ಆ್ಯಪ್ನಗರ

ಮಾನವೀಯ ಸ್ಪಂದನೆಯುಳ್ಳ ಕಲಿಕೆಗೆ ಮಹತ್ವ ನೀಡಿ

ಶಿರಸಿ: ಮಕ್ಕಳ ನಡತೆ ತಿದ್ದುವ, ತಪ್ಪನ್ನು ಸರಿಪಡಿಸುವ ಪಾಲಕ ವರ್ಗದ ಹೊಣೆಗಾರಿಕೆ ಹೆಚ್ಚಿದೆ ಎಂದು ಉಪನ್ಯಾಸಕ ಅನಂತಮೂರ್ತಿ ಭಟ್ಟ ಹೇಳಿದರು.

Vijaya Karnataka 22 Jan 2019, 5:00 am
ಶಿರಸಿ: ಮಕ್ಕಳ ನಡತೆ ತಿದ್ದುವ, ತಪ್ಪನ್ನು ಸರಿಪಡಿಸುವ ಪಾಲಕ ವರ್ಗದ ಹೊಣೆಗಾರಿಕೆ ಹೆಚ್ಚಿದೆ ಎಂದು ಉಪನ್ಯಾಸಕ ಅನಂತಮೂರ್ತಿ ಭಟ್ಟ ಹೇಳಿದರು.
Vijaya Karnataka Web emphasize human minded learning
ಮಾನವೀಯ ಸ್ಪಂದನೆಯುಳ್ಳ ಕಲಿಕೆಗೆ ಮಹತ್ವ ನೀಡಿ


ತಾಲೂಕಿನ ಗುಬ್ಬಿಗದ್ದೆ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಕ್ಕಳು ದಾರಿ ತಪ್ಪಿದಾಗ ಶಿಕ್ಷಿಸಿ ಬುದ್ದಿ ಹೇಳುವ ಮನಸ್ಥಿತಿ ಪಾಲಕರು ಬೆಳೆಸಿಕೊಳ್ಳದಿದ್ದರೆ ಭವಿಷ್ಯದಲ್ಲಿ ತಮ್ಮ ಮಕ್ಕಳ ಅಧಃಪತನಕ್ಕೆ ಅವರೇ ಕಾರಣರಾಗುತ್ತಾರೆ. ಇಂದಿನ ಶೈಕ್ಷ ಣಿಕ ವ್ಯವಸ್ಥೆಯಲ್ಲಿ ಮಕ್ಕಳು ತಪ್ಪು ಮಾಡಿದರೆ ಶಿಕ್ಷಿಸುವ ಹಕ್ಕು ಶಿಕ್ಷ ಕರಿಗಿಲ್ಲದ ಕಾರಣ ಸಾಮಾಜಿಕ ಸಮಸ್ಯೆ ಉಲ್ಬಣಿಸುತ್ತಿದೆ. ಪಾಲಕ ವರ್ಗವೂ ಮಕ್ಕಳನ್ನು ಸರಿದಾರಿಗೆ ತರುವ ಪ್ರಯತ್ನ ಮಾಡುತ್ತಿಲ್ಲ. ಇದು ಸಾಮಾಜಿಕ ಸ್ವಾಸ್ಥ್ಯಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ. ಅಲ್ಲದೇ, ಮಕ್ಕಳ ಭವಿಷ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ. ಮಾನವೀಯ ಸ್ಪಂದನೆಯುಳ್ಳ ಶಿಕ್ಷ ಣದ ಜೊತೆಗೆ ನೆಲಮೂಲದ ಸಂಸ್ಕಾರ ನೀಡುವ ಕಲಿಕೆಗೆ ಮಹತ್ವ ನೀಡಬೇಕಾದ ಅನಿವಾರ್ಯತೆಯಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಹೆಗಡೆ ಹಳದೋಟ ಉದ್ಘಾಟಿಸಿದರು. ಕ್ಷೇತ್ರ ಶಿಕ್ಷ ಣಾಧಿಕಾರಿ ಸದಾನಂದ ಸ್ವಾಮಿ ಹಸ್ತಪತ್ರಿಕೆ ಬಿಡುಗಡೆ ಮಾಡಿದರು. ಸಾಮಾಜಿಕ ಕಾರ್ಯಕರ್ತ ಎಂ.ಎಸ್‌.ಹೆಗಡೆ ಕೊಪ್ಪ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಿದರು.

ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ ಪ್ರಮುಖರನ್ನು ಗೌರವಿಸಲಾಯಿತು. ಶಾಲೆಯ ಹಾಗೂ ವಿದ್ಯಾರ್ಥಿಗಳ ಏಳ್ಗೆಗೆ ಶ್ರಮಿಸಿದ ಶಾಲೆಯ ಶಿಕ್ಷ ಕರನ್ನು ಗ್ರಾಮಸ್ಥರು ಸನ್ಮಾನಿಸಿದರು. ನಂತರ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಹೆಗಡೆ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದರು. ಕೆ.ವಿ.ಹೆಗಡೆ ಅಂದಳ್ಳಿ, ಕೇಶವ ಹೆಗಡೆ ಗುಬ್ಬಿಗದ್ದೆ, ಇಟಗುಳಿ ಗ್ರಾಪಂ ಸದಸ್ಯ ಲಕ್ಷ್ಮೇನಾರಾಯಣ ಹೆಗಡೆ, ಶಿಕ್ಷ ಣ ಸಂಯೋಜಕ ಮಂಜುನಾಥ ನಾಯ್ಕ, ಕ್ಲಸ್ಟರ್‌ ಸಿಆರ್‌ಪಿ ಡಿ.ಪಿ.ಹೆಗಡೆ ಇದ್ದರು. ಮುಖ್ಯಶಿಕ್ಷ ಕ ಸತೀಶ ನಾಯ್ಕ ಸ್ವಾಗತಿಸಿದರು. ಶಿಕ್ಷ ಕಿ ಸುಧಾ ನಾಯ್ಕ ನಿರೂಪಿಸಿ, ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ