ಆ್ಯಪ್ನಗರ

ಮನೆ ನಿರ್ಮಾಣ ಮಂಜೂರಿಗೆ ಅಡ್ಡಿ, ಅವಲಂಬಿಸಿದ ಕಾರ್ಮಿಕರು ಅತಂತ್ರ

ಶಿರಸಿ : ರಾಜ್ಯದಲ್ಲಿಮೂರು ಬಾರಿ ಸರಕಾರ ಬದಲಾದರೂ, ಜಿಲ್ಲಾಉಸ್ತುವಾರಿ ಸಚಿವರು ಬೇರೆ ಆದರೂ ಉತ್ತರ ಕನ್ನಡ ಜಿಲ್ಲೆಯಲ್ಲಿಕಳೆದ ನಾಲ್ಕೈದು ವರ್ಷಗಳಿಂದ ಕಾಡುತ್ತಿರುವ ಇ-ಸ್ವತ್ತು ಸಮಸ್ಯೆಗೆ ಇನ್ನೂ ಪರಿಹಾರ ದೊರಕಿಲ್ಲ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.

Vijaya Karnataka 23 Feb 2020, 5:00 am
ಶಿರಸಿ : ರಾಜ್ಯದಲ್ಲಿಮೂರು ಬಾರಿ ಸರಕಾರ ಬದಲಾದರೂ, ಜಿಲ್ಲಾಉಸ್ತುವಾರಿ ಸಚಿವರು ಬೇರೆ ಆದರೂ ಉತ್ತರ ಕನ್ನಡ ಜಿಲ್ಲೆಯಲ್ಲಿಕಳೆದ ನಾಲ್ಕೈದು ವರ್ಷಗಳಿಂದ ಕಾಡುತ್ತಿರುವ ಇ-ಸ್ವತ್ತು ಸಮಸ್ಯೆಗೆ ಇನ್ನೂ ಪರಿಹಾರ ದೊರಕಿಲ್ಲ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.
Vijaya Karnataka Web disruption of home construction sanction dependent on dependent workers
ಮನೆ ನಿರ್ಮಾಣ ಮಂಜೂರಿಗೆ ಅಡ್ಡಿ, ಅವಲಂಬಿಸಿದ ಕಾರ್ಮಿಕರು ಅತಂತ್ರ


ಸರಕಾರದ ಇ-ಸ್ವತ್ತು ತಂತ್ರಾಂಶದಿಂದಾಗಿ ಹೊಸದಾಗಿ ಮನೆಗಳ ನಿರ್ಮಾಣಕ್ಕೆ ಹಾಗೂ ನವೀಕರಣಕ್ಕೆ ಮಂಜೂರಿ ಪಡೆಯಲು ತೀವ್ರ ತೊಡಕು ಉಂಟಾಗುತ್ತಿದೆ. ಇದರಿಂದಾಗಿ ಈ ಕ್ಷೇತ್ರವನ್ನು ಅವಲಂಬಿಸಿದ ಕಾರ್ಮಿಕರು ತುಂಬಾ ತೊಂದರೆ ಎದುರಿಸುವಂತಾಗಿದೆ.

ಸರಕಾರದ ನಾನಾ ಸಚಿವರು ಹಾಗೂ ಉನ್ನತ ಮಟ್ಟದ ಅಧಿಕಾರಿಗಳನ್ನು ಈ ಕುರಿತು ಪದೇಪದೇ ವಿನಂತಿಸಿಕೊಂಡರೂ ತಂತ್ರಾಂಶ ತಿದ್ದುಪಡಿಗೆ ಅಗತ್ಯ ಕ್ರಮ ವಾಗದೇ ಇರುವುದರಿಂದ ಸಾರ್ವಜನಿಕರು ಹಾಗೂ ಕೆಲಸಗಾರರು ಪರದಾಡುವಂತೆ ಆಗಿದೆ.

ಕಚೇರಿಗೆ ಅಲೆದಾಟ... ತಮ್ಮ ನಿವೇಶನ ಹಾಗೂ ಮನೆಗಳಿಗೆ ಸಂಬಂಧಿಸಿದ ಎಲ್ಲದಾಖಲೆಗಳನ್ನು ಹೊಂದಿರುವ ಸಾರ್ವಜನಿಕರು ಇಂಥ ಮನೆಗಳ ನವೀಕರಣ, ಮರು ನಿರ್ಮಾಣಕ್ಕಾಗಿ ನಗರಸಭೆ ಪಟ್ಟಣ ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಅನುಮೋದನೆ ಕೋರಿ ಅರ್ಜಿ ಸಲ್ಲಿಸಿ ಹಲವಾರು ದಿನಗಳಿಂದ ಕಾಯುತ್ತಿದ್ದಾರೆ.

ಆದರೆ ನಗರ ಯೋಜನಾ ಪ್ರಾಧಿಕಾರ ಸೇರಿದಂತೆ ನಗರ ಸಂಸ್ಥೆಗಳು ಇ-ಸ್ವತ್ತು ತಂತ್ರಾಂಶದ ಫಾರಂ ನಂ.3 ಬಗ್ಗೆ ಹೇಳುತ್ತಾ ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ ಎನ್ನುತ್ತಾರೆ. ಈ ತಂತ್ರಾಂಶದ ಪ್ರಕಾರ ಆಯಾ ಬಡಾವಣೆಗಳು ನಿಶ್ಚಿತ ಲೇಔಟ್‌ ಹೊಂದಿರುವ ಬಗ್ಗೆ ದಾಖಲೆ ಒದಗಿಸಬೇಕಾಗುತ್ತದೆ. ಅಂತಹ ದಾಖಲೆಗಳು ಇಲ್ಲದೆ ಸಾರ್ವಜನಿಕರು ಕಚೇರಿ ಅಲೆದಾಟ ಮಾಡುವಂತಾಗಿದೆ.

ಮಂಜೂರಿ ಕುಂಠಿತ... ಇ-ಸ್ವತ್ತು ತಂತ್ರಾಂಶ ಬಂದ ನಂತರದಲ್ಲಿಜಿಲ್ಲೆಯಲ್ಲಿನಾನಾ ಕಡೆಗಳಲ್ಲಿಮನೆಗಳಿಗೆ ಮರು ನಿರ್ಮಾಣ ನವೀಕರಣಕ್ಕೆ ಮಂಜೂರಿ ಪ್ರಮಾಣ ತೀರಾ ಕುಂಠಿತವಾಗಿದೆ. ಇದರಿಂದಾಗಿ ಸಾವಿರಾರು ಅರ್ಜಿಗಳು ಗ್ರಾಮೀಣ ಹಾಗೂ ನಗರ ವ್ಯಾಪ್ತಿಯಲ್ಲಿಹಾಗೆಯೇ ಬಾಕಿ ಉಳಿದುಕೊಂಡಿವೆ. ಅನಿವಾರ್ಯವಾಗಿ ಮನೆ ಕಟ್ಟಿಕೊಳ್ಳ ಬೇಕಾದವರು ಪರದಾಡುವಂಥ ಸ್ಥಿತಿ ನಿರ್ಮಾಣವಾಗಿದೆ.

ದುಡಿಯುವವರಿಗೆ ಕೆಲಸವಿಲ್ಲ... ಇ-ಸ್ವತ್ತು ಸಮಸ್ಯೆ ಪರಿಣಾಮವಾಗಿ ಜಿಲ್ಲೆಯಲ್ಲಿಮನೆಗಳ ನಿರ್ಮಾಣಕ್ಕೆ ಮಂಜೂರಾತಿ ಸಿಗುತ್ತಿಲ್ಲ. ಇದರಿಂದಾಗಿ ಹೊಸದಾಗಿ ಮನೆಗಳು ನಿರ್ಮಾಣ ಆಗುತ್ತಿಲ್ಲ. ಮನೆಗಳನ್ನು ಕಟ್ಟುವವರೇ ಇಲ್ಲವೆಂದಾದರೆ ಅದಕ್ಕೆ ಸಂಬಂಧಿಸಿದ ಕೆಲಸಗಾರರು ಏನು ಮಾಡಬೇಕು..? ಇಂಥ ಸಾವಿರಾರು ಮಂದಿ ದುಡಿಯಲು ಸಿದ್ಧರಿದ್ದರೂ ಕೆಲಸವಿಲ್ಲದೆ ಪರಿತಪಿಸುವಂತಾಗಿದೆ. ಅನ್ನ ನೀಡುವ ಉದ್ಯೋಗಕ್ಕೆ ಕುತ್ತು ಬಂದಂತಾಗಿದೆ.

ಅಧಿಕಾರಿಶಾಹಿ ಅಡ್ಡಿ.. ಈ ಮಧ್ಯೆ ಇ-ಸ್ವತ್ತು ತಂತ್ರಾಂಶದಿಂದ ಉತ್ತರ ಕನ್ನಡ ಜಿಲ್ಲೆಸೇರಿದಂತೆ ಮಲೆನಾಡು ಪ್ರದೇಶಕ್ಕೆ ವಿನಾಯಿತಿ ನೀಡಬೇಕೆಂಬ ಬೇಡಿಕೆ ಕಳೆದ ಸರಕಾರದ ಅವಧಿಯಲ್ಲಿಯೇ ಪ್ರಬಲವಾಗಿ ಮಂಡನೆಯಾಗಿದೆ. ಆಗ ಪ್ರತಿಪಕ್ಷದಲ್ಲಿದ್ದ ಬಿಜೆಪಿಯವರು ಈ ಭಾಗದಲ್ಲಿಈ ಕುರಿತು ಪ್ರತಿಭಟನೆ ನಡೆಸಿದ್ದಾರೆ. ಆದರೆ ಈಗ ಬಿಜೆಪಿಯವರೇ ಆಡಳಿತ ಪಕ್ಷದವರಾಗಿದ್ದಾರೆ. ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರದಲ್ಲಿಸಂಸದ ಅನಂತಕುಮಾರ ಹೆಗಡೆ ನೇತೃತ್ವದಲ್ಲಿಮೂರು ತಿಂಗಳ ಹಿಂದೆ ಮುಖ್ಯಮಂತ್ರಿಯನ್ನು ಭೇಟಿಯಾಗಿ ಇದೂ ಸೇರಿದಂತೆ ಜಿಲ್ಲೆಯ ಪ್ರಮುಖ ಸಮಸ್ಯೆಗಳಪರಿಹಾರಕ್ಕೆ ಮನವಿಯನ್ನೂ ಮಾಡಲಾಗಿದೆ. ಜಿಲ್ಲೆಯ ಇ-ಸ್ವತ್ತು ಸಮಸ್ಯೆ ಪರಿಹಾರಕ್ಕೆ ನಿಯಮಾವಳಿ ಸರಳೀಕರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ ಹೇಳಿದ್ದರೂ ಇದುವರೆಗೂ ಕ್ರಮ ಮಾತ್ರ ಮರೀಚಿಕೆಯಾಗಿದೆ.ಅದಕ್ಕೆ ಅಧಿಕಾರಶಾಹಿ ಅಡ್ಡಿಯಾಗಿದೆ ಎಂದು ಅನೇಕರು ದೂರುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ