ಆ್ಯಪ್ನಗರ

ಕನ್ನಡ ಉಳಿವಿಗೆ ಎಲ್ಲರ ಪ್ರಯತ್ನ ಅವಶ್ಯ

ಮುಂಡಗೋಡ : ಕನ್ನಡದ ಭಾಷೆ ಸಂಸ್ಕೃತಿ ಉಳಿಸಲು ಸರಕಾರವಷ್ಟೇ ಪ್ರಯತ್ನ ಪಟ್ಟರೆ ಸಾಲದು, ಕನ್ನಡಿಗರಾದ ನಾವು ನಮ್ಮ ಕನ್ನಡ ಭಾಷೆ, ಕಲೆ, ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸವನ್ನು ಮಾಡಬೇಕಿದೆ ಎಂದು ಮಾಜಿ ಶಾಸಕ ವಿ.ಎಸ್‌.ಪಾಟೀಲ ಹೇಳಿದರು.

Vijaya Karnataka 3 Dec 2018, 5:00 am
ಮುಂಡಗೋಡ : ಕನ್ನಡದ ಭಾಷೆ ಸಂಸ್ಕೃತಿ ಉಳಿಸಲು ಸರಕಾರವಷ್ಟೇ ಪ್ರಯತ್ನ ಪಟ್ಟರೆ ಸಾಲದು, ಕನ್ನಡಿಗರಾದ ನಾವು ನಮ್ಮ ಕನ್ನಡ ಭಾಷೆ, ಕಲೆ, ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸವನ್ನು ಮಾಡಬೇಕಿದೆ ಎಂದು ಮಾಜಿ ಶಾಸಕ ವಿ.ಎಸ್‌.ಪಾಟೀಲ ಹೇಳಿದರು.
Vijaya Karnataka Web KWR-2MND1=


ದೈವಜ್ಞ ಕಲ್ಯಾಣ ಮಂಟಪದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಪ್ರಥಮ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಬೆಂಗಳೂರಿನಲ್ಲಿ ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸುವಂತಹ ಪರಿಸ್ಥಿತಿ ಬಂದೊದಗಿದೆ. ಆದ್ದರಿಂದ ನಾವು ಎಷ್ಟೇ ಶ್ರೀಮಂತರಾಗಿದ್ದರೂ, ನಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸಬೇಕು. ಉತ್ತರ ಕರ್ನಾಟಕದವರು ಕನ್ನಡ ಭಾಷೆಗೆ ತಮ್ಮದೇಯಾದ ಕೊಡುಗೆ ನೀಡಿದ್ದಾರೆ, ಕಸ್ತೂರಿ ಸಿರಿಗನ್ನಡ ವೇದಿಕೆಯವರು ಎರಡು ವರ್ಷದಿಂದ ನಮ್ಮ ಭಾಗದಲ್ಲಿ ಕನ್ನಡ ಉಳಿಸಿ ಬೆಳೆಸಲು ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಸಂತಸದ ಸಂಗತಿಯಾಗಿದ್ದು, ಈ ಸಂಘಟನೆಯವರು ಕನ್ನಡ ಸೇವೆಯನ್ನು ಮತ್ತಷ್ಟು ಮಾಡಲೆಂದು ಹಾರೈಸಿದರು.

ಭಾರತೀಯ ಸೇವಾ ಸಮಿತಿಯ ರಾಜ್ಯಾಧ್ಯಕ್ಷ ಡಾ.ಎಚ್‌.ಎಂ.ರಾಮಚಂದ್ರಪ್ಪ ಮಾತನಾಡಿ, ಬೆಂಗಳೂರಿನಲ್ಲಿ ದೇಶದ ಎಲ್ಲ ರಾಜ್ಯದ ಜನರು ಹಾಗೂ ದೇಶ ವಿದೇಶದ ಜನರು ಬಂದು ವಾಸವಾಗಿದ್ದಾರೆ. ನಾವು ಕನ್ನಡ ನಾಡಿನಲ್ಲಿ ಹುಟ್ಟಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಿದೆ. ಕನ್ನಡ ಭಾಷೆಯನ್ನು ಭಾರತ ರಾಷ್ಟ್ರ ಭಾಷೆಯನ್ನಾಗಿ ಮಾಡುವುದು ಅತಿ ಅವಶ್ಯವಿದೆ ಹಾಗೂ ಎಲ್ಲ ಸಂಘಟನೆಗಳು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಮಾಡಬೇಕಿದೆ ಎಂದು ಹೇಳಿದರು.

ಕನ್ನಡಕ್ಕೆ ರಾಷ್ಟ್ರೀಯ ಸ್ಥಾನಮಾನ ಸಿಗಲಿ : ಜಿ.ಪಂ. ಸದಸ್ಯ ಎಲ್‌.ಟಿ.ಪಾಟೀಲ ಮಾತನಾಡಿ, ಹಿಂದುಳಿದ ತಾಲೂಕು ಆಗಿರುವ ಮುಂಡಗೋಡದಲ್ಲಿ ಇಂತಹ ಕಾರ್ಯಕ್ರಮ ನಡೆಸುತ್ತಿರುವುದು ಸಂತಸದ ಸಂಗತಿಯಾಗಿದೆ. ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ ಕನ್ನಡ ಸಂಘಟನೆಗಳು ಇಂತಹ ಕಾರ್ಯಕ್ರಮಗಳನ್ನು ನಡೆಸುವುದು ಹೆಮ್ಮೆಯ ಸಂಗತಿಯಾಗಿದೆ. ಕನ್ನಡ ಭಾಷೆಯನ್ನು ಉಳಿಸಿ ಬೆಳಸುವ ಕೆಲಸವನ್ನು ಪ್ರತಿಯೊಬ್ಬ ಕನ್ನಡಿಗ ಮಾಡಬೇಕಿದೆ. ಕನ್ನಡ ಭಾಷೆಗೆ ರಾಷ್ಟ್ರೀಯ ಸ್ಥಾನಮಾನ ಸಿಗುವಂತಾಗಬೇಕಿದೆ ಎಂದು ಹೇಳಿದರು. ಪಿ.ನಾಗೇಂದ್ರ ಪ್ರಾಸ್ತಾವಿಕ ಮಾತನಾಡಿದರು. ಬಾಲಚಂದ್ರ ಹೆಗಡೆ ವೇದಿಕೆ ಪರಿಚಯ ಮಾಡಿದರು.

ಭಾರತೀಯ ಸೇವಾ ಸಮಿತಿಯ ರಾಜ್ಯಾಧ್ಯಕ್ಷ ಡಾ.ಎಚ್‌.ಎಂ.ರಾಮಚಂದ್ರಪ್ಪ ಅವರು ಸಮ್ಮೇಳನ ಸರ್ವಾಧ್ಯಕ್ಷ ರ ಮೆರವಣಿಗೆಗೆ ಚಾಲನೆ ನೀಡದರು. ಎಂ.ಬಿ.ಕುಟ್ರಿ ಮುಖ್ಯದ್ವಾರ ಉದ್ಘಾಟಿಸಿದರು. ಮಾಜಿ ಶಾಸಕ ವಿ.ಎಸ್‌.ಪಾಟೀಲ ಮಹಾದ್ವಾರವನ್ನು ಉದ್ಘಾಟಿಸಿದರು.

ಸಮ್ಮೇಳನದ ಸರ್ವಾಧ್ಯಕ್ಷ ಸಹದೇವ ನಡಗೇರಿ, ಕಸ್ತೂರಿ ಸಿರಿಗನ್ನಡ ವೇದಿಕೆಯ ರಾಜ್ಯಾಧ್ಯಕ್ಷ ಪೋತೇರ ಮಹದೇವು, ಉಪಾಧ್ಯಕ್ಷೆ ರಾಧಾಬಾಯಿ ಶಿರಾಲಿ, ಜಿಲ್ಲಾಧ್ಯಕ್ಷ ಸೋಮಣ್ಣ ಮುಡೇಣ್ಣ್ಣವರ, ತಾ.ಪಂ.ಅಧ್ಯಕ್ಷೆ ದಾಕ್ಷಾಯಣಿ ಸುರಗಿಮಠ, ಡಾ.ಪಿ.ಪಿ.ಛಬ್ಬಿ, ಬಿ.ಎನ್‌.ವಾಸರೆ, ವಸಂತ ಕೊಣಸಾಲಿ, ಎಂ.ಬಿ.ಕುಟ್ರಿ, ಎಚ್‌.ಎಂ.ಮಹದೇವ ಪ್ಪ, ಎಸ್‌.ಫಕ್ಕೀರಪ್ಪ, ಕೆ.ಆರ್‌.ಬಾಳೆಕಾಯಿ, ಎಚ್‌.ಬಿ.ನಧಾಪ್‌, ಬಸವರಾಜ ಸಂಗಮೇಶ್ವರ, ಮಂಜುಳಾ ಅಕ್ಕಿ, ಮಂಜುನಥ ಅನ್ವೇಕರ, ಡಾ. ನಳಿನಿ ರಮೇಶ, ಅರುಣ ಭಜಂತ್ರಿ, ವೀಣಾ ಓಶಿಮಠ, ಗೌರಮ್ಮ ಕೊಳ್ಳಾನವರ, ಕೆಂಜೋಡಿ ಗಲಬಿ ಸೇರಿದಂತೆ ಮುಂತಾದವರಿದ್ದರು.

ವಿಶ್ವನಾಥ ಹಿರೇಮಠ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ಎಸ್‌.ಡಿ.ಮುಡೆಣ್ಣವರ ಸ್ವಾಗತಿಸಿದರು. ಬಸವರಾಜ ಬೆಂಡ್ಲಗಟ್ಟಿ, ಎಸ್‌.ವಿ.ಹೊಸಮನಿ. ಸೋಮಶೇಖರ ಲಮಾಣಿ ನಿರೂಪಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ