ಆ್ಯಪ್ನಗರ

ಅರಣ್ಯ ಇಲಾಖೆಯಿಂದ ಸಸಿ ವಿತರಣೆ

ಯಲ್ಲಾಪುರ : ಅರಣ್ಯ ಇಲಾಖೆಯ ವತಿಯಿಂದ ರವಿವಾರ ಸಸ್ಯ ಸಂತೆ ಎಂಬ ವಿಶಿಷ್ಟ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಪಟ್ಟಣದ ಸಂತೆ ಪ್ರದೇಶವಾದ ಬೆಲ್‌ ರಸ್ತೆಯ ಮೀನು ಮಾರುಕಟ್ಟೆ ಎದುರಿಗೆ ಶಾಮಿಯಾನ ಹಾಕಿ, ವಿವಿಧ ಜಾತಿಯ ಸಸ್ಯಗಳನ್ನು ಇಟ್ಟು ಸಸಿಗಳನ್ನು ಬೆಳೆಸುವ ಆಸಕ್ತಿ ಇರುವ ಜನರಿಗೆ ಸಸಿಗಳನ್ನು

Vijaya Karnataka 11 Jun 2019, 5:00 am
ಯಲ್ಲಾಪುರ : ಅರಣ್ಯ ಇಲಾಖೆಯ ವತಿಯಿಂದ ರವಿವಾರ ಸಸ್ಯ ಸಂತೆ ಎಂಬ ವಿಶಿಷ್ಟ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಪಟ್ಟಣದ ಸಂತೆ ಪ್ರದೇಶವಾದ ಬೆಲ್‌ ರಸ್ತೆಯ ಮೀನು ಮಾರುಕಟ್ಟೆ ಎದುರಿಗೆ ಶಾಮಿಯಾನ ಹಾಕಿ, ವಿವಿಧ ಜಾತಿಯ ಸಸ್ಯಗಳನ್ನು ಇಟ್ಟು ಸಸಿಗಳನ್ನು ಬೆಳೆಸುವ ಆಸಕ್ತಿ ಇರುವ ಜನರಿಗೆ ಸಸಿಗಳನ್ನು ವಿತರಿಸಲಾಯಿತು. ಭಾನುವಾರ ಪಟ್ಟಣದಲ್ಲಿ ವಾರದ ಸಂತೆಯ ದಿನವಾದ್ದರಿಂದ ಮಾರುಕಟ್ಟೆಯಲ್ಲಿ ಜನಸಂದಣಿ ಜಾಸ್ತಿ ಇತ್ತು. ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆಯವರು ಸಂತೆ ಪ್ರದೇಶದಲ್ಲಿಯೇ ಸಸಿಗಳ ವಿತರಣೆ ಹಮ್ಮಿಕೊಂಡಿದ್ದರಿಂದ ಹೆಚ್ಚಿನ ಜನರು ಇತ್ತ ಬಂದು, ರಿಯಾಯಿತಿ ದರ ನೀಡಿ ಆಸಕ್ತಿಯಿಂದ ಸಸಿಗಳನ್ನು ಮನೆಗೆ ಕೊಂಡೊಯ್ದರು.
Vijaya Karnataka Web KWR-10 YLP 2
ಯಲ್ಲಾಪುರ ಪಟ್ಟಣದಲ್ಲಿ ಅರಣ್ಯ ಇಲಾಖೆಯ ವತಿಯಿಂದ ಭಾನುವಾರ ನಡೆದ ಸಸ್ಯ ಸಂತೆ ಅಂಗವಾಗಿ ಜನರಿಗೆ ಸಸಿಗಳನ್ನು ವಿತರಿಸಲಾಯಿತು.


ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ಬಾಲಸುಬ್ರಹ್ಮಣ್ಯಂ, ಉಪವಲಯ ಅರಣ್ಯಾಧಿಕಾರಿಗಳಾದ ಜಿ.ಡಿ.ನಾಯ್ಕ, ಸಿ.ಎಸ್‌.ನಾಯ್ಕ್‌, ಅಧಿಕಾರಿಗಳಾದ ಶರಣಬಸು, ಸಂಜಯ ಕುಮಾರ್‌, ಮಂಜುನಾಥ ಕಾಂಬ್ಳೆ, ಸುಬಾಸ್‌ ಗಾಂವ್ಕಾರ ಮುಂತಾದವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ