ಆ್ಯಪ್ನಗರ

ವಿದ್ಯುತ್‌ ಅವಘಡ: ಟಿವಿ, ಫ್ರಿಡ್ಜ್‌ ಭಸ್ಮ

ಕಾರವಾರ : ಸಿಡಿಲು ಹೊಡೆದು ವಿದ್ಯುತ್‌ ಶಾರ್ಟ್‌ ಸರ್ಕೂಟ್‌ ಉಂಟಾದ ಪರಿಣಾಮ ಇಲ್ಲಿನ ಹಾರವಾಡದ ಸೀಬರ್ಡ್‌ ಕಾಲೋನಿಯ ಮನೆಯೊಂದರ ಟಿವಿ ಫ್ರಿಡ್ಜ್‌ ಮೊದಲಾದ ಇಲೆಕ್ಟ್ರಾನಿಕ್‌ ವಸ್ತುಗಳು ಹಾಗೂ ಬಂಗಾರ ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲಾದ ಘಟನೆ ಸೋಮವಾರ ರಾತ್ರಿ ನಡೆದಿದೆ.

Vijaya Karnataka 31 Oct 2019, 5:00 am
ಕಾರವಾರ : ಸಿಡಿಲು ಹೊಡೆದು ವಿದ್ಯುತ್‌ ಶಾರ್ಟ್‌ ಸರ್ಕೂಟ್‌ ಉಂಟಾದ ಪರಿಣಾಮ ಇಲ್ಲಿನ ಹಾರವಾಡದ ಸೀಬರ್ಡ್‌ ಕಾಲೋನಿಯ ಮನೆಯೊಂದರ ಟಿವಿ ಫ್ರಿಡ್ಜ್‌ ಮೊದಲಾದ ಇಲೆಕ್ಟ್ರಾನಿಕ್‌ ವಸ್ತುಗಳು ಹಾಗೂ ಬಂಗಾರ ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲಾದ ಘಟನೆ ಸೋಮವಾರ ರಾತ್ರಿ ನಡೆದಿದೆ.
Vijaya Karnataka Web electricity tv refrigerator incinerator
ವಿದ್ಯುತ್‌ ಅವಘಡ: ಟಿವಿ, ಫ್ರಿಡ್ಜ್‌ ಭಸ್ಮ


ತಾಲೂಕಿನಾದ್ಯಂತ ಸೋಮವಾರ ರಾತ್ರಿ ಭಾರಿ ಗುಡುಗು ಮತ್ತು ಸಿಡಿಲಿನ ಅಬ್ಬರವಿತ್ತು. ಹಾರವಾಡದ ಪಾಂಡುರಂಗ ಅಂಬಿಗ ಅವರ ಮನೆಯ ವಿದ್ಯುತ್‌ ತಂತಿಗೆ ಸಿಡಿಲು ಹೊಡೆದಿದೆ. ಇದರಿಂದಾಗಿ ಶಾರ್ಟ್‌ ಸಕ್ರ್ಯೂಟ್‌ ಸಂಭವಿಸಿ ಟಿವಿ ಮತ್ತು ಫ್ರಿಡ್ಜ್‌ ಸಂಪೂರ್ಣ ಭಸ್ಮವಾಗಿದೆ. ಈ ವೇಳೆ ಟಿವಿಯ ಬಳಿ ಇಟ್ಟಿದ್ದ ಹಣ ಹಾಗೂ ಬಂಗಾರದ ಆಭರಣವೂ ಬೆಂಕಿಗೆ ಆಹುತಿಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ