ಆ್ಯಪ್ನಗರ

ಅಭಿವೃದ್ಧಿ ಇನ್ನೂ ಆಗಬೇಕ್ರಿ

ಶಿರಸಿ :ಮೂರು ದಶಕಗಳ ಹಿಂದೆ ರಾಜ್ಯಮಟ್ಟದ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯವೇ ತುರುಸಿನಿಂದ ನಡೆದಿದ್ದ ವಿಶಾಲವಾದ ಕ್ರೀಡಾಂಗಣ ಶಿರಸಿ ನಗರದಲ್ಲಿದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಅದರ ಅಭಿವೃದ್ಧಿಯಾಗದೇ ಸೊರಗುತ್ತಿದ್ದಂತೆ ಭಾಸವಾಗುತ್ತದೆ. ನಗರದ ಹುಬ್ಬಳ್ಳಿ ರಸ್ತೆ ಪಕ್ಕದಲ್ಲಿ, ಕಾಲೇಜುಗಳ ಸಮುಚ್ಚಯದ ಸಮೀಪದಲ್ಲಿ ಈ ಕ್ರೀಡಾಂಗಣವಿದ್ದು ಶ್ರೀಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣವೆಂದು ನಾಮಕರಣಗೊಂಡಿದೆ. ಜಿಲ್ಲಾ ಮಟ್ಟದ ಸಕಲ ಸೌಲಭ್ಯಗಳನ್ನು ಕಲ್ಪಿಸಿ ಸುಸಜ್ಜಿತ ಕ್ರೀಡಾಂಗಣವಾಗಿ ಮಾರ್ಪಡಿಸುವ ಎಲ್ಲ ಅವಕಾಶಗಳೂ ಇಲ್ಲಿವೆ.

Vijaya Karnataka 30 Aug 2018, 5:00 am
ಶಿರಸಿ :ಮೂರು ದಶಕಗಳ ಹಿಂದೆ ರಾಜ್ಯಮಟ್ಟದ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯವೇ ತುರುಸಿನಿಂದ ನಡೆದಿದ್ದ ವಿಶಾಲವಾದ ಕ್ರೀಡಾಂಗಣ ಶಿರಸಿ ನಗರದಲ್ಲಿದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಅದರ ಅಭಿವೃದ್ಧಿಯಾಗದೇ ಸೊರಗುತ್ತಿದ್ದಂತೆ ಭಾಸವಾಗುತ್ತದೆ.
Vijaya Karnataka Web development can still happen
ಅಭಿವೃದ್ಧಿ ಇನ್ನೂ ಆಗಬೇಕ್ರಿ

ನಗರದ ಹುಬ್ಬಳ್ಳಿ ರಸ್ತೆ ಪಕ್ಕದಲ್ಲಿ, ಕಾಲೇಜುಗಳ ಸಮುಚ್ಚಯದ ಸಮೀಪದಲ್ಲಿ ಈ ಕ್ರೀಡಾಂಗಣವಿದ್ದು ಶ್ರೀಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣವೆಂದು ನಾಮಕರಣಗೊಂಡಿದೆ. ಜಿಲ್ಲಾ ಮಟ್ಟದ ಸಕಲ ಸೌಲಭ್ಯಗಳನ್ನು ಕಲ್ಪಿಸಿ ಸುಸಜ್ಜಿತ ಕ್ರೀಡಾಂಗಣವಾಗಿ ಮಾರ್ಪಡಿಸುವ ಎಲ್ಲ ಅವಕಾಶಗಳೂ ಇಲ್ಲಿವೆ.

ಪ್ರಸ್ತುತ ಮಳೆಗಾಲದ ಅವಧಿಯಲ್ಲಿ ಶಿಕ್ಷ ಣ ಇಲಾಖೆಯ ವೇಳಾಪಟ್ಟಿಯ ಸರಣಿಯಂತೆ ಇಲ್ಲಿಯೂ ಶಾಲಾಕಾಲೇಜುಗಳ ಅನೇಕ ಕ್ರೀಡಾಕೂಟಗಳು ಇಲ್ಲಿಯೂ ನಡೆಯುತ್ತಿವೆ. ಉಳಿದೆಡೆಗಳಷ್ಟು ಜಾಸ್ತಿ ಅಲ್ಲದಿದ್ದರೂ ಇಲ್ಲಿಯೂ ಅಲ್ಲಲ್ಲಿ ನಿಂತ ನೀರಿನ ಮಧ್ಯೆಯೇ ಆಟೋಟ ಸ್ಪರ್ಧೆಗಳು ನಡೆಯುತ್ತಿರುತ್ತವೆ. ವಿದ್ಯಾರ್ಥಿಗಳಿಗೆ ಆತಂಕವೂ ಇದ್ದೇಇದೆ.

ಟ್ರ್ಯಾಕ್‌ ಕೊರತೆ :

ಕ್ರೀಡಾಂಗಣದ ಡ್ರೈನೇಜ್‌ ವ್ಯವಸ್ಥೆ ಇನ್ನಷ್ಟು ವ್ಯವಸ್ಥಿತಗೊಳಿಸಬೇಕು, ಆಟೋಟ ಸ್ಪರ್ಧೆಗಳಿಗೆ ತೊಂದರೆತೊಡಕು ಆಗದಂತೆ ಗಟ್ಟಿಯಾದ ಟ್ರ್ಯಾಕ್‌ಗಳ ನಿರ್ಮಾಣವಾಗಬೇಕು ಎನ್ನುವುದು ಈ ಸ್ಟೇಡಿಯಮ್‌ನ ಬಹುಮುಖ್ಯ ಬೇಡಿಕೆಯಾಗಿದೆ.

ಸಿಂಥೆಟಿಕ್‌ ಟ್ರ್ಯಾಕ್‌ ಆಗಬೇಕೆಂಬ ಆಗ್ರಹವಿದ್ದರೂ ಅದರ ನಿರ್ಮಾಣ ಮತ್ತು ನಿರ್ವಹಣೆ ಕಷ್ಟಕರವೆಂಬ ಅಭಿಪ್ರಾಯವಿದ್ದು ಸಾದಾ ಟ್ರ್ಯಾಕ್‌ನ್ನೇ ಕೂಡಲೇ ಬಲಗೊಳಿಸಬೇಕು ಎನ್ನುವ ಒತ್ತಾಯದ ಮಾತುಗಳು ಆಗಾಗ ವ್ಯಕ್ತವಾಗುತ್ತಲೇ ಇವೆ.

ಇರುವ ಸೌಲಭ್ಯಗಳು :

ಈ ಸ್ಟೇಡಿಯಂಗೆ ವ್ಯವಸ್ಥಿತ ಪೆವಿಲಿಯನ್‌, ವೃತ್ತಾಕಾರದಲ್ಲಿ ಸಿಮೆಂಟ್‌ ಮೆಟ್ಟಿಲುಗಳು, ಒಳಗಡೆ ಜಿಮ್‌, ಶೌಚಖಾನೆಗಳು ಮತ್ತಿತರ ಸೌಲಭ್ಯಗಳು ತಕ್ಕಮಟ್ಟಿಗೆ ಇವೆ. ಕ್ರೀಡಾಂಗಣದ ಪಕ್ಕದಲ್ಲಿಯೇ ಮೂರು ಕೋಟಿರೂ. ವೆಚ್ಚದಲ್ಲಿ ಈಜುಕೊಳ ನಿರ್ಮಾಣವಾಗುತ್ತಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ