ಆ್ಯಪ್ನಗರ

ನೆರೆ ಸಂತ್ರಸ್ತರಿಗೆ ಸಾಮಗ್ರಿ ವಿತರಣೆ

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯಲ್ಲಿ ನೆರೆ ಹಾನಿಯಿಂದ ಕಂಗಾಲಾಗಿರುವ ಸಂತ್ರಸ್ತರಿಗೆ ಜೆಸಿಐ ಸಂಸ್ಥೆ ಕೊಡುಗೆ ಮೂಲಕ ಕಣ್ಣೀರು ಒರೆಸಲು ಧಾವಿಸಿ ಬಂದು, ಕೊಡುಗೆ ಪ್ರಕಟಿಸಿರುವುದು ಮಾದರಿಯಾಗಿದೆ ಎಂದು ವಾಸರಕುದ್ರಗಿ ಗ್ರಾ.ಪಂ. ಉಪಾಧ್ಯಕ್ಷ ಪ್ರದೀಪ ನಾಯಕ ಹೇಳಿದರು.

Vijaya Karnataka 19 Aug 2019, 5:00 am
ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯಲ್ಲಿ ನೆರೆ ಹಾನಿಯಿಂದ ಕಂಗಾಲಾಗಿರುವ ಸಂತ್ರಸ್ತರಿಗೆ ಜೆಸಿಐ ಸಂಸ್ಥೆ ಕೊಡುಗೆ ಮೂಲಕ ಕಣ್ಣೀರು ಒರೆಸಲು ಧಾವಿಸಿ ಬಂದು, ಕೊಡುಗೆ ಪ್ರಕಟಿಸಿರುವುದು ಮಾದರಿಯಾಗಿದೆ ಎಂದು ವಾಸರಕುದ್ರಗಿ ಗ್ರಾ.ಪಂ. ಉಪಾಧ್ಯಕ್ಷ ಪ್ರದೀಪ ನಾಯಕ ಹೇಳಿದರು.
Vijaya Karnataka Web KWR-17ANK2


ಅವರು ಜೂಗ, ಕರ್ಕಿತುರಿ, ಶೇಡಿಕಟ್ಟ ಮೋಟನ್‌ ಕುರ್ವಾ ಪ್ರದೇಶಗಳಲ್ಲಿ ನೆರೆ ಸಂತ್ರಸ್ತರಿಗೆ ಜೆಸಿಐ ಸಂಸ್ಥೆಯವರು ತಂದಿರುವ ಸಾಮಾನು ಸರಂಜಾಮುಗಳನ್ನು ವಿತರಿಸಿ ಅವರು ಮಾತನಾಡಿದರು.

ತಾಲೂಕಿನ 33 ಹಳ್ಳಿಗಳು ನೆರೆಯಿಂದ ತತ್ತರಿಸಿದ ಸಂದರ್ಭದಲ್ಲಿ ಜೆಸಿಐ ಸಂಸ್ಥೆ ಸಹಕಾರ ನೀಡಿದೆ. ಜೆಸಿಐ ವಲಯಾಧ್ಯಕ್ಷ ಅಶೋಕ್‌ ಚುಂತರ್‌ ಅವರ ತಂಡ ಸುಳ್ಯ, ಭಟ್ಕಳ, ಕುಂದಾಪುರದಿಂದ ಸಂಗ್ರಹಿಸಿದ ಸಾಮಗ್ರಿಗಳನ್ನು ಜನರಿಗೆ ವಿತರಿಸಿರುವುದು ಶ್ಲಾಘನೀಯವಾದುದು ಎಂದರು.

ಸಾಮಗ್ರಿ ವಿತರಿಸಿದ ಜೆಸಿಐ ಅಧ್ಯಕ್ಷ ಅಶೋಕ್‌ ಚುಂತರ್‌ ಮಾತನಾಡಿ, ಮನುಷ್ಯರು ತೊಂದರೆಯಲ್ಲಿದ್ದಾಗ ಇನ್ನೊಬ್ಬರು ಸಹಾಯ ಮಾಡುವುದು ಧರ್ಮ. ಯಾವುದೇ ವ್ಯಕ್ತಿಗಳ ಸಂತೋಷಕೂಟದಲ್ಲಿ ಪಾಲ್ಗೊಳ್ಳುವುದಕ್ಕಿಂತ ಕಷ್ಟಕಾಲದಲ್ಲಿ ನೆರವಾಗಬೇಕು. ನಮಗೆ ಜೆಸಿಐ ಸಂಸ್ಥೆ ಸೇವಾ ಮನೋಭಾವನೆಯನ್ನು ಕಲಿಸಿದೆ ಎಂದರು.

ತಾಲೂಕಿನ ವಾಸರೆ, ಕುದ್ರಿಗೆ, ಕೊಡ್ಸಣಿ, ಆಂದ್ಲೆ, ಜೂಗ, ಕರ್ಕಿತುರಿ, ಮೋಟನ್‌ ಕುರ್ವೆ, ಶೇಡಿಕಟ್ಟಾ, ಬಳಲೆ ಭಾಗಗಳಲ್ಲಿ ನೆರೆ ಸಂತ್ರಸ್ತರಿಗೆ ದಿನನಿತ್ಯದ ಬಳಕೆಯ ವಸ್ತುಗಳನ್ನು ಪೂರೈಸಿದರು.

ತಾ.ಪಂ. ಅಧ್ಯಕ್ಷೆ ಸುಜಾತಾ ಗಾಂವಕರ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಘು ಕಾಕರಮಠ, ಕಾರ್ಯದರ್ಶಿ ಸುಭಾಷ್‌ ಕಾರೇಬೈಲ್‌, ತಾಪಂ ಸದಸ್ಯೆ ಶಾಂತಿ ಆಗೇರ, ವಾಸರ್‌ ಕುದ್ರಿಗೆ, ಮೊಗಟಾ ಉಪಾಧ್ಯಕ್ಷ ದೇವಾನಂದ ನಾಯಕ, ಜೆಸಿಐ ವಲಯ ಉಪಾಧ್ಯಕ್ಷ ಜಬ್ಬರ್‌ ಬಟ್ಕಳ, ಕುಂದಾಪುರ ಸಿಟಿ ಜೆಸಿಐ ಸ್ಥಾಪಕ ಹುಸೇನ ಹೈಕಾಡಿ, ಭಟ್ಕಳ ಜೆಸಿಐ ಸದಸ್ಯರಾದ ಸುರೇಶ್‌ ಪೂಜಾರಿ, ಈಶ್ವರ್‌ ನಾಯ್ಕ, ಜಗದೀಶ್‌ ಮೊಗವೀರ ಸುಳ್ಯ, ಯೋಗೀಶ್‌ ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ