ಆ್ಯಪ್ನಗರ

ಜಿಲ್ಲೆಯಲ್ಲಿಸಂಚಲನ, ಸಂಘಟನೆ ನಿರೀಕ್ಷೆ

ಶಿರಸಿ : ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ನೂತನ ಸಾರಥಿಯಾಗಿ ಮಾಜಿ ಸಚಿವ, ಡೈನಾಮಿಕ್‌ ವ್ಯಕ್ತಿತ್ವದ ಡಿ.ಕೆ.ಶಿವಕುಮಾರ ಪ್ರತಿಜ್ಞಾ ಸ್ವೀಕರಿಸುತ್ತಿರುವುದು ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್‌ನಲ್ಲಿಹೊಸ ಸಂಚಲನ ಮೂಡಿಸಿದೆ. ಜಿಲ್ಲೆಯಲ್ಲಿಪಕ್ಷಕ್ಕೆ ಇನ್ನಷ್ಟು ಚೈತನ್ಯ, ಉತ್ತೇಜನ ದೊರೆಯುವ ನಿರೀಕ್ಷೆ ಪಕ್ಷದ ಮುಖಂಡರು, ಕಾರ್ಯಕರ್ತರ ವಲಯದಲ್ಲಿವ್ಯಕ್ತವಾಗಿದೆ.

Vijaya Karnataka 2 Jul 2020, 5:00 am
ಶಿರಸಿ : ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ನೂತನ ಸಾರಥಿಯಾಗಿ ಮಾಜಿ ಸಚಿವ, ಡೈನಾಮಿಕ್‌ ವ್ಯಕ್ತಿತ್ವದ ಡಿ.ಕೆ.ಶಿವಕುಮಾರ ಪ್ರತಿಜ್ಞಾ ಸ್ವೀಕರಿಸುತ್ತಿರುವುದು ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್‌ನಲ್ಲಿಹೊಸ ಸಂಚಲನ ಮೂಡಿಸಿದೆ. ಜಿಲ್ಲೆಯಲ್ಲಿಪಕ್ಷಕ್ಕೆ ಇನ್ನಷ್ಟು ಚೈತನ್ಯ, ಉತ್ತೇಜನ ದೊರೆಯುವ ನಿರೀಕ್ಷೆ ಪಕ್ಷದ ಮುಖಂಡರು, ಕಾರ್ಯಕರ್ತರ ವಲಯದಲ್ಲಿವ್ಯಕ್ತವಾಗಿದೆ.
Vijaya Karnataka Web expectation of organization and organization in the district
ಜಿಲ್ಲೆಯಲ್ಲಿಸಂಚಲನ, ಸಂಘಟನೆ ನಿರೀಕ್ಷೆ


ಕಾಂಗ್ರೆಸ್‌ ಪಕ್ಷದ ವಿವಿಧ ಹುದ್ದೆ ನಿಭಾಯಿಸಿ, ಮಂತ್ರಿಯಾಗಿ ಅನುಭವ ಹೊಂದಿರುವ ಡಿ.ಕೆ.ಶಿವಕುಮಾರ ಅವರ ನಾಯಕತ್ವದ ಗುಣ, ಸಂಘಟನಾ ಚತುರತೆ, ಪ್ರಭಾವ ಇವೆಲ್ಲವೂ ಮುಖಂಡರು ಕಾರ್ಯಕರ್ತರಲ್ಲಿಉತ್ಸಾಹ ಹೆಚ್ಚಲು ಕಾರಣವಾಗಿವೆ. ಜಿಲ್ಲೆಯಲ್ಲಿಪಕ್ಷಕ್ಕೆ ಮತ್ತಷ್ಟು ಬಲ ತುಂಬಿ ಅಧಿಕಾರಕ್ಕೇರಿಸಲು ಪ್ರೇರಣೆಯಾಗುತ್ತಾರೆ ಎಂಬ ಚರ್ಚೆಗಳು ಆರಂಭವಾಗಿದೆ.

ಅಭಿಮಾನಿ ಬಳಗ : ಹಿಂದಿನಿಂದಲೂ ಜಿಲ್ಲೆಯಲ್ಲಿಸಾಕಷ್ಟು ಅಭಿಮಾನಿ ಕಾರ್ಯಕರ್ತರನ್ನು ಹೊಂದಿರುವ ಡಿ.ಕೆ.ಶಿವಕುಮಾರ ಅವರು ಪಕ್ಷದ ಚುಕ್ಕಾಣಿ ಹಿಡಿಯುತ್ತಿರುವುದು ಪಕ್ಷದ ವಲಯದಲ್ಲಿಸಂತಸ ಮೂಡಿದೆ. ಬೆಂಗಳೂರಿನಲ್ಲಿಕೆಪಿಸಿಸಿ ಅಧ್ಯಕ್ಷರ ಹಾಗು ಮೂವರು ಕಾರ್ಯಾಧ್ಯಕ್ಷರ ಪ್ರತಿಜ್ಞಾ ಸ್ವೀಕಾರದಂತೆ ಜಿಲ್ಲೆಯ ಹಳ್ಳಿಹಳ್ಳಿಗಳಲ್ಲಿಕಾರ್ಯಕರ್ತರು ಪ್ರತಿಜ್ಞಾ ಸ್ವೀಕಾರಕ್ಕೆ ಸಿದ್ಧತೆಯಾಗಿದೆ.

ಕ್ರಿಯಾಶೀಲ ಕಾರ್ಯಚಟುವಟಿಕೆ : ಜಿಲ್ಲೆಯಲ್ಲಿಕಾಂಗ್ರೆಸ್‌ ತನ್ನದೇ ಪ್ರಭಾವ ಹೊಂದಿದೆ. ಇದೀಗ ಡಿ.ಕೆ.ಶಿವಕುಮಾರ ಅಧ್ಯಕ್ಷರಾಗುತ್ತಿರುವುದು ಸಂಘಟನೆಗೆ ಇನ್ನಷ್ಟು ಟಾನಿಕ್‌ ದೊರೆಯುವ ವಿಶ್ವಾಸ ಮೂಡಿದೆ. ನೂತನ ಅಧ್ಯಕ್ಷರ ಪ್ರತಿಜ್ಞಾ ಕಾರ್ಯಕ್ರಮಕ್ಕೆ ಮುಖಂಡರು, ಕಾರ್ಯಕರ್ತರು ಕ್ರಿಯಾಶೀಲವಾಗಿ ಸಿದ್ಧತೆಗಳನ್ನು ನಡೆಸಿದ್ದಾರೆ. ಹೊಸ ಭರವಸೆಯೊಂದಿಗೆ ಪಕ್ಷದ ಸಂಘಟನೆಗೆ ಹೆಗಲು ನೀಡಲು ಅಣಿಯಾಗಿದ್ದಾರೆ.

ಗ್ರಾಮಿಣ ಭಾಗದಲ್ಲೂಪ್ರತಿಜ್ಞಾ... ಬೆಂಗಳೂರಿನಲ್ಲಿಕೆಪಿಸಿಸಿ ಅಧ್ಯಕ್ಷರು ಪ್ರತಿಜ್ಞಾ ಸ್ವೀಕರಿಸಿದಂತೆ ಹಳ್ಳಗಳಲ್ಲೂಕಾರ್ಯಕರ್ತರು ಇದೇ ಸಂದರ್ಭದಲ್ಲಿಪ್ರತಿಜ್ಞಾ ಸ್ವೀಕರಿಸುವಂತಾಗಲು ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ 224ಗ್ರಾಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಹಾಗೂ ನಗರ ಪ್ರದೇಶದ 112 ಸ್ಥಳಗಳಲ್ಲಿಪ್ರತಿಜ್ಞಾ ಹಾಗೂ ಕಾರ್ಯಕ್ರಮ ವೀಕ್ಷಣೆ ನೆರವೇರಲಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ