ಆ್ಯಪ್ನಗರ

ಸಮಾಜಮುಖಿ ಕೆಲಸಕ್ಕೆ ಅಧಿಕಾರ ಮುಖ್ಯವಲ್ಲ: ತಹಸೀಲ್ದಾರ್‌

ಅಂಕೋಲಾ : ಸಮಾಜಮುಖಿ ಕೆಲಸ ಮಾಡಬೇಕೆಂದರೆ ಅಧಿಕಾರವೇ ಬೇಕೆಂದಿಲ್ಲ. ಸಹಾಯ ಮಾಡಬೇಕೆಂಬ ತುಡಿತ ಇದ್ದರೆ ಸಾಕು. ಈ ನಿಟ್ಟಿನಲ್ಲಿ ನಮ್ಮಲ್ಲಾದ ಸಹಾಯವನ್ನು ಪ್ರಾಮಾಣಿಕತೆಯಿಂದ ಮಾಡಿದರೆ ಅದೆ ನಾವು ನಾಡಿಗೆ ನೀಡುವ ಕೊಡುಗೆಯಾಗುತ್ತದೆ ಎಂದು ತಹಸೀಲ್ದಾರ್‌ ವಿವೇಕ ಶೇಣ್ವಿ ಹೇಳಿದರು.

Vijaya Karnataka 28 Jul 2019, 5:00 am
ಅಂಕೋಲಾ : ಸಮಾಜಮುಖಿ ಕೆಲಸ ಮಾಡಬೇಕೆಂದರೆ ಅಧಿಕಾರವೇ ಬೇಕೆಂದಿಲ್ಲ. ಸಹಾಯ ಮಾಡಬೇಕೆಂಬ ತುಡಿತ ಇದ್ದರೆ ಸಾಕು. ಈ ನಿಟ್ಟಿನಲ್ಲಿ ನಮ್ಮಲ್ಲಾದ ಸಹಾಯವನ್ನು ಪ್ರಾಮಾಣಿಕತೆಯಿಂದ ಮಾಡಿದರೆ ಅದೆ ನಾವು ನಾಡಿಗೆ ನೀಡುವ ಕೊಡುಗೆಯಾಗುತ್ತದೆ ಎಂದು ತಹಸೀಲ್ದಾರ್‌ ವಿವೇಕ ಶೇಣ್ವಿ ಹೇಳಿದರು.
Vijaya Karnataka Web empowerment is not important for sociocultural work tahsildar
ಸಮಾಜಮುಖಿ ಕೆಲಸಕ್ಕೆ ಅಧಿಕಾರ ಮುಖ್ಯವಲ್ಲ: ತಹಸೀಲ್ದಾರ್‌


ಅವರು ಶುಕ್ರವಾರ ಅಗಸೂರು ಸರಕಾರಿ ಪ.ಪೂರ್ವ ಕಾಲೇಜಿನಲ್ಲಿ ನಡೆದ ಕಾರ‍್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಅಗಸೂರಿನ ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯಿತಿಯವರು ನನ್ನನ್ನು ಗೌರವಿಸುತ್ತಿರುವುದು ಬಹಳ ಹೆಮ್ಮೆ ತಂದಿದೆ. ಪ್ರತಿಯೊಬ್ಬ ಅಧಿಕಾರಿ ಅವರವರ ಕರ್ತವ್ಯವನ್ನು ನಿರ್ವಹಿಸಲೇ ಬೇಕು. ನಾವು ನಿರ್ವಹಿಸಿದ ಕರ್ತವ್ಯದಲ್ಲಿ ಒಳ್ಳೆಯದನ್ನು ಆರಿಸಿ ನಮ್ಮನ್ನು ಗೌರವಿಸಿದ್ದನ್ನು ಮರೆಯಲು ಸಾಧ್ಯವಿಲ್ಲ ಎಂದರು.

ಅಗಸೂರು ಗ್ರಾಪಂ ಮಾಜಿ ಅಧ್ಯಕ್ಷ ಬಾಲಚಂದ್ರ ನಾಯಕ ಮಾತನಾಡಿ, ತಹಸೀಲ್ದಾರ್‌ ವಿವೇಕ ಶೇಣ್ವಿ ಅವರು ಕಂದಾಯ ಇಲಾಖೆಯಲ್ಲಿ ಕ್ರಿಯಾಶೀಲವಾಗಿ ಕರ್ತವ್ಯ ನಿರ್ವಹಿಸಿ ತಾಲೂಕಿಗೆ ಕೊಡುಗೆ ನೀಡಿರುವುದು ಹರ್ಷ ತಂದಿದೆ. ಇಂಥ ಅಧಿಕಾರಿಗಳ ಕರ್ತವ್ಯದ ಶೈಲಿ ಇತರೆ ಅಧಿಕಾರಿಗಳಿಗೆ ಮಾದರಿಯಾಗಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷ ತೆವಹಿಸಿದ್ದ ಅಗಸೂರು ಗ್ರಾಪಂ ಸದಸ್ಯ ಗೋಪಾಲ ನಾಯಕ ಅಡ್ಲೂರ ಮಾತನಾಡಿದರು. ಪತ್ರಕರ್ತರ ಸಂಘದ ಅಧ್ಯಕ್ಷ ರಾಘು ಕಾಕರಮಠ, ಅಗಸೂರಿನ ಸರಕಾರಿ ಪಪೂ ಕಾಲೇಜಿನ ಪ್ರಾಚಾರ್ಯ ಐ.ಬಿ.ಪೂಜಾರಿ, ಪ್ರೌಢಶಾಲಾ ಮುಖ್ಯಾದ್ಯಾಪಕ ರಾಜು ನಾಯಕ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಂಕರ ಗೌಡ, ಗ್ರಾಪಂ ಉಪಾಧ್ಯಕ್ಷ ಯಶ್ವಂತ ಗೌಡ, ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ, ಪ್ರಾಥಮಿಕ ಶಾಲಾಭಿವೃದ್ಧಿ ಅಧ್ಯಕ್ಷ ಬೀರಣ್ಣ ನಾಯಕ ಮಾತನಾಡಿದರು.

ಪತ್ರಕರ್ತ ಸುಭಾಶ ಕಾರೇಬೈಲ್‌ ನಿರೂಪಿಸಿದರು. ಕರ್ನಾಟಕ ರಕ್ಷ ಣಾ ವೇದಿಕೆಯ ತಾಲೂಕಾಧ್ಯಕ್ಷ ರಂಜನ ನಾಯಕ. ಹಿಚ್ಕಡ, ಪುರುಷೋತ್ತಮ ನಾಯ್ಕ. ಶಿರೂರು, ಗ್ರಾಮ ಲೆಕ್ಕಾಧಿಕಾರಿ ಪ್ರಸಾದ ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ