ಆ್ಯಪ್ನಗರ

ದೇಸಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಅವಶ್ಯ

ದಾಂಡೇಲಿ : ದೇಸಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಕೆಲಸ ಇನ್ನೂ ಹೆಚ್ಚು ಹೆಚ್ಚು ಆಗಬೇಕಿದೆ ಎಂದು ಧಾರವಾಡ ಕವಿವಿ ಕ್ರೀಡಾ ವಿಭಾಗದ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಎಂ.ಬಿ.ಪಾಟೀಲ ಹೇಳಿದರು.

Vijaya Karnataka 17 Oct 2019, 5:00 am
ದಾಂಡೇಲಿ : ದೇಸಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಕೆಲಸ ಇನ್ನೂ ಹೆಚ್ಚು ಹೆಚ್ಚು ಆಗಬೇಕಿದೆ ಎಂದು ಧಾರವಾಡ ಕವಿವಿ ಕ್ರೀಡಾ ವಿಭಾಗದ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಎಂ.ಬಿ.ಪಾಟೀಲ ಹೇಳಿದರು.
Vijaya Karnataka Web desi athletes need encouragement
ದೇಸಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಅವಶ್ಯ


ಅವರು ದಾಂಡೇಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನೇತೃತ್ವದಲ್ಲಿಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡ ಕವಿವಿ ಏಕವಲಯ ಅಂತರ್‌ ಕಾಲೇಜು ಪುರುಷ ಮತ್ತು ಮಹಿಳಾ ಕುಸ್ತಿ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.

ದಾಂಡೇಲಿ ಸರಕಾರಿ ಪದವಿ ಕಾಲೇಜಿನ ಕುಸ್ತಿ ಕ್ರೀಡಾಕೂಟ ಸಂಘಟನೆಯ ಅಚ್ಚುಕಟ್ಟುತನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ವಿದ್ಯಾರ್ಥಿಗಳು ಕ್ರೀಡೆಗಳತ್ತ ಹೆಚ್ಚು ಆಸಕ್ತಿ ವಹಿಸಬೇಕು. ಅಲ್ಲಿಯೂ ಹಲವಾರು ಅವಕಾಶಗಳಿವೆ ಎಂದರು.

ಅತಿಥಿಗಳಾಗಿದ್ದ ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌.ಘೋಟ್ನೇಕರ ಮಾತನಾಡಿ, ಹಿಂದೆ ಹಳಿಯಾಳದಲ್ಲಿಪ್ರತೀ ಹಳ್ಳಿಗಳಲ್ಲಿಗರಡಿ ಮನೆ ಇತ್ತು. ಆದರೆ ಅದು ಇಂದು ಆಧುನಿಕತೆಯ ಭರಾಟೆಯಲ್ಲಿಮಾಯವಾಗುತ್ತಿದೆ. ಯುವಜನರು ಕುಸ್ತಿಯಿಂದ ದೂರವಾಗುತ್ತಿದ್ದಾರೆ ಎಂದರು.

ವಿಶೇಷ ಆಮಂತ್ರಿತರಾದ ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟು ರಫಿಕ ಹೊಳಿಯವರನ್ನು ಸನ್ಮಾನಿಸಲಾಯಿತು.

ಅವರು ಮಾತನಾಡಿ, ಯಾವುದೇ ಸ್ಪರ್ಧೆ ಇರಲಿ. ಅಲ್ಲಿಗೆದ್ದಾಗ ಬೀಗಬಾರದು, ಸೋತಾಗ ಸೊರಗಬಾರದು. ಗುರಿ ಮುಟ್ಟಲು ನಿರಂತರ ಪ್ರಯತ್ನಿಸಬೇಕು. ಗುರಿ ಸಿಕ್ಕೇ ಸಿಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಎಂ.ಡಿ.ಒಕ್ಕುಂದ ಮಾತನಾಡಿ, ನಮ್ಮ ಕಾಲೇಜಿನಲ್ಲಿದೈಹಿಕ ಶಿಕ್ಷಣ ನಿರ್ದೇಶಕರಿಲ್ಲ. ಆದಾಗ್ಯೂ ಎರಡು ವರ್ಷಗಳಿಂದ ಕವಿವಿ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ಆಯೋಜಿಸುತ್ತಿದ್ದೇವೆ ಎಂದರು.

ವೇದಿಕೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಸಯ್ಯದ್‌ ತಂಗಳ, ಯಾಸ್ಮಿನ್‌ ಕಿತ್ತೂರ, ಆದಂ ದೇಸೂರ, ಯು.ಎಸ್‌. ಪಾಟೀಲ, ಎಸ್‌.ವೈ.ಹಾದಿಮನಿ, ತಹಸೀಲ್ದಾರ ಶೈಲೇಶ ಪರಮಾನಂದ, ಡಾ.ಸಯ್ಯದ್‌ ಜಾಹೇದ ಅಲಿ ಮುಂತಾದವರಿದ್ದರು. ಎನ್‌ಎಸ್‌ಎಸ್‌ ಸಂಯೋಜಕ ಮಂಜುನಾಥ ಚಲವಾದಿ ಸಂದೇಶ ವಾಚಿಸಿದರು. ಕ್ರೀಡಾಕೂಟದ ಸಂಘಟನಾ ಕಾರ್ಯದರ್ಶಿ ಡಾ. ನಾಸೀರ್‌ ಅಹಮ್ಮದ್‌ ಜಂಗೀಬಾಯಿ ಸ್ವಾಗತಿಸಿ, ನಿರೂಪಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ