ಆ್ಯಪ್ನಗರ

ನಾಟಕ ಸ್ಪರ್ಧೆ: ಹಡಿನಬಾಳ ತಂಡ ಪ್ರಥಮ

ಶಿರಸಿ : ಯುವಕರು ಮಾತೃಭಾಷೆ ಕೊಂಕಣಿಯ ಬೆಳವಣಿಗೆಗೆ ಆದ್ಯತೆ ನೀಡಬೇಕು ಎಂದು ಹಿರಿಯ ಸಾಹಿತಿ ಶಾ. ಮಂ. ಕೃಷ್ಣರಾಯ ಹೇಳಿದರು.

Vijaya Karnataka 21 Feb 2019, 5:00 am
ಶಿರಸಿ : ಯುವಕರು ಮಾತೃಭಾಷೆ ಕೊಂಕಣಿಯ ಬೆಳವಣಿಗೆಗೆ ಆದ್ಯತೆ ನೀಡಬೇಕು ಎಂದು ಹಿರಿಯ ಸಾಹಿತಿ ಶಾ. ಮಂ. ಕೃಷ್ಣರಾಯ ಹೇಳಿದರು.
Vijaya Karnataka Web drama competition haddinbala team first
ನಾಟಕ ಸ್ಪರ್ಧೆ: ಹಡಿನಬಾಳ ತಂಡ ಪ್ರಥಮ


ನಗರದಲ್ಲಿ ಉತ್ತರ ಕನ್ನಡ ಜಿಲ್ಲೆ ಕೊಂಕಣಿ ಪರಿಷತ್ತು ಆಯೋಜಿಸಿದ ರಾಜ್ಯ ಮಟ್ಟದ ಕೊಂಕಣಿ ನಾಟಕ ಸ್ಪರ್ಧೆಯ ಸಮಾರೋಪದಲ್ಲಿ ಅವರು ಮಾತನಾಡಿದರು.

ಸಚಿವ ಆರ್‌.ವಿ ದೇಶಪಾಂಡೆಯವರ ಮುತುವರ್ಜಿಯಿಂದ ಕೊಂಕಣಿ ಅಕಾಡೆಮಿಯ ಅಧ್ಯಕ್ಷ ಸ್ಥಾನ ಜಿಲ್ಲೆಗೆ ಲಭಿಸಿದೆ. ಆದ್ದರಿಂದ ಜಿಲ್ಲೆಯಲ್ಲಿ ಕೊಂಕಣಿ ಉಳಿಸುವ ಬೆಳೆಸುವ ಜವಾಬ್ದಾರಿ ಅಧ್ಯಕ್ಷ ರ ಮೇಲಿದೆ ಎಂದರು.

ಕೊಂಕಣಿ ಅಕಾಡೆಮಿಯ ಅಧ್ಯಕ್ಷ ಆರ್‌.ಪಿ ನಾಯ್ಕ ಮಾತನಾಡಿ, ಹೆಚ್ಚಿನ ಮುತುವರ್ಜಿ ವಹಿಸಿ ಜಿಲ್ಲೆಯ ಕೊಂಕಣಿ ಭಾಷಿಕರಿಗೆ ನ್ಯಾಯಯುತ ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದರು. ಮುಂದಿನ ದಿನಗಳಲ್ಲಿ ಉ.ಕ ಜಿಲ್ಲಾ ಕೊಂಕಣಿ ಪರಿಷತ್ತಿನ ಕಾರ್ಯಕ್ರಮಗಳಿಗೆ ಅಕಾಡೆಮಿಯ ಸಹಾಯ ಹಸ್ತ ದೊರಕಲಿದೆ ಎಂದರು. ಪ್ರಾಸ್ತಾವಿಕ ಮಾತನಾಡಿದ ಕೂಡ್ಲ ಆನಂದು ಶಾನಭಾಗ, ಕರಾವಳಿ ಗುಂಟ ಇರುವ ಕೊಂಕಣಿ ಭಾಷೆಯ ಪ್ರೇಮ ಘಟ್ಟದ ಮೇಲಿನ ಭಾಗದಲ್ಲಿ ಪಸರಿಸುವ ಅಗತ್ಯವಿದೆ. ಕರಾವಳಿ ಭಾಗದ ಆರು ನಾಟಕ ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿವೆ ಎಂದರು. ಎಂ.ಎಂ ಕಲಾ ಮತ್ತು ವಿಜ್ಞಾನ ಕಾಲೇಜಿನ ಗ್ರಂಥಪಾಲಕ ಕೃಷ್ಣಮೂರ್ತಿ ಮೇಸ್ತ, ರಾಘವೇಂದ್ರ ಕಾಮತ, ಆಗ್ನೇಲ ಫರ್ನಾಂಡೀಸ್‌ ವಾಲ್ಟರ್‌ ಡಿಕೋಸ್ತಾ, ಫ್ರಾನ್ಸಿಸ್‌ ಪಿಂಟೋ, ರಘುವೀರ ಮಡಗಾಂವಕರ, ರಾಮಚಂದ್ರ ಪೈ ಮುಂತಾದವರು ಭಾಗವಹಿಸಿದ್ದರು. ಪರಿಷತ್ತಿನ ಕಾರ್ಯದರ್ಶಿ ಜಗದೀಶ ಭಂಡಾರಿ ಸ್ವಾಗತಿಸಿದರು.

ವಿಜೇತ ತಂಡಗಳು : ಪೆಟ್ಲಿ ದಿವ್ಲಿ ವಾರಾರ‍ಯಕ್‌ ಸಾಂಪ್ಡಾತಾನಾ ಸಾಂತ್‌ ಫ್ರಾನ್ಸಿಸ್‌ ಆಸಿಸಿ ಕಲಾ ಮೇಳ ಹಡಿನಬಾಳ ಹೊನ್ನಾವರ (ಪ್ರಥಮ), ಲೊಗೋಸ್‌ ಥಿಯೇಟರ್‌ ಟ್ರೂಪ್‌, ಪದುವಾ ಕಾಲೇಜ್‌ ಆಫ್‌ ಕಾಮರ್ಸ್‌ ಮತ್ತು ಮ್ಯಾನೆಜಮೆಂಟ್‌ ಕದ್ರಿ ಹಿಲ್ಸ್‌,

ನಂತೂರು ಮಂಗಳೂರು ದ್ವಿತೀಯ, ಆಂಟಿಗೋನ್‌ ಮಾಂಡ ಸೋಬಾನ ಕಲಾಕುಲ್‌ ಕಲಾಂಗಣ ಮಂಗಳೂರು ತೃತೀಯ, ಬಾಂದ್ಪಾಸಾಂತ್ಲಿ ಬಚಾವಿ ಸಾಂತ್‌ ಫ್ರಾನ್ಸಿಸ್‌ ಆಸಿಸಿ ಚರ್ಚ್‌ ಹಡಿನಬಾಳ ಹೊನ್ನಾವರ ತಂಡ ಪ್ರೋತ್ಸಾಹಕ ಬಹುಮಾನ ಪಡೆಯಿತು. ಪ್ರಕಾಶ ಭಾಗವತ, ಚಂದ್ರು ಉಡುಪ, ಸುಜಾತಾ ಫಾತರಪೇಕರ ಹಾಗೂ ಸೂರಜರಾಣಿ ಪ್ರಭು ನಿರ್ಣಾಯಕರಾಗಿ ಪಾಲ್ಗೊಂಡರು. ಅಂತೋನ ನೊರೊನ್ಹಾ ನಿರೂಪಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ