ಆ್ಯಪ್ನಗರ

ನದಿ ತೀರದಲ್ಲಿ ಸ್ಫೋಟಕ ಪತ್ತೆ

ಕಾರವಾರ/ಗೋಕರ್ಣ : ಗೋಕರ್ಣದ ಗಂಗಾವಳಿ ನದಿ ತೀರದಲ್ಲಿ ನೌಕಾಪಡೆಯ ಜಲಾಂತರ್ಗಾಮಿಯಲ್ಲಿ ಬಳಸುವ ಸ್ಫೋಟಕವೊಂದು ಶುಕ್ರವಾರ ಪತ್ತೆಯಾಗಿದೆ. ಪೊಲೀಸರ ವಶದಲ್ಲಿದ್ದ ಸ್ಫೋಟಕವನ್ನು ನೌಕಾಪಡೆಯವರು ಮರಳಿ ಕೊಂಡೊಯ್ದಿದ್ದಾರೆ.

Vijaya Karnataka 29 Jun 2019, 5:00 am
ಕಾರವಾರ/ಗೋಕರ್ಣ : ಗೋಕರ್ಣದ ಗಂಗಾವಳಿ ನದಿ ತೀರದಲ್ಲಿ ನೌಕಾಪಡೆಯ ಜಲಾಂತರ್ಗಾಮಿಯಲ್ಲಿ ಬಳಸುವ ಸ್ಫೋಟಕವೊಂದು ಶುಕ್ರವಾರ ಪತ್ತೆಯಾಗಿದೆ. ಪೊಲೀಸರ ವಶದಲ್ಲಿದ್ದ ಸ್ಫೋಟಕವನ್ನು ನೌಕಾಪಡೆಯವರು ಮರಳಿ ಕೊಂಡೊಯ್ದಿದ್ದಾರೆ.
Vijaya Karnataka Web explosive detection on the banks of the river
ನದಿ ತೀರದಲ್ಲಿ ಸ್ಫೋಟಕ ಪತ್ತೆ


ಗಂಗಾವಳಿ ನದಿಯಲ್ಲಿ ತೇಲಿಕೊಂಡು ಬಂದಿದ್ದ ಸ್ಫೋಟಕವನ್ನು ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸುರಕ್ಷತೆಯ ದೃಷ್ಟಿಯಿಂದ ಪೊಲೀಸರು ಈ ವಸ್ತುವನ್ನು ಮರಳಿನಲ್ಲಿ ಹೂತಿಟ್ಟು ನೌಕಾಪಡೆಯವರಿಗೆ ವಿಷಯ ತಿಳಿಸಿದ್ದರು. ಕಾರವಾರದ ಕದಂಬ ನೌಕಾನೆಲೆಯ ಅಧಿಕಾರಿಗಳು ಆಗಮಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.

ಏನಿದು ಸ್ಫೋಟಕ? : ಜಲಾಂತರ್ಗಾಮಿಗಳು ನೀರಿನ ಆಳದಲ್ಲಿ ಸಂಚರಿಸುವ ವೇಳೆ ಗುರುತು ಪತ್ತೆಯ ಸಲುವಾಗಿ ಈ ಸ್ಫೋಟಕಗಳನ್ನು ಬಳಸಲಾಗುತ್ತದೆ. ಇವು ಕೇವಲ ಭಾರಿ ಪ್ರಮಾಣದ ಬೆಳಕನ್ನು ಮಾತ್ರ ಹೊರಸೂಸುತ್ತವೆ.

ಇತ್ತೀಚೆಗೆ ಭಟ್ಕಳ ಸಮೀಪದ ನೇತ್ರಾಣಿಯಲ್ಲಿ ಇಂಡೋ-ಫ್ರಾನ್ಸ್‌ ಸಮರಾಭ್ಯಾಸದಲ್ಲಿ ಜಲಾಂತರ್ಗಾಮಿ ನೌಕೆಗಳನ್ನು ಬಳಸಲಾಗಿತ್ತು. ಈ ವೇಳೆ ಉಪಯೋಗಕ್ಕೆ ಇರಿಸಿದ್ದ ಸ್ಫೋಟಕ ನೀರಿನಲ್ಲಿ ತೇಲಿಕೊಂಡು ಬಂದಿರುವ ಸಾಧ್ಯತೆ ಇದೆ ಎಂದು ಗೋಕರ್ಣ ಪಿಎಸ್‌ಐ ಸಂತೋಷಕುಮಾರ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ