ಆ್ಯಪ್ನಗರ

ಜನಹಿತ ಬಲಿಕೊಡುವ ಪಕ್ಷಾಂತರ ತಪ್ಪು

ಶಿರಸಿ : ಜನರ ಭಾವನೆಗೆ ವಿರುದ್ಧವಾಗಿ ಉಪಚುನಾವಣೆ ತಂದ ಅನರ್ಹ ಶಾಸಕರಿಗೆ ಚುನಾವಣೆಯಲ್ಲಿಮತದಾರರು ಉತ್ತರ ನೀಡಬೇಕು ಎಂದು ಮಾಜಿ ಸಚಿವ ಆರ್‌.ವಿ.ದೇಶಪಾಂಡೆ ಹೇಳಿದರು.

Vijaya Karnataka 21 Oct 2019, 5:00 am
ಶಿರಸಿ : ಜನರ ಭಾವನೆಗೆ ವಿರುದ್ಧವಾಗಿ ಉಪಚುನಾವಣೆ ತಂದ ಅನರ್ಹ ಶಾಸಕರಿಗೆ ಚುನಾವಣೆಯಲ್ಲಿಮತದಾರರು ಉತ್ತರ ನೀಡಬೇಕು ಎಂದು ಮಾಜಿ ಸಚಿವ ಆರ್‌.ವಿ.ದೇಶಪಾಂಡೆ ಹೇಳಿದರು.
Vijaya Karnataka Web defeat of the peopleless sacrifice is wrong
ಜನಹಿತ ಬಲಿಕೊಡುವ ಪಕ್ಷಾಂತರ ತಪ್ಪು


ಬನವಾಸಿಯಲ್ಲಿಭಾನುವಾರ ನಡೆದ ಬ್ಲಾಕ್‌ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಕಷ್ಟು ವರ್ಷದಿಂದ ಹಿಂದಿನಿಂದಲೂ ಪಕ್ಷಾಂತರ ಕಾರ್ಯ ನಡೆಯುತ್ತಿದೆ. ಆದರೆ ಅದು ಜನರು ಒಪ್ಪುವ ರೀತಿಯಲ್ಲಿ, ಉತ್ತಮ ಉದ್ದೇಶದಿಂದ ಕೂಡಿದ್ದರೆ ಪಕ್ಷಾಂತರ ತಪ್ಪಲ್ಲ. ಆದರೆ ಸ್ವಾರ್ಥ, ಅಧಿಕಾರಕ್ಕಾಗಿ ಜನಹಿತ ಬಲಿಕೊಟ್ಟು ಹೋಗುವುದು ತಪ್ಪು ಎಂದರು.

ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿಬನವಾಸಿ ಅಭಿವೃದ್ಧಿ ಪ್ರಾಧಿಕಾರ ಮಾಡಿ ಅನುದಾನ ನೀಡಿದ್ದೆವು. ಬನವಾಸಿಯಲ್ಲಿಕದಂಬೋತ್ಸವ ಪ್ರತಿವರ್ಷ ನಡೆಯುವಂತೆ ಸರಕಾರಿ ಆದೇಶ ಮಾಡಿಸಿದ್ದೆವು. ಅರಣ್ಯ ಅತಿಕ್ರಮಣದಾರರ ತಿರಸ್ಕೃತಗೊಂಡ ಅರ್ಜಿ ಪುನರ್‌ ಪರಿಶೀಲನೆಗೆ ಆದೇಶಿಸಿದ್ದೆವು ಎಂದರು. ಬನವಾಸಿಯನ್ನು ಶಿವಮೊಗ್ಗ ಜಿಲ್ಲೆಆನವಟ್ಟಿಗೆ ಸೇರಿಸುವ ಪ್ರಸ್ತಾವನೆ ಇದ್ದರೆ ಅದು ತಪ್ಪು. ತಾವು ಹೋರಾಟಕ್ಕೆ ಕೈಜೋಡಿಸುತ್ತೇವೆ ಎಂದರು.

ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌.ಘೋಟ್ನೇಕರ ಮಾತನಾಡಿ, ಅಡಕೆಗೆ ಕೊಳೆರೋಗ ಬಂದಾಗ ಕಾಂಗ್ರೆಸ್‌ ಸರಕಾರ ಪರಿಹಾರ ನೀಡಿತ್ತು. ಈ ಬಾರಿ ಉಂಟಾದ ಕೊಳೆ ರೋಗಕ್ಕೆ ಬಿಜೆಪಿ ಸರಕಾರ ಪರಿಹಾರ ನೀಡಲಿ, ಬಿಜೆಪಿಗೆ ತಾಕತ್ತಿದ್ದರೆ ರೈತರ ಸಾಲಮನ್ನಾ ಮಾಡಬೇಕು ಎಂದು ಆಗ್ರಹಿಸಿದರು. ಸರಕಾರ ಬೀಳಿಸಿದ ಅನರ್ಹ ಶಾಸಕರ ಹೆಜ್ಜೆ ತಪ್ಪು ಎಂದರು.

ಜಿಲ್ಲಾಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ, ತಮ್ಮ ಸ್ವಾರ್ಥಕ್ಕಾಗಿ ಪಕ್ಷದ್ರೋಹ ಮಾಡಿದವರಿಗೆ ತಕ್ಕ ಉತ್ತರ ನೀಡಬೇಕು ಎಂದರು. ಬನವಾಸಿಯನ್ನು ಶಿವಮೊಗ್ಗ ಜಿಲ್ಲೆಗೆ ಒಯ್ಯಲು ಬಿಡುವುದಿಲ್ಲ. ತಾಲೂಕು ಮಾಡಲು ಸಂಘಟಿತ ಪ್ರಯತ್ನ ಮಾಡಬೇಕು ಎಂದರು.

ಬನವಾಸಿ ಬ್ಲಾಕ್‌ ಅಧ್ಯಕ್ಷ ಸಿ.ಎಫ್‌.ನಾಯ್ಕ, ಪ್ರಮುಖರಾದ ಎಚ್‌.ಎಂ.ನಾಯ್ಕ , ಜಿಲ್ಲಾಯುವ ಕಾಂಗ್ರೆಸ್‌ ಅಧ್ಯಕ್ಷ ಸಂತೋಷ ಶೆಟ್ಟಿ, ಕೃಷ್ಣಾ ಹಿರೇಹಳ್ಳಿ, ಅಬ್ದುಲ ಮಜೀದ ಮಾತನಾಡಿದರು.

ಯುವ ಮುಖಂಡ ದೀಪಕ ದೊಡ್ಡೂರು, ಜಿ.ಪಂ. ಸದಸ್ಯ ಬಸವರಾಜ ದೊಡ್ಮನಿ, ತಾ.ಪಂ. ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಕೆ.ಜಿ.ನಾಗರಾಜ, ಸುನೀಲ ನಾಯಕ, ಅಬ್ಬಾಸ ತೋನ್ಸೆ, ರಮೇಶ ದುಬಾಶಿ, ಸೂರ್ಯಪ್ರಕಾಶ ಹೊನ್ನಾವರ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ