ಆ್ಯಪ್ನಗರ

ಕುಮಟಾ-ಉಳ್ಳೂರಮಠ ಬಸ್ಸಿಗೆ ಚಾಲನೆ

ಕುಮಟಾ : ಗ್ರಾಮೀಣ ಸಾರಿಗೆಯನ್ನು ಇನ್ನಷ್ಟು ವಿಸ್ತರಿಸಿ ಹಳ್ಳಿಗರಿಗೆ ಓಡಾಟದ ಸಂಪರ್ಕ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಶಾಸಕ ದಿನಕರ ಶೆಟ್ಟಿ ಶುಕ್ರವಾರ ಕುಮಟಾ-ಉಳ್ಳೂರಮಠ ಇನ್ನೊಂದು ಬಸ್ಸಿಗೆ ಚಾಲನೆ ನೀಡಿದರು.

Vijaya Karnataka 18 Feb 2019, 5:00 am
ಕುಮಟಾ : ಗ್ರಾಮೀಣ ಸಾರಿಗೆಯನ್ನು ಇನ್ನಷ್ಟು ವಿಸ್ತರಿಸಿ ಹಳ್ಳಿಗರಿಗೆ ಓಡಾಟದ ಸಂಪರ್ಕ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಶಾಸಕ ದಿನಕರ ಶೆಟ್ಟಿ ಶುಕ್ರವಾರ ಕುಮಟಾ-ಉಳ್ಳೂರಮಠ ಇನ್ನೊಂದು ಬಸ್ಸಿಗೆ ಚಾಲನೆ ನೀಡಿದರು.
Vijaya Karnataka Web drive to kumta ullooram busi
ಕುಮಟಾ-ಉಳ್ಳೂರಮಠ ಬಸ್ಸಿಗೆ ಚಾಲನೆ


ನಂತರ ಮಾತನಾಡಿದ ಅವರು ಗ್ರಾಮೀಣ ಭಾಗದಿಂದ ಪಟ್ಟಣಕ್ಕೆ ಶಾಲಾ ಕಾಲೇಜುಗಳಿಗೆ ಬರಲು ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ಈಗಲೂ ಇದೆ. ಅಲ್ಲದೆ ರೈತರು, ವ್ಯಾಪಾರಸ್ಥರು ಪಟ್ಟಣಕ್ಕೆ ನಿರಂತರ ಬಂದು ಹೋಗುವ ಅಗತ್ಯವಿರುವುದರಿಂದ ಅವರ ಅನುಕೂಲಕ್ಕಾಗಿ ಇಂತಹ ಬಸ್ಸುಗಳನ್ನು ಬಿಡಲಾಗುತ್ತದೆ. ಸಂಜೆ ಏಳು ಗಂಟೆಗೆ ಉಳ್ಳೂರಮಠಕ್ಕೆ ಸಾಗುವ ಬಸ್‌ ಅಲ್ಲಿಯೇ ತಂಗಿ ಮುಂಜಾನೆ ಏಳು ಗಂಟೆಗೆ ಕುಮಟಾಕ್ಕೆ ಬರಲಿದೆ. ಶಿಷ್ಟಾಚಾರದಂತೆ ಎಲ್ಲವೂ ನಡೆಯಬೇಕಾಗುತ್ತದೆ. ಅನಗತ್ಯ ಅನ್ಯರ ಜವಾಬ್ದಾರಿ ನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡಬಾರದು. ಅಧಿಕಾರಿಗಳು ಜನರಿಗೆ ಅಗತ್ಯವಿರುವ ಕೆಲಸ ಕಾರ್ಯಗಳಿಗೆ ಸ್ಪಂದಿಸಬೇಕು ಎಂದರು. ಸಂತೇಗುಳಿ ಗ್ರಾ.ಪಂ. ಸದಸ್ಯ ವಿನಾಯಕ ಭಟ್ಟ, ಗೌರಿ ಮರಾಠಿ, ಸುರೇಶ ನಾಯ್ಕ, ರಾಮಾ ಮರಾಠಿ, ಇಸಾಕ್‌ ಸಾಬ, ಡಿಪೋ ಮ್ಯಾನೇಜರ್‌ ಬಿರಾದಾರ್‌ ಮೊದಲಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ