ಆರ್‌.ಕುಲಕರ್ಣಿ, ಅಧಿಕಾರಿಗಳಾದ ರಾಮಚಂದ್ರ ಗಾಂವಕರ್‌, ಬಿಇಒ ಸದಾನಂದ ಸ್ವಾಮಿ, ಎಂ.ಎಸ್‌.ಹೆಗಡೆ, ಶಂಕರ ಹೆಗಡೆ ಮತ್ತಿತರರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಕಾನಗೋಡ ಗ್ರಾ.ಪಂ. ಅಧ್ಯಕ್ಷೆ ಜಲಜಾಕ್ಷಿ ಹೆಗಡೆ ನೇತೃತ್ವದ ನಿಯೋಗ ಭೇಟಿಯಾಗಿ ಆಶ್ರಯ ಮನೆಯ ನಿರ್ಮಾಣದಲ್ಲಿ ಉಂಟಾದ ಗೊಂದಲ ಬಗೆಹರಿಸಿ, ಅತಿಕ್ರಮಣದಾರರಿಗೆ ಪಟ್ಟಾ ಒದಗಿಸುವಂತೆ ಆಗ್ರಹಿಸಿದರು.

ಅಂಕೋಲಾ,ಶಿರಸಿ ನಿಲ್ದಾಣದ: ಸ್ಥಿತಿ ತಪ್ಪಿಸಲು ಸೂಚನೆ: ವಿವಿಧೆಡೆ ನಿರ್ಮಿತಿ ಕೇಂದ್ರಕ್ಕೆ ವಹಿಸಲಾದ ಕಾಮಗಾರಿಗಳ ವಿಳಂಬ ಹಾಗೂ ವಾಕರಸಾಸಂ ಅಂಕೋಲಾ ಮತ್ತು ಶಿರಸಿ ಬಸ್‌ನಿಲ್ದಾಣಗಳ ದುಸ್ಥಿತಿ ಬಗ್ಗೆ ಜಿಲ್ಲಾಧಿಕಾರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಅಂಕೋಲಾ ಪಟ್ಟಣದ ರಸ್ತೆಗಳು ಮಣ್ಣಿನ ರಾಡಿಯಿಂದ ಕೂಡಿದ್ದು ಅದಕ್ಕೆ ಬಸ್‌ ನಿಲ್ದಾಣದಲ್ಲಿ ಹಾಕಲಾದ ಮಣ್ಣು ಹಾಗೂ ಅದು ಬಸ್ಸಿನ ಟಾಯರ್‌ ಮೂಲಕ ಪೇಟೆ ತುಂಬ ಹರಡುತ್ತಿರುವುದು ಕಾರಣವಾಗಿದೆ. ಶಾಸಕರು ಪ್ರತಿಭಟನೆ ಮಾಡಿದರೂ ಸಂಸ್ಥೆ ಅಧಿಕಾರಿಗಳಿಗೆ ಗೊತ್ತಾಗುವದಿಲ್ಲವೇ ಎಂದು ಪ್ರಶ್ನಿಸಿದರು. ಶಿರಸಿ ಬಸ್‌ ನಿಲ್ದಾಣ ಕೂಡ ಹಳತಾಗಿದೆ. ಇಲ್ಲಿ ತ್ಯಾಜ್ಯ ವಿಲೇವಾರಿ ಕೂಡ ಮಾಡುತ್ತಿಲ್ಲ. ನಗರಸಭೆಗೆ ಕಸ ವಿಲೇವಾರಿಯ ತೆರಿಗೆ ಹಣ ಕೂಡ ನೀಡುವದಿಲ್ಲ. ಕಸ ಉತ್ಪಾದಿಸುವ ನಿಲ್ದಾಣದೊಳಗಿನ ಅಂಗಡಿಗಳೇ ಕಾರಣವಾಗಿದ್ದರಿಂದ ಅವರಿಗೇ ಜವಬ್ದಾರಿ ನೀಡಬೇಕು ಎಂದು ಸೂಚಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ