ಆ್ಯಪ್ನಗರ

ಮಕ್ಕಳ ಸಂತೆಯಿಂದ ವ್ಯವಹಾರ ಜ್ಞಾನ ವೃದ್ಧಿ

ಅಂಕೋಲಾ : ಪಟ್ಟಣದ ನಿರ್ಮಲಾ ಕಾನ್ವೆಂಟ್‌ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ನಡೆದ ಮಕ್ಕಳ ಸಂತೆಯನ್ನು ಸಿಆರ್‌ಪಿ ವಿಜಯಲಕ್ಷಿತ್ರ್ಮೕ ನಾಯ್ಕ ಉದ್ಘಾಟಿಸಿದರು.

Vijaya Karnataka 20 Nov 2019, 5:00 am
ಅಂಕೋಲಾ : ಪಟ್ಟಣದ ನಿರ್ಮಲಾ ಕಾನ್ವೆಂಟ್‌ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ನಡೆದ ಮಕ್ಕಳ ಸಂತೆಯನ್ನು ಸಿಆರ್‌ಪಿ ವಿಜಯಲಕ್ಷಿತ್ರ್ಮೕ ನಾಯ್ಕ ಉದ್ಘಾಟಿಸಿದರು.
Vijaya Karnataka Web enhancement of business knowledge from children
ಮಕ್ಕಳ ಸಂತೆಯಿಂದ ವ್ಯವಹಾರ ಜ್ಞಾನ ವೃದ್ಧಿ


ಬಳಿಕ ಮಾತನಾಡಿದ ಅವರು, ಇಂದು ಶಾಲೆಯಲ್ಲಿವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ವ್ಯವಹಾರ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲೂತೊಡಗಿಸಿಕೊಳ್ಳುವಂತೆ ಅವಕಾಶ ಕಲ್ಪಿಸಬೇಕು. ಆಗ ಮಾತ್ರ ವಿದ್ಯಾರ್ಥಿ ಪರಿಪೂರ್ಣನಾಗಲು ಸಾಧ್ಯ. ಈ ನಿಟ್ಟಿನಲ್ಲಿವಿದ್ಯಾರ್ಥಿಗಳನ್ನು ಉತ್ತೇಜಿಸಲು ನಿರ್ಮಲಾ ಶಾಲೆ ಸಂಘಟಿಸಿದ ಕಾರ್ಯ ಶ್ಲಾಘನೀಯವಾದುದು ಎಂದರು.

ನಿರ್ಮಲಾ ಹೃದಯ ಆಂಗ್ಲಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕಿ ಸಿಸ್ಟರ್‌ ಜುಲಿಯಾನ್‌ ಮೇರಿ ಮಾತನಾಡಿ, ಸಮಕಾಲೀನ ಸಂದರ್ಭದಲ್ಲಿಶಿಕ್ಷಣ ಕ್ಷೇತ್ರದಲ್ಲಿವ್ಯವಹಾರಿಕ ಜ್ಞಾನದ ಅಗತ್ಯತೆ ಮಹತ್ವಪೂರ್ಣವಾಗಿ ಆಗಬೇಕಾಗಿದೆ. ಇದನ್ನರಿತು ವಿದ್ಯಾರ್ಥಿಗಳು ಸಂತೆಯ ಪ್ರಯೋಜನ ಪಡೆದು ತಮ್ಮ ಕೌಶಲವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಸಂತೆಯ ಮಾರ್ಗದರ್ಶನ ನೀಡಿದ ಶಿಕ್ಷಕಿ ಬಬಿತಾ ಕೊಳಂಬಕರ ಮಾತನಾಡಿ, ಶಾಲೆಯ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ವ್ಯಾಪಾರ ಕ್ಷೇತ್ರದಲ್ಲಿಯೂ ವ್ಯವಹಾರದ ಕೌಶಲಗಳನ್ನು ಅರಿತುಕೊಳ್ಳಲಿ ಎಂಬ ಉದ್ದೇಶದಿಂದ ಮಕ್ಕಳಿಂದಲೇ ಸಂತೆಯ ಸಾಮಾನುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಿಸಿ, ವ್ಯಾಪಾರದಲ್ಲಿಆಸಕ್ತಿ ಬೆಳೆಯುವಂತೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇದರಿಂದ ವಿದ್ಯಾರ್ಥಿಗಳಲ್ಲಿಸೃಜನಶೀಲತೆ ಬೆಳೆಯುತ್ತದೆ ಎಂದು ಅಭಿಪ್ರಾಯ ಪಟ್ಟರು. ಶಿಕ್ಷಕಿ ಆಶಾ ರೋಡ್ರಿಗೀಸ್‌ ವೇದಿಕೆಯಲ್ಲಿಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ