ಆ್ಯಪ್ನಗರ

ಬಾಲ್ಯದಲ್ಲಿಯೇ ಪರಿಸರ ಶಿಕ್ಷ ಣ ನೀಡಿ

ಶಿರಸಿ : ಅತಿವೃಷ್ಠಿ ಆಪೋಷನ, ಅನಾವೃಷ್ಠಿ ದಮನ ಎರಡನ್ನೂ ದಟ್ಟ ಅರಣ್ಯವಿದ್ದಲ್ಲಿ ಮಾತ್ರ ಕೈಗೊಳ್ಳಲು ಸಾಧ್ಯ, ಎಂದು ಜಲತಜ್ಞ ಚಕ್ರವಾಕ ಸುಬ್ರಹ್ಮಣ್ಯ ಹೇಳಿದರು.

Vijaya Karnataka 15 Jan 2019, 5:00 am
ಶಿರಸಿ : ಅತಿವೃಷ್ಠಿ ಆಪೋಷನ, ಅನಾವೃಷ್ಠಿ ದಮನ ಎರಡನ್ನೂ ದಟ್ಟ ಅರಣ್ಯವಿದ್ದಲ್ಲಿ ಮಾತ್ರ ಕೈಗೊಳ್ಳಲು ಸಾಧ್ಯ, ಎಂದು ಜಲತಜ್ಞ ಚಕ್ರವಾಕ ಸುಬ್ರಹ್ಮಣ್ಯ ಹೇಳಿದರು.
Vijaya Karnataka Web SRS-14SIRSI5

ಶಿರಸಿ ಜಡ್ಡಿಗದ್ದೆ ಪ್ರೌಢಶಾಲೆ ಕಾರ್ಯಕ್ರಮದಲ್ಲಿ ಚಕ್ರವಾಕ ಸುಬ್ರಹ್ಮಣ್ಯ ಮಾತನಾಡಿದರು.


ಅವರು ತಾಲೂಕಿನ ಜಡ್ಡಿಗದ್ದೆ ಪ್ರೌಢಶಾಲೆಯಲ್ಲಿ ಅರಣ್ಯ ಇಲಾಖೆ ಹಾಗೂ ಪರಿಸರ ಜಾಗೃತಿ ವೇದಿಕೆ ಆಯೋಜಿಸಿದ್ದ ಪರಿಸರದಲ್ಲಿ ಮಕ್ಕಳ ಪಾತ್ರ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾಡುಗಳಲ್ಲಿ ಮೋಡಗಳನ್ನು ನಿಯಂತ್ರಿಸುವ ಶಕ್ತಿಯಿದ್ದು, ಧಾರಾಕಾರ ಮಳೆ, ಮೇಘಸ್ಪೋಟವನ್ನು ತಡೆಯುತ್ತದೆ. ವ್ಯತಿರಿಕ್ತವಾದಲ್ಲಿ ಮೇಘಸ್ಪೋಟಗೊಂಡು ಆ ಜಾಗದಲ್ಲಿನ ಜೀವವೈವಿಧ್ಯತೆ ನಾಶವಾಗುತ್ತದೆ. ಅತಿವೃಷ್ಠಿಯಿಂದ ಬೆಳೆ ನಾಶ ಮತ್ತು ಧರೆ ಕುಸಿದು ಮಣ್ಣಿನ ಮೇಲ್ಪದರ ಜರಿದು ಹೋಗುವುದರಿಂದ ಅಂತರ್ಜಲ ಆವಕ ಕಡಿಮೆಯಾಗುತ್ತದೆ. ಅದೇ ರೀತಿ ಕೆಲವೊಂದು ಸೂಕ್ಷ ್ಮ ಪ್ರದೇಶದಲ್ಲಿ ಮಳೆ ಕೊರತೆಯಿಂದ ಬರಗಾಲಕ್ಕೆ ಎಡೆಮಾಡಿ ಕೊಡುತ್ತದೆ. ಹಿಂದಿನ ಕಾಲದಲ್ಲಿ ಹಿರಿಯರು ಪರಿಸರದೊಂದಿಗೆ ಜೀವನ ಸಾಗಿಸುತ್ತಿದ್ದರು. ಸುಂದರ ಪರಿಸರ ನಿರ್ಮಾಣದಿಂದ ಶಾಂತಿ, ನೆಮ್ಮದಿ ಜನರಲ್ಲಿತ್ತು. ಇಂದು ಮಕ್ಕಳಿಗೆ ಬಾಲ್ಯದಲ್ಲಿಯೇ ಪರಿಸರ ಶಿಕ್ಷ ಣ ಕೊಡದೇ ದೂರವಿಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಪರಿಸರ ಕಾರ್ಯದಲ್ಲಿ ನೈಜ ಪ್ರೀತಿ, ಕಾಳಜಿ ಇಲ್ಲದಂತಾಗಿರುವುದು ದುರಂತವಾಗಿದೆ. ಇನ್ನಾದರೂ ಪೋಷಕರು ತಮ್ಮ ಮಕ್ಕಳಿಗೆ ಪರಿಸರ ಕಾಳಜಿಯನ್ನು ಮನೆಯಲ್ಲಿ ಚಿಕ್ಕಂದಿನಲ್ಲಿಯೇ ಮೂಡಿಸಿದಲ್ಲಿ ಮುಂದೆ ಭೂಮಿಯ ಮೇಲಾಗುವ ದುಷ್ಪರಿಣಾಮ ತಡೆಯಬಹುದು ಎಂದರು.

ವಿದ್ಯಾರ್ಥಿಗಳಿಗೆ ಕ್ವಿಜ್‌ ನಡೆಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅರುಣಕುಮಾರ ಭಟ್‌ ಅಧ್ಯಕ್ಷ ತೆ ವಹಿಸಿದ್ದರು. ವನಪಾಲಕ ಮಂಜುನಾಥ ಉಪಸ್ಥಿತರಿದ್ದರು. ನಿತ್ಯಾನಂದ ನಾಯಕ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ