ಆ್ಯಪ್ನಗರ

ರೋಮಾಂಚನ ಮೂಡಿಸಿದ ಸ್ಕೇಟಿಂಗ್‌ ಪ್ರದರ್ಶನ

ಶಿರಸಿ : ನಗರದ ಅದ್ವೈತ ಸ್ಕೇಟರ್ಡ್‌ ಆ್ಯಂಡ್‌ ಸ್ಪೋರ್ಟ್ಸ್ ಕ್ಲಬ್‌ನವರು ಸಂಘಟಿಸಿದ್ದ ಬೇಸಿಗೆ ಶಿಬಿರದಲ್ಲಿ ಸ್ಕೇಟಿಂಗ್‌ ತರಬೇತಿ ಪಡೆದ ಮಕ್ಕಳು ನಡೆಸಿ ಕೊಟ್ಟ ವಂದೇ ಮಾತರಂ ನೃತ್ಯ, ಹಾಗೂ ಕವಾಯತ್‌ ನೋಡುಗರ ಮನದಲ್ಲಿ ರೋಮಾಂಚನವನ್ನುಂಟು ಮಾಡಿತು.

Vijaya Karnataka 11 May 2019, 5:00 am
ಶಿರಸಿ : ನಗರದ ಅದ್ವೈತ ಸ್ಕೇಟರ್ಡ್‌ ಆ್ಯಂಡ್‌ ಸ್ಪೋರ್ಟ್ಸ್ ಕ್ಲಬ್‌ನವರು ಸಂಘಟಿಸಿದ್ದ ಬೇಸಿಗೆ ಶಿಬಿರದಲ್ಲಿ ಸ್ಕೇಟಿಂಗ್‌ ತರಬೇತಿ ಪಡೆದ ಮಕ್ಕಳು ನಡೆಸಿ ಕೊಟ್ಟ ವಂದೇ ಮಾತರಂ ನೃತ್ಯ, ಹಾಗೂ ಕವಾಯತ್‌ ನೋಡುಗರ ಮನದಲ್ಲಿ ರೋಮಾಂಚನವನ್ನುಂಟು ಮಾಡಿತು.
Vijaya Karnataka Web excited made skating show
ರೋಮಾಂಚನ ಮೂಡಿಸಿದ ಸ್ಕೇಟಿಂಗ್‌ ಪ್ರದರ್ಶನ


ಕಾಲಿಗೆ ಸ್ಕೇಟಿಂಗ್‌ ಶೂ ಕಟ್ಟಿಕೊಂಡಿಯೇ ವಂದೇ ಮಾತರಂ ಹಾಡಿಗೆ ಹೆಜ್ಜೆ ಹಾಕಿದ ಮಕ್ಕಳ ಸಮತೋಲನದ ಸಂಚಾರ ಅದ್ಭುತವಾಗಿತ್ತು. ಸುಮಾರು 150ಕ್ಕೂ ಹೆಚ್ಚಿನ ಮಕ್ಕಳು ಈ ಹಾಡಿಗೆ ಹೆಜ್ಜೆ ಹಾಕಿದರು. ಕವಾಯತ್‌ ಕೂಡಾ ಒಂದಕ್ಕಿಂತ ಒಂದು ನೋಡುಗರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತು.

ಅದರಲ್ಲಿಯೂ ಮುಖ್ಯವಾಗಿ ಚಿಕ್ಕ ಚಿಕ್ಕ ಮಕ್ಕಳು ಬೆಂಕಿಯಿಂದ ಪಾರಾಗುತ್ತಿದ್ದ ದೃಶ್ಯವಂತೂ ಮಕ್ಕಳ ಸ್ಕೇಟಿಂಗ್‌ ಜಾಣ್ಮೆಗೆ ಕೈಗನ್ನಡಿ ಹಿಡಿದಂತಾಗಿತ್ತು. ಅಲ್ಲಿ ಸೇರಿದ್ದ ಪಾಲಕರು, ಜನರು ಮಕ್ಕಳ ಪ್ರತಿಭೆಯನ್ನು ನೋಡಿ ಚಪ್ಪಾಳೆ ತಟ್ಟಿದರು.

ಹುಬ್ಬಳ್ಳಿ ರಸ್ತೆಯಲ್ಲಿರುವ ಗಾಳಿ ಮಾಸ್ತಿ ದೇವಸ್ಥಾನದ ಪಕ್ಕದ ಖಾಲಿ ಜಾಗದಲ್ಲಿ ಆಯೋಜಿಸಿದ್ದ ಸ್ಕೇಟಿಂಗ್‌ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷ ತೆ ವಹಿಸಿ ಮಾತನಾಡಿದ ಉಪವಿಭಾಗಾದಿಕಾರಿ ಈಶ್ವರ ಉಳ್ಳಾಗಡ್ಡಿ, ಮಕ್ಕಳು ಸ್ಕೇಟಿಂಗ್‌ನಲ್ಲಿ ಬ್ಯಾಲೆನ್ಸ್‌ ಕಂಡುಕೊಂಡಂತೆ ಜೀವನದಲ್ಲಿಯೂ ಬ್ಯಾಲೆನ್ಸಿಂಗ್‌ ಮಾಡಿ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಮಕ್ಕಳಿಗೆ ಕಿವಿ ಮಾತು ಹೇಳಿದರು. ಮಕ್ಕಳ ಆರೋಗ್ಯ ಹೆಚ್ಚಿಸುವ ಈ ಕ್ರೀಡೆಗೆ ನಮ್ಮಿಂದಾಗುವ ಎಲ್ಲ ಸಹಾಯ ಮಾಡುವುದಾಗಿ ತಿಳಿಸಿದರು.

ಡಿವೈಎಸ್‌ಪಿ ಭಾಸ್ಕರ್‌ ವಿ.ಜಿ. ಮಾತನಾಡಿ, ಸ್ಕೇಟಿಂಗ್‌ನ್ನು ಲಘುವಾಗಿ ಪರಿಗಣಿಸಬೇಡಿ. ಇದರಲ್ಲಿ ಸಾಧನೆ ಮಾಡಿದವರಿಗೆ ಒಳ್ಳೆಯ ಉದ್ಯೋಗ ಪಡೆಯುವ ಅವಕಾಶವಿದೆ. ಟಿವಿ, ಮೊಬೈಲ್‌ನಲ್ಲಿ ಕಾಲ ಕಳೆಯುವ ಮಕ್ಕಳಿಗೆ ಸ್ಕೇಟಿಂಗ್‌ ಒಳ್ಳೆಯ ದಾರಿಯಾಗಲಿದೆ ಎಂದರು.

ಲಯನ್ಸ್‌ ಶಿಕ್ಷ ಣ ಸಂಸ್ಥೆಯ ಕಾರ್ಯದರ್ಶಿ ಎಂ.ಎಂ.ಭಟ್‌ ಮಾತನಾಡಿ, ಶಿರಸಿಯಂತಹ ನಗರದಲ್ಲಿ ಸ್ಕೇಟಿಂಗ್‌ ಯುಗ ಆರಂಭವಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿ ಮಕ್ಕಳು ಈ ಕ್ರೀಡೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳ ಬೇಕೆಂದರು. ಸ್ಕೇಟಿಂಗ್‌ನ ರಾಜ್ಯಮಟ್ಟದ ತರಬೇತಿದಾರ ದಿಲೀಪ್‌ ಹಣಬರ್‌ ಮಾತನಾಡಿ, ಶಿರಸಿಯಲ್ಲಿ ಸ್ಕೇಟಿಂಗ್‌ ಆರಂಭವಾದ ಬಗೆ, ಇದರಲ್ಲಿರುವ ಅವಕಾಶ, ಇಲ್ಲಿನ ಪ್ರತಿಭೆಯ ಬಗ್ಗೆ ಮಾತನಾಡಿದರು.

ಪ್ರಭಾರಿ ಸಹಾಯಕ ಯುವಜನ ಸೇವಾ ಕ್ರೀಡಾಧಿಕಾರಿ ಕಿರಣ ನಾಯ್ಕ, ನಗರಸಭೆ ಸದಸ್ಯೆ ವೀಣಾ ಶೆಟ್ಟಿ, ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜೆ.ಆರ್‌.ಸಂತೋಷಕುಮಾರ, ಅದ್ವೈತ ಸ್ಕೇಟಿಂಗ್‌ ಆ್ಯಂಡ್‌ ಸ್ಪೋರ್ಟ್ಸ್ ಕ್ಲಬ್‌ ಅಧ್ಯಕ್ಷ ಕಿರಣಕುಮಾರ, ಕಾರ್ಯದರ್ಶಿ ಗೌರಿ ಲೋಕೇಶ್‌ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ