ಆ್ಯಪ್ನಗರ

ಅಂಕೋಲಾ-ಹುಬ್ಬಳ್ಳಿ ರೈಲ್ವೆ ಯೋಜನೆ ಜಾರಿ ಮಾಡಿ

ಅಂಕೋಲಾ : ಶತಮಾನದ ಬೇಡಿಕೆಯಾದ ಅಂಕೋಲಾ - ಹುಬ್ಬಳ್ಳಿ ರೈಲ್ವೆ ಯೋಜನೆಗೆ ತೊಡಕಾಗಿರುವ ವನ್ಯಜೀವಿ ಸಂರಕ್ಷ ಣಾ ಮಂಡಳಿ ವರದಿಯಿಂದ ಯೋಜನೆಯನ್ನು ಸ್ಥಗಿತಗೊಳಿಸಲು ಚಿಂತನೆ ನಡೆಸುತ್ತಿರುವ ಸರಕಾರದ ಕ್ರಮವನ್ನು ವಿರೋಧಿಸಿ, ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿ ಹುಬ್ಬಳ್ಳಿ - ಅಂಕೋಲಾ ರೈಲ್ವೆ ಹೋರಾಟ ಕ್ರಿಯಾ ಸಮಿತಿ ತಹಸೀಲ್ದಾರ ಕಚೇರಿ ಎದುರು ಬೃಹತ್‌ ಧರಣಿ ನಡೆಸಿ ತಾಲೂಕಾ ದಂಡಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

Vijaya Karnataka 25 Jan 2019, 5:00 am
ಅಂಕೋಲಾ : ಶತಮಾನದ ಬೇಡಿಕೆಯಾದ ಅಂಕೋಲಾ - ಹುಬ್ಬಳ್ಳಿ ರೈಲ್ವೆ ಯೋಜನೆಗೆ ತೊಡಕಾಗಿರುವ ವನ್ಯಜೀವಿ ಸಂರಕ್ಷ ಣಾ ಮಂಡಳಿ ವರದಿಯಿಂದ ಯೋಜನೆಯನ್ನು ಸ್ಥಗಿತಗೊಳಿಸಲು ಚಿಂತನೆ ನಡೆಸುತ್ತಿರುವ ಸರಕಾರದ ಕ್ರಮವನ್ನು ವಿರೋಧಿಸಿ, ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿ ಹುಬ್ಬಳ್ಳಿ - ಅಂಕೋಲಾ ರೈಲ್ವೆ ಹೋರಾಟ ಕ್ರಿಯಾ ಸಮಿತಿ ತಹಸೀಲ್ದಾರ ಕಚೇರಿ ಎದುರು ಬೃಹತ್‌ ಧರಣಿ ನಡೆಸಿ ತಾಲೂಕಾ ದಂಡಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
Vijaya Karnataka Web KWR-24ANK3A


ತಹಸೀಲ್ದಾರ ಕಚೇರಿ ಎದುರು ಗುರುವಾರ ನಡೆದ ಧರಣಿಯಲ್ಲಿ ಹೋರಾಟ ಸಮಿತಿ ಅಧ್ಯಕ್ಷ ರಮಾನಂದ ನಾಯಕ ಮಾತನಾಡಿ, ಪಶ್ಚಿಮ ಕರಾವಳಿಗೆ ಮಧ್ಯ ಕರ್ನಾಟಕವು ಜೋಡಣೆಯಾಗಿ ಇತ್ತ ಕನ್ಯಾಕುಮಾರಿ ಅತ್ತ ಕಾಶ್ಮೀರ ಇನ್ನೊಂದೆಡೆ ಮದ್ರಾಸ ಬಂದರು ಮತ್ತು ರೈಲುಗಳ ಮೂಲಕ ಪಶ್ಚಿಮ ಬಂಗಾಲದವರೆಗೆ ವ್ಯಾಪಾರ ವಹಿವಾಟು ನಡೆದು ಪ್ರವಾಸೋದ್ಯಮಗಳಿಗೂ, ಭಾವೈಕ್ಯತೆಗೂ ನೆರವಾಗುವ ಹುಬ್ಬಳ್ಳಿ -ಅಂಕೋಲಾ ರೈಲು ಯೋಜನೆಯನ್ನು ಶೀಘ್ರ ಜಾರಿಗೊಳಿಸುವಂತೆ ಆಗ್ರಹಿಸಿದರು.

15 ವರ್ಷಗಳಿಂದ ನಿರಂತರವಾಗಿ ರೈಲ್ವೆ ಯೋಜನೆ ಕಾರ್ಯಗತವಾಗಬೇಕೆಂದು ಹೋರಾಟ ನಡೆಸುತ್ತಾ ಬಂದಿದ್ದೇವೆ. ಡಾ.ರಾಮಚಂದ್ರ ನಾಯಕತ್ವದ ಸಮಿತಿ ಇದರ ಸಾಧಕ ಬಾಧಕಗಳನ್ನು ಅಧ್ಯಯನ ನಡೆಸಿ ಈ ಯೋಜನೆ ಕಾರ್ಯಗತಗೊಳ್ಳುವುದರಿಂದ ಹಾನಿ ಉಂಟಾಗದು ಎನ್ನುವ ವರದಿಯನ್ನು ಸರಕಾರದ ಮುಂದೆ ಮಂಡಿಸಿದೆ. ಆದರೆ ಪರಿಸರದ ಹೆಸರಿನಲ್ಲಿ ತಮ್ಮ ಸ್ವಾರ್ಥ ಸಾಧನೆಗೆ ಡೋಂಗಿ ಪರಿಸರವಾದಿಗಳ ಮೊಂಡು ವಾದವೇ ಈ ಯೋಜನೆಗೆ ಹಿನ್ನೆಡೆಯಾಗಲು ಕಾರಣವಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ವಿಧಾನ ಸೌಧ ಮತ್ತು ಲೋಕಸಭೆಯಲ್ಲಿ ಈ ವಿಚಾರವಾಗಿ ಧ್ವನಿ ಎತ್ತುವ ಮೂಲಕ ಯೋಜನೆಗೆ ಬಲ ನೀಡಬೇಕು ಎಂದರು.

ಹೋರಾಟ ಸಮಿತಿ ಕಾರ್ಯದರ್ಶಿ ವಿಠ್ಠಲದಾಸ ಕಾಮತ್‌ ಮಾತನಾಡಿ, ಪರಿಸರವನ್ನು ನಾಶ ಮಾಡುವ ಬೇರೆ ಬೇರೆ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಸರಕಾರ ಪರಿಸರದ ನಾಶದ ಹೆಸರಿನಲ್ಲಿ ಡೋಂಗಿ ಪರಿಸರವಾದಿಗಳು ನೀಡುವ ಹೇಳಿಕೆಯನ್ನು ಪರಿಗಣಿಸುವುದಕ್ಕಿಂತ ಮುನ್ನ ಈ ಯೋಜನೆಯಿಂದ ಆಗುವ ಪ್ರಯೋಜನಗಳತ್ತ ಗಮನ ಹರಿಸುವುದು ಅವಶ್ಯವಿದೆ ಎಂದರು.

ಹೋರಾಟ ಸಮಿತಿ ಸಂಚಾಲಕ ಉಮೇಶ ನಾಯ್ಕ, ಪ್ರಮುಖರಾದ ವಿಷ್ಣು ನಾಯ್ಕ, ಬಾಸ್ಕರ ನಾರ್ವೇಕರ, ಡಿ.ಎನ್‌.ನಾಯಕ, ಆರ್‌.ಜಿ.ಗುಂದಿ, ರಾಜೇಂದ್ರ ನಾಯ್ಕ, ರಾಘು ಕಾಕರಮಠ, ವಿನೋದ ನಾಯಕ ಬಾಸಗೋಡ, ಜಿ.ಎಂ.ಶೆಟ್ಟಿ, ಹನುಮಂತ ಗೌಡ, ಕೆ.ಎಚ್‌.ಗೌಡ, ಪಾಂಡುರಂಗ ಗೌಡ, ಆರ್‌.ಟಿ.ಮಿರಾಶಿ, ತಾ.ಪಂ ಉಪಾಧ್ಯಕ್ಷೆ ತುಳಸಿ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ನಾಯ್ಕ, ಸದಸ್ಯೆ ಶಾಂತಿ ಆಗೇರ, ಬೀರಾ ಗೌಡ, ಪುರಸಭೆ ಸದಸ್ಯರಾದ ವಿಶ್ವನಾಥ ನಾಯ್ಕ, ಕಾರ್ತಿಕ ನಾಯ್ಕ, ನಿರ್ಮಲಾ ಹುಲುಸ್ವಾರ, ಅಶೋಕ ಶೇಡಗೇರಿ, ಮಾದೇವ ಗೌಡ, ಸೇರಿದಂತೆ ವಿವಿಧ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ