ಆ್ಯಪ್ನಗರ

ಸಮಾನ ನಾಗರಿಕ ಕಾನೂನು ಜಾರಿಗೊಳಿಸಿ

ಶಿರಸಿ: ದೇಶದಲ್ಲಿಜನಸಂಖ್ಯಾ ನಿಯಂತ್ರಣ ಕಾನೂನನ್ನು ಜಾರಿಗೆ ತರಲು ಮೊದಲು ಸಮಾನ ನಾಗರಿಕ ಕಾನೂನು ಜಾರಿಗೊಳಿಸಬೇಕು ಎಂದು ಹಿಂದೂಜನಜಾಗೃತಿ ಸಮಿತಿ ಆಗ್ರಹಿಸಿದೆ.

Vijaya Karnataka 1 Oct 2019, 5:00 am
ಶಿರಸಿ: ದೇಶದಲ್ಲಿಜನಸಂಖ್ಯಾ ನಿಯಂತ್ರಣ ಕಾನೂನನ್ನು ಜಾರಿಗೆ ತರಲು ಮೊದಲು ಸಮಾನ ನಾಗರಿಕ ಕಾನೂನು ಜಾರಿಗೊಳಿಸಬೇಕು ಎಂದು ಹಿಂದೂಜನಜಾಗೃತಿ ಸಮಿತಿ ಆಗ್ರಹಿಸಿದೆ.
Vijaya Karnataka Web enforce equal civil law
ಸಮಾನ ನಾಗರಿಕ ಕಾನೂನು ಜಾರಿಗೊಳಿಸಿ


ಈ ಕುರಿತು ಸೋಮವಾರ ಸಹಾಯಕ ಆಯುಕ್ತ ಈಶ್ವರ ಉಳ್ಳಾಗಡ್ಡಿ ಅವರ ಮೂಲಕ ಸರಕಾರಕ್ಕೆ ಮನವಿ ಪತ್ರ ಕಳುಹಿಸಿದೆ. ದೆಹಲಿ ವಿಶ್ವವಿದ್ಯಾಲಯದಲ್ಲಿವೀರ ಸಾವರ್ಕರ್‌ ಪ್ರತಿಮೆಗೆ ಅಪಮಾನ ಮಾಡಿದವರನ್ನು ಬಂಧಿಸಬೇಕು, ಆಂಧ್ರ ಪ್ರದೇಶದಲ್ಲಿಧಾರ್ಮಿಕ ಆಕ್ರಮಣಗಳ ವಿಷಯದಲ್ಲಿಸಮಂಜಸ ಕಾರ್ಯಾಚರಣೆ ಮಾಡಬೇಕು ಎಂದು ಆಗ್ರಹಿಸಲಾಯಿತು.

ಓಡಿಶಾದ ಪುರಿ ಜಗನ್ನಾಥ ಮಂದಿರದ ಸುರಕ್ಷತೆಯ ದೃಷ್ಟಿಯಿಂದ ಅದರ ಸುತ್ತಲಿನ ಪ್ರಾಚೀನ ಮಠ ಮತ್ತು ಮಂದಿರಗಳನ್ನು ಅಕ್ರಮ ಕಟ್ಟಡಗಳು ಎಂದು ತೆರವುಗೊಳಿಸುವುದನ್ನು ಕೈಬಿಡಬೇಕು ಎಂದು ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿಶ್ರೀನಿವಾಸ ಪೂಜಾರಿ, ವಿಜಯ ಶೆಟ್ಟಿ, ಸಂಜಯ ಸಜ್ಜನ, ಗಣೇಶ ಭಂಡಾರಕರ್‌, ರೇವಣ್ಣ ಮುಂತಾದವರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ