ಆ್ಯಪ್ನಗರ

ಅಡುಗೆ ಅನಿಲ ಕಿಟ್‌ ವಿತರಣೆ

ಜೊಯಿಡಾ: ಈ ಹಿಂದೆ ಗ್ಯಾಸ್‌ ಸಂಪರ್ಕಕ್ಕಾಗಿ 15 ರಿಂದ 20 ಸಾವಿರ ರೂ. ನೀಡುವಂತ ಪರಿಸ್ಥಿತಿ ಇತ್ತು. ಇಂತಹ ಸಂದರ್ಭದಲ್ಲಿಪ್ರಧಾನಿ ನರೇಂದ್ರ ಮೋದಿಯವರು ಉಜ್ವಲಾ ಯೋಜನೆಯಡಿ 9 ಕೋಟಿ ಬಡವರಿಗೆ ಉಚಿತವಾಗಿ ಗ್ಯಾಸ್‌ ಸಿಲಿಂಡರ್‌ ಕಿಟ್‌ಗಳನ್ನು ನೀಡಿದ್ದಾರೆ ಎಂದು ಶಾಸಕ ಸುನೀಲ ಹೆಗಡೆ ಹೇಳಿದರು.

Vijaya Karnataka 24 Oct 2019, 5:00 am
ಜೊಯಿಡಾ: ಈ ಹಿಂದೆ ಗ್ಯಾಸ್‌ ಸಂಪರ್ಕಕ್ಕಾಗಿ 15 ರಿಂದ 20 ಸಾವಿರ ರೂ. ನೀಡುವಂತ ಪರಿಸ್ಥಿತಿ ಇತ್ತು. ಇಂತಹ ಸಂದರ್ಭದಲ್ಲಿಪ್ರಧಾನಿ ನರೇಂದ್ರ ಮೋದಿಯವರು ಉಜ್ವಲಾ ಯೋಜನೆಯಡಿ 9 ಕೋಟಿ ಬಡವರಿಗೆ ಉಚಿತವಾಗಿ ಗ್ಯಾಸ್‌ ಸಿಲಿಂಡರ್‌ ಕಿಟ್‌ಗಳನ್ನು ನೀಡಿದ್ದಾರೆ ಎಂದು ಶಾಸಕ ಸುನೀಲ ಹೆಗಡೆ ಹೇಳಿದರು.
Vijaya Karnataka Web distribution of cooking gas kit
ಅಡುಗೆ ಅನಿಲ ಕಿಟ್‌ ವಿತರಣೆ

ಮಂಗಳವಾರ ಜೊಯಿಡಾದಲ್ಲಿನಡೆದ ಉಜ್ವಲಾ ಗ್ಯಾಸ್‌ ಸಿಲಿಂಡರ್‌ ವಿತರಣಾ ಕಾರ್ಯಕ್ರಮದಲ್ಲಿಫಲಾನುಭವಿಗಳಿಗೆ ಗ್ಯಾಸ್‌ ವಿತರಿಸಿ ಮಾತನಾಡಿದರು. ಫಲಾನುಭವಿಗಳು ಇದರ ಸದುಪಯೋಗ ಪಡೆದು, ಹೊಗೆ ಮುಕ್ತವಾಗಿ ಅಡುಗೆ ತಯಾರಿಸಿ ಆರೋಗ್ಯದಿಂದಿರಬೇಕು ಎಂದರು. ಭಾರತೀಯ ಸಂಸ್ಕೃತಿಯನ್ನು ಇಡಿ ಜಗತ್ತಿಗೆ ತಿಳಿಸುವ ಕಾರ್ಯವನ್ನು ಮೋದಿ ಮಾಡುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿಜೊಯಿಡಾ ತಾಲೂಕಾಧ್ಯಕ್ಷ ತುಕಾರಾಮ ಮಾಂಜ್ರೇಕರ್‌, ಹಳಿಯಾಳ ಬಿಜೆಪಿ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ ಪ್ರಮುಖರಾದ ವಾಣಿ ಪೈ, ಸುಬ್ರಾಯ ಹೆಗಡೆ, ಸಂತೋಷ ಸಾವಂತ, ಅಂಕಿತಾ ಗಾವಡಾ, ಅನೀಲ ಪಟ್ಟೆ, ಸಂತೋಷ ಘಟಕಾಂಬಳೆ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ