ಆ್ಯಪ್ನಗರ

ಯಲ್ಲಾಪುರ ಎಪಿಎಂಸಿ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ

ಯಲ್ಲಾಪುರ : ತೀವ್ರ ಕುತೂಹಲ ಕೆರಳಿಸಿದ್ದ ಯಲ್ಲಾಪುರ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮೀತಿಯ ಮೂರನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆಯು ಗುರುವಾರ ನಡೆಯಿತು. ಮುಂದಿನ 20 ತಿಂಗಳ ಅವಧಿಗಾಗಿ ಅಧ್ಯಕ್ಷರಾಗಿ ಎಂ.ಜಿ.ಭಟ್‌ ಸಂಕದಗುಂಡಿ ಹಾಗೂ ಉಪಾಧ್ಯಕ್ಷರಾಗಿ ರಾಘವೇಂದ್ರ ಗೋಂದಿ ಅವಿರೋಧವಾಗಿ ಪುನರಾಯ್ಕೆಯಾದರು.

Vijaya Karnataka 12 Jun 2020, 5:00 am
ಯಲ್ಲಾಪುರ : ತೀವ್ರ ಕುತೂಹಲ ಕೆರಳಿಸಿದ್ದ ಯಲ್ಲಾಪುರ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮೀತಿಯ ಮೂರನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆಯು ಗುರುವಾರ ನಡೆಯಿತು. ಮುಂದಿನ 20 ತಿಂಗಳ ಅವಧಿಗಾಗಿ ಅಧ್ಯಕ್ಷರಾಗಿ ಎಂ.ಜಿ.ಭಟ್‌ ಸಂಕದಗುಂಡಿ ಹಾಗೂ ಉಪಾಧ್ಯಕ್ಷರಾಗಿ ರಾಘವೇಂದ್ರ ಗೋಂದಿ ಅವಿರೋಧವಾಗಿ ಪುನರಾಯ್ಕೆಯಾದರು.
Vijaya Karnataka Web elected president vice president of yallapur apmc
ಯಲ್ಲಾಪುರ ಎಪಿಎಂಸಿ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ


ಚುನಾವಣಾ ಅಧಿಕಾರಿಯಾಗಿ ತಹಸೀಲ್ದಾರ್‌ ಡಿ.ಜಿ.ಹೆಗಡೆ ಕಾರ್ಯನಿರ್ವಹಿಸಿದರು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕಾಗಿ ತಲಾ ಒಂದೊಂದು ನಾಮಪತ್ರ ಮಾತ್ರ ಸಲ್ಲಿಕೆಯಾದ ಕಾರಣ ಅವಿರೋಧ ಆಯ್ಕೆಯನ್ನು ಘೋಷಿಸಲಾಯಿತು. ಅಧ್ಯಕ್ಷ ಸ್ಥಾನದ ನಾಮಪತ್ರಕ್ಕೆ ನಿರ್ದೇಶಕ ಉಮೇಶ ಭಾಗ್ವತ್‌ ಸೂಚಕರಾಗಿ, ನಿರ್ದೇಶಕ ಹೇರಂಭ ಹೆಗಡೆ ಅನುಮೋದಕರಾಗಿ ಸಹಿ ಹಾಕಿದ್ದರು. ಉಪಾಧ್ಯಕ್ಷ ಸ್ಥಾನದ ನಾಮಪತ್ರಕ್ಕೆ ರಾಮಚಂದ್ರ ಮುದ್ದೇಪಾಲ್‌ ಸೂಚಕರಾಗಿ, ಪ್ರಭಾ ಭಾಗ್ವತ್‌ ಅನುಮೋದಕರಾಗಿ ಸಹಿ ಮಾಡಿದ್ದರು.

ಸಚಿವರಿಗೆ ಕೃತಜ್ಞತೆ ಸಲ್ಲಿಕೆ : ಮೂರನೇ ಅವಧಿಗೆ ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಘೋಷಣೆಯಾದ ನಂತರ ಅಧ್ಯಕ್ಷ ಎಂಜಿ.ಭಟ್‌ ಸಂಕದಗುಂಡಿ ಮಾತನಾಡಿ, ಈ ಹಿಂದಿನಂತೇ ಈ ಅವಧಿಯಲ್ಲೂಜನರ ವಿಶ್ವಾಸಕ್ಕೆ ತಕ್ಕಂತೆ

ಎಪಿಎಂಸಿ ವತಿಯಿಂದ ನಿರಂತರವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಕೃಷಿಕರ, ಅಡಕೆ ವ್ಯಾಪಾರಿಗಳ,ದಲಾಲರ ಹಾಗೂ ಎಲ್ಲಸಹಕಾರಿ ಸಂಘಗಳ ವಿವಿಧ ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ ನೀಡುವ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ಹಾಗೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದರು. ನಮ್ಮನ್ನು ಮೂರನೇ ಅವಧಿಗೆ ಅವಿರೋಧವಾಗಿ ಪುನರಾಯ್ಕೆಗೊಳಿಸಲು ಕಾರಣರಾದ ಜಿಲ್ಲಾಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್‌ ಅವರಿಗೆ, ಆಯ್ಕೆಗೆ ಸಹಕರಿಸಿದ ಮುಖಂಡರಾದ ತಾಲೂಕು ಬಿಜೆಪಿ ಅಧ್ಯಕ್ಷ ಗೋಪಾಲಕೃಷ್ಣ ಭಟ್‌ ಹಂಡ್ರಮನೆ, ವಿಜಯ ಮಿರಾಶಿ, ಮುರಳಿ ಹೆಗಡೆ, ಉಮೇಶ ಭಾಗ್ವತ್‌, ಹೇರಂಭ ಹೆಗಡೆ ಅವರಿಗೆ ಧನ್ಯವಾದ ಹೇಳಿದರು.

ಎಪಿಎಂಸಿ ಕಾರ್ಯದರ್ಶಿ ಕೃಷ್ಣಕಾಂತ ನಾಯ್ಕ, ಬಿಜೆಪಿ ತಾಲೂಕು ಅಧ್ಯಕ್ಷ ಗೋಪಾಲಕೃಷ್ಣ ಭಟ್‌ ಹಂಡ್ರಮನೆ, ಮುಂಖಂಡರಾದ ವಿಜಯ ಮಿರಾಶಿ, ನಿರ್ದೇಶಕರಾದ ಉಮೇಶ ಭಾಗ್ವತ್‌, ರಾಮಚಂದ್ರ ಮುದ್ದೇಪಾಲ್‌, ಹೇರಂಭ ಹೆಗಡೆ, ಸದಾನಂದ ಭಟ್‌, ಮುರಳಿ ಹೆಗಡೆ, ಸುನಂದಾ ಹೆಗಡೆ, ಪ್ರಭಾ ಭಾಗ್ವತ್‌, ಜಿ.ಎನ್‌.ಗಾಂವ್ಕಾರ್‌, ಲಾರೆನ್ಸ್‌ ಸಿದ್ದಿ, ವಿಶ್ವನಾಥ ಪಾಠಣಕರ್‌, ಸುಬ್ರಾಯ ಮರಾಠಿ,ಪರಮೇಶ್ವರ ಗೌಡ ಮುಂತಾದವರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ