ಆ್ಯಪ್ನಗರ

ಮಹಿಳಾ ಪೌರ ಕಾರ್ಮಿಕರಿಗೆ ಹೊಲಿಗೆ ಯಂತ್ರ ವಿತರಣೆ

ದಾಂಡೇಲಿ: ದಾಂಡೇಲಿ ನಗರ ಸಭೆಯ ಆಶ್ರಯದಲ್ಲಿನಗರದ ಅಂಬೇಡ್ಕರ ಸಭಾ ಭವನದಲ್ಲಿಪೌರ ಕಾರ್ಮಿಕರ ದಿನ ಆಚರಿಸಲಾಯಿತು.

Vijaya Karnataka 25 Sep 2019, 5:00 am
ದಾಂಡೇಲಿ: ದಾಂಡೇಲಿ ನಗರ ಸಭೆಯ ಆಶ್ರಯದಲ್ಲಿನಗರದ ಅಂಬೇಡ್ಕರ ಸಭಾ ಭವನದಲ್ಲಿಪೌರ ಕಾರ್ಮಿಕರ ದಿನ ಆಚರಿಸಲಾಯಿತು.
Vijaya Karnataka Web distribution of sewing machines to women civic workers
ಮಹಿಳಾ ಪೌರ ಕಾರ್ಮಿಕರಿಗೆ ಹೊಲಿಗೆ ಯಂತ್ರ ವಿತರಣೆ


ನಗರದ ಆದರ್ಶ ಪೌರ ಕಾರ್ಮಿಕರಾದ ಪುಷ್ಪಾ ಹರಿಜನ, ಶಬ್ದಾ ಹರಿಜನ್‌, ಸಣ್ಣ ರಾಮಾಂಜನೇಯ, ನರಸಿಂಹ, ಮೀನಾಕ್ಷಿ, ರತ್ನಬಾಯಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಗರಸಭೆಯ ಅನುದಾನದಲ್ಲಿ22 ಪೌರ ಕಾರ್ಮಿಕರಿಗೆ ಸೈಕಲ್‌ ಹಾಗೂ 15 ಮಹಿಳಾ ಪೌರ ಕಾರ್ಮಿಕರಿಗೆ ಹೊಲಿಗೆ ಯಂತ್ರವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿಭಾಗವಹಿಸಿ ಮಾತನಾಡಿದ ಹಳಿಯಾಳ ತಹಸೀಲ್ದಾರ್‌ ವಿದ್ಯಾಧರ ಗುಳುಗುಳಿ, ನಗರದ ಸೌಂದರ್ಯ ಕಾಪಾಡುವ ಪೌರಕಾರ್ಮಿಕರನ್ನು ಎಲ್ಲರೂ ಗೌರವಿಸಬೇಕು. ಪೌರ ಕಾರ್ಮಿಕರಿಗೂ ಸಹ ಸರಕಾರದಿಂದ ಹಾಗೂ ಸ್ಥಳೀಯ ಆಡಳಿತದಿಂದ ಹಲವು ಸವಲತ್ತು ನೀಡಲಾಗುತ್ತಿದ್ದು, ಅದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ದಾಂಡೇಲಿ ತಹಸೀಲ್ದಾರ್‌ ಶೈಲೇಶ ಪರಮಾನಂದ ಪೌರಕಾರ್ಮಿಕರ ಕಾರ್ಯವನ್ನು ಶ್ಲಾಘಿಘಿಸಿದರು. ಪ್ರಭಾರಿ ಅಭಿಯಂತರ ಆರ್‌.ಪಿ. ನಾಯ್ಕ ಉಪಸ್ಥಿತರಿದ್ದರು. ನಗರಸಭೆಯ ಅಧಿಕಾರಿಗಳಾದ ಮೈಕಲ್‌ ಫರ್ನಾಂಡಿಸ್‌, ಬಿ.ಎಫ್‌. ಗವಾಸ, ವಿಲಾಸ ಸಹಕರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ