ಆ್ಯಪ್ನಗರ

ತಾಳಮದ್ದಲೆ ಭಾವನಾತ್ಮಕವಾಗಿದ್ದರೆ ಪರಿಣಾಮ

ಶಿರಸಿ : ತಾಳಮದ್ದಲೆ ತರ್ಕಕ್ಕಿಂತ ಹೆಚ್ಚು ಭಾವನಾತ್ಮಕವಾಗಿದ್ದರೆ ಪರಿಣಾಮ ಹೆಚ್ಚಾಗಿ ಹೆಚ್ಚು ಸಮಯ ನೆನಪಿರುವಂತೆ ಆಗುತ್ತದೆ. ಇದು ಒಂದು ಕಲೆಯಾದ್ದರಿಂದ ಕಲಾತ್ಮಕವಾಗಿ ಪ್ರದರ್ಶನ ಮಾಡುವುದೇ ಸೂಕ್ತ ಎಂದು ದುರ್ಗಪ್ಪ ಮಾಸ್ತರ್‌ ಅಭಿಪ್ರಾಯಪಟ್ಟರು.

Vijaya Karnataka 16 May 2019, 5:00 am
ಶಿರಸಿ : ತಾಳಮದ್ದಲೆ ತರ್ಕಕ್ಕಿಂತ ಹೆಚ್ಚು ಭಾವನಾತ್ಮಕವಾಗಿದ್ದರೆ ಪರಿಣಾಮ ಹೆಚ್ಚಾಗಿ ಹೆಚ್ಚು ಸಮಯ ನೆನಪಿರುವಂತೆ ಆಗುತ್ತದೆ. ಇದು ಒಂದು ಕಲೆಯಾದ್ದರಿಂದ ಕಲಾತ್ಮಕವಾಗಿ ಪ್ರದರ್ಶನ ಮಾಡುವುದೇ ಸೂಕ್ತ ಎಂದು ದುರ್ಗಪ್ಪ ಮಾಸ್ತರ್‌ ಅಭಿಪ್ರಾಯಪಟ್ಟರು.
Vijaya Karnataka Web effect of emotionally emotional
ತಾಳಮದ್ದಲೆ ಭಾವನಾತ್ಮಕವಾಗಿದ್ದರೆ ಪರಿಣಾಮ


ಸಿದ್ದಾಪುರ ತಾಲೂಕಿನ ಓಣಿತೋಟದಲ್ಲಿ ನಡೆದ ಚೌಡಿ ಪ್ರತಿಷ್ಠೆಯ ಐದನೇ ವರ್ಷದ ಕಾರ್ಯಕ್ರಮದಲ್ಲಿ ತಾಳಮದ್ದಲೆಯ ಅಧ್ಯಕ್ಷ ತೆ ವಹಿಸಿ ಅವರು ಮಾತನಾಡಿದರು. ಪ್ರಮುಖರಾದ ಶಿವ ಗೌಡ, ಬಂಗಾರ್ಯ ನಾಯ್ಕ ಹಳಿಯಾಳ, ವೆಂಕಟ್ರಮಣ ಗೌಡ ಉಪಸ್ಥಿತರಿದ್ದರು. ನಂತರ ಅತಿಥಿ ಕಲಾವಿದರ ಕೂಟದಿಂದ ಶ್ರೀರಾಮ ನಿರ್ಮಾಣ ತಾಳಮದ್ದಲೆ ಸಾದರಗೊಂಡಿತು. ಹಿಮ್ಮೇಳದಲ್ಲಿ ಭಾಗವತರಾಗಿ ಎಂ.ಪಿ. ಹೆಗಡೆ ಹುಲ್ಲಾಳಗದ್ದೆ, ಮದ್ದಲೆ ವಾದಕರಾಗಿ ಗಜಾನನ ಹೆಗಡೆ ಕಂಚಿಕೈ ಭಾಗವಹಿಸಿದ್ದರು. ಮುಮ್ಮೇಳದಲ್ಲಿ ಶ್ರೀರಾಮನಾಗಿ ಆರ್‌.ಟಿ. ಭಟ್‌ ಕಬ್ಗಾಲ, ಕಾಲಪುರುಷನಾಗಿ ಆರ್‌.ವಿ. ಹೆಗಡೆ ಹೊನ್ನೆಗದ್ದೆ , ದೂರ್ವಾಸನಾಗಿ ಹಾಲಪ್ಪ ಗೌಡರ, ಲಕ್ಷ ್ಮಣನಾಗಿ ಕೆ.ಟಿ. ಗೌಡ ಮಾದಲಮನೆ, ಊರ್ಮಿಳೆಯಾಗಿ ನಾರಾಯಣ ಗೌಡ, ಹನುಮಂತನಾಗಿ ಶರತ್‌ ಪಾತ್ರ ನಿರ್ವಹಿಸಿದರು. ಸುರೇಶ ಗೌಡರ, ಮಂಜುನಾಥ ವಿ.ಜೆ. ಅವರ ಸಂಯೋಜನೆಯಲ್ಲಿ ಕಾರ್ಯಕ್ರಮ ಮೂಡಿಬಂದಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ