ಆ್ಯಪ್ನಗರ

ಆಂಗ್ಲ ಜ್ಞಾನ ಅತ್ಯವಶ್ಯ

ಸಿದ್ದಾಪುರ: ಕನ್ನಡ ನಮ್ಮ ಮಾತೃಭಾಷೆಯಾದರೂ ಹೊರಪ್ರಪಂಚಕ್ಕೆ ಕಾಲಿಡಬೇಕಾದರೆ ಇಂಗ್ಲಿಷ ಭಾಷೆಯನ್ನು ತಿಳಿದುಕೊಳ್ಳುವುದು ಅವಶ್ಯಕ ಎಂದು ಕಾನಸೂರು ಗ್ರಾಪಂ ಅಧ್ಯಕ್ಷ ತಿಮ್ಮಪ್ಪ ನಾಯ್ಕ ಹೇಳಿದರು.

Vijaya Karnataka 19 Aug 2019, 5:00 am
ಸಿದ್ದಾಪುರ: ಕನ್ನಡ ನಮ್ಮ ಮಾತೃಭಾಷೆಯಾದರೂ ಹೊರಪ್ರಪಂಚಕ್ಕೆ ಕಾಲಿಡಬೇಕಾದರೆ ಇಂಗ್ಲಿಷ ಭಾಷೆಯನ್ನು ತಿಳಿದುಕೊಳ್ಳುವುದು ಅವಶ್ಯಕ ಎಂದು ಕಾನಸೂರು ಗ್ರಾಪಂ ಅಧ್ಯಕ್ಷ ತಿಮ್ಮಪ್ಪ ನಾಯ್ಕ ಹೇಳಿದರು.
Vijaya Karnataka Web KWR-17SDPR-2


ಅವರು ತಾಲೂಕಿನ ಕಾನಸೂರು ಕಾಳಿಕಾ ಭವಾನಿ ಪ್ರೌಢಶಾಲಾ ಸಭಾಭವನದಲ್ಲಿ ಶನಿವಾರ ನಡೆದ ಕಾಳಿಕಾ ಭವಾನಿ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾಣಿಕಟ್ಟಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎನ್‌.ಬಿ.ಹೆಗಡೆ ಮಾತನಾಡಿ, ಪಟ್ಟಣಕ್ಕೆ ಸೀಮಿತವಾದ ಆಂಗ್ಲ ಮಾಧ್ಯಮ ಇಂದು ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸುತ್ತಿರುವುದು ಸ್ವಾಗತಾರ್ಹ ಎಂದರು. ಕಾಳಿಕಾ ಭವಾನಿ ಪ್ರಾಥಮಿಕ ಶಾಲೆಯ ಮುಖ್ಯಸ್ಥ ಕೆ.ಆರ್‌.ಹೆಗಡೆ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಡಿ.ವಿ.ಹೆಗಡೆ ಹೊರಾಲೆ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆ ಉದ್ಘಾಟಿಸಿದರು.

ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ, ಸಮಿತಿ ಕಾರ್ಯದರ್ಶಿ ಎಸ್‌.ಎಂ.ಹೆಗಡೆ, ಪ್ರೌಢಶಾಲೆ ಮುಖ್ಯಾಧ್ಯಾಪಕಿ ಶಾಂತಾ ಪ್ರಾಥಕಾಲ್‌, ಶಂಕರನಾರಾಯಣ ಹೆಗಡೆ ಗಿರಿಗಡ್ಡೆ ಹಾಗೂ ಸಮಿತಿ ಸದಸ್ಯರು, ಶಿಕ್ಷ ಕ ವೃಂದದವರಿದ್ದರು. ಜಯಂತ ಹೆಗಡೆ ಕಲ್ಲಾರೆಮನೆ ಅವರು ವಿದ್ಯಾರ್ಥಿಗಳಿಗೆ ಪಟ್ಟಿ ವಿತರಿಸಿ ನಂತರ ಮಿಮಿಕ್ರಿ ನಡೆಸಿಕೊಟ್ಟರು. ಮುಖ್ಯಾಧ್ಯಾಪಕ ಜಿ.ಐ.ಹೆಗಡೆ, ಶಿಕ್ಷ ಕ ರಮೇಶ ಹೆಗಡೆ ನಿರ್ವಹಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ