ಆ್ಯಪ್ನಗರ

ಪರಿಸರದ ಜತೆ ಅಭಿವೃದ್ಧಿಯೂ ಅವಶ್ಯ

ಅಂಕೋಲಾ : ನಮಗೆ ಪರಿಸರದ ಜತೆ ಅಭಿವೃದ್ಧಿಯು ಅವಶ್ಯಕವಾಗಿದೆ. ಮನುಷ್ಯ ಅಭಿವೃದ್ಧಿಶೀಲನಾದರೆ ಮಾತ್ರ ಮುಂದೆ ಸಾಗುವ ಪ್ರಯತ್ನ ಮಾಡಬಲ್ಲ ಎಂದು ಅಮದಳ್ಳಿ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ರೂಪಾ ಭಟ್‌ ಅಭಿಪ್ರಾಯ ಪಟ್ಟರು.

Vijaya Karnataka 5 Feb 2019, 5:00 am
ಅಂಕೋಲಾ : ನಮಗೆ ಪರಿಸರದ ಜತೆ ಅಭಿವೃದ್ಧಿಯು ಅವಶ್ಯಕವಾಗಿದೆ. ಮನುಷ್ಯ ಅಭಿವೃದ್ಧಿಶೀಲನಾದರೆ ಮಾತ್ರ ಮುಂದೆ ಸಾಗುವ ಪ್ರಯತ್ನ ಮಾಡಬಲ್ಲ ಎಂದು ಅಮದಳ್ಳಿ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ರೂಪಾ ಭಟ್‌ ಅಭಿಪ್ರಾಯ ಪಟ್ಟರು.
Vijaya Karnataka Web KWR-4ANK1
ಸತ್ಯಾಗ್ರಹ ಸ್ಮಾರಕ ವಿದ್ಯಾಲಯ ಶೆಟಗೇರಿಯ 57ನೇ ವರ್ಷದ ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ತಿರುಮಲ ನಾಗರಾಜ ನಾಯಕ ಪ್ರಥಮ ಬಹುಮಾನ ಪಡೆದುಕೊಂಡರು.


ಸತ್ಯಾಗ್ರಹ ಸ್ಮಾರಕ ವಿದ್ಯಾಲಯ ಶೆಟಗೇರಿಯ 57ನೇ ವರ್ಷದ ಜಿಲ್ಲಾ ಮಟ್ಟದ 'ಪರಿಸರ ಸಂರಕ್ಷ ಣೆಗೆ ಹೆಚ್ಚು ಒತ್ತು ನೀಡುವದು ದೇಶದ ಅಭಿವೃದ್ಧಿಗೆ ಮಾರಕ' ಎಂಬ ವಿಷಯದ ಮೇಲೆ ಚರ್ಚಾ ಸ್ಪರ್ಧೆಯ ಅಧ್ಯಕ್ಷ ತೆವಹಿಸಿ ಅವರು ಮಾತನಾಡಿದರು.

ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಉಪನ್ಯಾಸಕ ನಾಗರಾಜ ದಿವಗಿಕರ್‌ ಮಾತನಾಡಿ, ಈ ಶಾಲೆ 56 ವರ್ಷಗಳಿಂದ ಜಿಲ್ಲಾಮಟ್ಟದ ಚರ್ಚಾ ಸ್ಪರ್ಧೆ ಆಯೋಜಿಸುತ್ತ ಬಂದಿರುವದು ಮಾದರಿಯಾಗಿದೆ. ಸಂಸ್ಥೆಯು ಹಾಕಿಕೊಟ್ಟ ಸಂಪ್ರದಾಯವನ್ನು ಪಾಲಿಸಿ ಉತ್ತಮ ಭಾಷಣಕಾರರಾಗಿ ವಿದ್ಯಾರ್ಥಿಗಳನ್ನು ರೂಪಿಸಲು ಸಹಾಯಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಸ.ಹಿ.ಪ್ರಾ. ಶಾಲೆ ಮುಖ್ಯಾಧ್ಯಾಪಕ ಗೌರೀಶ ನಾಯಕ ಮಾತನಾಡಿ, ಮಕ್ಕಳಲ್ಲಿ ಮಾತನಾಡುವ ಹಾಗೂ ವಿಷಯ ಸಂಗ್ರಹಿಸುವ ಚಾಣಾಕ್ಷ ತನ ಬೆಳೆಯಬೇಕು. ಇದರಿಂದ ಜ್ಞಾನಬಂಡಾರ ವಿಸ್ತಾರವಾಗುತ್ತದೆ ಎಂದರು.

ಶಿಕ್ಷ ಕ ರಾಜೇಶ ನಾಯಕ ಸೂರ್ವೆ ಮಾತನಾಡಿದರು. ಸತ್ಯಾಗ್ರಹ ಸ್ಮಾರಕ ವಿದ್ಯಾಲಯದ ಮುಖ್ಯಾಧ್ಯಾಪಕ ಎನ್‌.ವಿ.ರಾಠೋಡ ಸ್ವಾಗತಿಸಿದರು. ಶಿಕ್ಷ ಕ ಎಂ.ಎಸ್‌.ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ಶಾಂತಲಾ ನಾಯಕ ಬಹುಮಾನಿತರ ಯಾದಿ ಓದಿದರು. ರಾಜು ಶೇಡಗೇರಿ ವಂದಿಸಿದರು.

ಚರ್ಚಾಸ್ಪರ್ಧೆಯಲ್ಲಿ ತಿರುಮಲ ನಾಗರಾಜ ನಾಯಕ (ಪ್ರ), ವೀಣಾ ಮಾಸ್ತಿ ನಾಯ್ಕ (ದ್ವಿ), ಸೃಷ್ಠಿ ಎಸ್‌. ನಾಯಕ ತೃತೀಯ ಬಹುಮಾನ ಪಡೆದುಕೊಂಡರು.

ನಿಶ್ಚಲ್‌ ನಾಯ್ಕ. ಯಶಸ್ವಿನಿ ನಾಯ್ಕ. ಶಾಲಿನಿ ಗೌಡಾ. ಭುವನ ನಾಯಕ ಮತ್ತು ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು. ರೋಲಿಂಗ್‌ ಶೀಲ್ಡನ್ನು ಸತ್ಯಾಗ್ರಹ ಸ್ಮಾರಕ ವಿದ್ಯಾಲಯ ಶೆಟಗೇರಿ ತನ್ನದಾಗಿಸಿಕೊಂಡಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ