ಆ್ಯಪ್ನಗರ

ಕುಡಿವ ನೀರಿನ ಯೋಜನೆಗೆ ಶಂಕುಸ್ಥಾಪನೆ

ದಾಂಡೇಲಿ : 21ನೇ ಶತಮಾನದಲ್ಲಿಜಗತ್ತಿನಾದ್ಯಂತ ನೀರಿಗಾಗಿ ಹೊಡೆದಾಡುವ ಸ್ಥಿತಿ ಬರುವ ಎಲ್ಲಲಕ್ಷಣಗಳಿವೆ. ಪ್ರತಿಯೊಬ್ಬರ ಜೀವನಕ್ಕೂ ನೀರು ಅತಿ ಅವಶ್ಯ. ಇದರ ಮಹತ್ವ ಅರಿತು ನೀರಿನ ಸದುಪಯೋಗ ಮಾಡಬೇಕು ಎಂದು ಶಾಸಕ ಆರ್‌.ವಿ.ದೇಶಪಾಂಡೆ ಹೇಳಿದರು.

Vijaya Karnataka 5 Sep 2019, 5:00 am
ದಾಂಡೇಲಿ : 21ನೇ ಶತಮಾನದಲ್ಲಿಜಗತ್ತಿನಾದ್ಯಂತ ನೀರಿಗಾಗಿ ಹೊಡೆದಾಡುವ ಸ್ಥಿತಿ ಬರುವ ಎಲ್ಲಲಕ್ಷಣಗಳಿವೆ. ಪ್ರತಿಯೊಬ್ಬರ ಜೀವನಕ್ಕೂ ನೀರು ಅತಿ ಅವಶ್ಯ. ಇದರ ಮಹತ್ವ ಅರಿತು ನೀರಿನ ಸದುಪಯೋಗ ಮಾಡಬೇಕು ಎಂದು ಶಾಸಕ ಆರ್‌.ವಿ.ದೇಶಪಾಂಡೆ ಹೇಳಿದರು.
Vijaya Karnataka Web establishment of drinking water project
ಕುಡಿವ ನೀರಿನ ಯೋಜನೆಗೆ ಶಂಕುಸ್ಥಾಪನೆ


ಅವರು ಬುಧವಾರ ಹಳಿಯಾಳ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದಡಿ ಅಂಬೇವಾಡಿ ನವಗ್ರಾಮ, ಗಾವಠಾಣ ಹಾಗೂ ವಿಟ್ನಾಳ ಗ್ರಾಮಗಳ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸುವ 2.68 ಕೋಟಿ ರೂ. ವೆಚ್ಚದಲ್ಲಿನಿರ್ಮಾಣಗೊಳ್ಳುತ್ತಿರುವ ಕುಡಿಯುವ ನೀರಿನ ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು.

ಈ ಯೋಜನೆಯಿಂದ ಬಹು ದಿನಗಳ ಕುಡಿಯುವ ನೀರಿನ ಬೇಡಿಕೆ ಈಡೇರುತ್ತದೆ ಎಂದರು. ದಾಂಡೇಲಿ ನಗರಕ್ಕೆ 24*7 ಕುಡಿಯುವ ನೀರಿನ ಸರಬರಾಜಿಗಾಗಿ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಶೀಘ್ರ ಕಾಮಗಾರಿಯನ್ನು ಆರಂಭಿಸುವುದಾಗಿ ಹೇಳಿದರು.

ವಿಧಾನ ಪರಿಷತ್ತಿನ ಸದಸ್ಯ ಎಸ್‌.ಎಲ್‌.ಘೋಟ್ನೆಕರ್‌ ಮಾತನಾಡಿ, ನವಗ್ರಾಮ, ವಿಟ್ನಾಳ ಮತ್ತು ಗಾವಠಾಣ ಭಾಗದ ಜನರ ಅನುಕೂಲಕ್ಕಾಗಿ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿಶಾಸಕ ಆರ್‌.ವಿ ದೇಶಪಾಂಡೆ ಕೆಲಸ ಮಾಡುತ್ತಿದ್ದಾರೆ ಎಂದರು.

ಜಿ.ಪಂ. ಸದಸ್ಯ ಕೃಷ್ಣಾ ಪಾಟೀಲ ಮಾತನಾಡಿ ಜನರ ಕುಡಿಯುವ ನೀರಿನ ಅವಶ್ಯಕತೆ ಈಡೇರಿಸಲು ಶಾಸಕ ಆರ್‌.ವಿ ದೇಶಪಾಂಡೆ ಅವರ ಸಹಾಯವನ್ನು ನೆನೆದರು.

ಅಂಬೇವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗುಬಾಯಿ ಪಾಗಡೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿಜಿ.ಪಂ. ಉಪಾಧ್ಯಕ್ಷ ಸಂತೋಷ ರೇಣುಕೆ, ಹಳಿಯಾಳ ತಾ.ಪಂ. ಸದಸ್ಯ ಬಾಳು ಪಾಟೀಲ, ಅಂಬೇವಾಡಿ ಗ್ರಾ.ಪಂ. ಉಪಾಧ್ಯಕ್ಷ ಪ್ರಕಾಶ ಜಿ., ದಾಂಡೇಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಯ್ಯದ್‌ ತಂಗಳ, ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರ ಮುಲ್ಲಾಅಂಬೇವಾಡಿ ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು. ರೈತರಾದ ಮಹಾವೀರ ನೇರಲೆಕರ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

ಕಾಮಗಾರಿ ಉದ್ಘಾಟನೆ: ಕಾರ್ಯಕ್ರಮದ ಪೂರ್ವದಲ್ಲಿಹಳಿಯಾಳದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದಿಂದ ಕೊಗಿಲಬನ ಗ್ರಾಮದಲ್ಲಿ32 ಲಕ್ಷ ರೂ. ವೆಚ್ಚದಲ್ಲಿಕುಡಿಯುವ ನೀರು ಸರಬರಾಜು ಮಾಡಲು ನಿರ್ಮಾಣಗೊಂಡ ಕಾಮಗಾರಿಯನ್ನು ಸಹ ಶಾಸಕ ಆರ್‌.ವಿ ದೇಶಪಾಂಡೆ ಉದ್ಘಾಟಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ