ಆ್ಯಪ್ನಗರ

ಆರೋಗ್ಯದ ಹಿತಕ್ಕೆ ಉಪವಾಸವೂ ಇರಲಿ

ಶಿರಸಿ: ಆರೋಗ್ಯದ ಹಿತದೃಷ್ಟಿಯಿಂದ ಉಪವಾಸ ಆಂದೋಲನವಾಗಿ ಮಾರ್ಪಟ್ಟರೆ ಆರೋಗ್ಯ ಹಾಗೂ ಆಹಾರ ಎರಡನ್ನೂ ಉಳಿಸಬಹುದು ಎಂದು ಡಾ. ಜಗದೀಶ ವಿಷ್ಣು ಯಾಜಿ ಹೇಳಿದರು. ಆಯುಷ್‌ ಇಲಾಖೆಯ ರಾಜ್ಯ ಯೋಜನೆಯಡಿ ಆದರ್ಶ ವನಿತಾ ಸಮಾಜದಲ್ಲಿಆಯುರ್ವೇದ ಆಸ್ಪತ್ರೆ ಸಂಘಟಿಸಿದ್ದ ಮನೆಮದ್ದು ಕಾರ್ಯಕ್ರಮದಲ್ಲಿ ಆರೋಗ್ಯಕ್ಕಾಗಿ ಆಹಾರ ಕ್ರಮದ ಕುರಿತು ಅವರು ಮಾತನಾಡಿದರು.

Vijaya Karnataka 24 Oct 2019, 5:00 am
ಶಿರಸಿ: ಆರೋಗ್ಯದ ಹಿತದೃಷ್ಟಿಯಿಂದ ಉಪವಾಸ ಆಂದೋಲನವಾಗಿ ಮಾರ್ಪಟ್ಟರೆ ಆರೋಗ್ಯ ಹಾಗೂ ಆಹಾರ ಎರಡನ್ನೂ ಉಳಿಸಬಹುದು ಎಂದು ಡಾ. ಜಗದೀಶ ವಿಷ್ಣು ಯಾಜಿ ಹೇಳಿದರು. ಆಯುಷ್‌ ಇಲಾಖೆಯ ರಾಜ್ಯ ಯೋಜನೆಯಡಿ ಆದರ್ಶ ವನಿತಾ ಸಮಾಜದಲ್ಲಿಆಯುರ್ವೇದ ಆಸ್ಪತ್ರೆ ಸಂಘಟಿಸಿದ್ದ ಮನೆಮದ್ದು ಕಾರ್ಯಕ್ರಮದಲ್ಲಿ ಆರೋಗ್ಯಕ್ಕಾಗಿ ಆಹಾರ ಕ್ರಮದ ಕುರಿತು ಅವರು ಮಾತನಾಡಿದರು.
Vijaya Karnataka Web fasting for the sake of health
ಆರೋಗ್ಯದ ಹಿತಕ್ಕೆ ಉಪವಾಸವೂ ಇರಲಿ


ಬದಲಾದ ಆಹಾರ ಶೈಲಿಯಿಂದ, ರಾಸಾಯನಿಕ ಸಿಂಪಡಿಸಿದ ಹಣ್ಣು, ತರಕಾರಿ, ಆಹಾರ ಸಾಮಾಗ್ರಿಗಳಿಂದ ಆಗುತ್ತಿರುವ ಅಪಾಯ ತಡೆಯಲು ಕನಿಷ್ಟ ವಾರ ಅಥವಾ 15 ದಿನಕ್ಕೊಮ್ಮೆ ಉಪವಾಸ, ಅಲ್ಪಾಹಾರ ಸೇವನೆ ಅನುಸರಿಸಬೇಕು ಎಂದರು. ಕಾರ್ಯಕ್ರಮ ಉದ್ಘಾಟಿಸಿದ ನಗರಸಭಾ ಸದಸ್ಯೆ ವೀಣಾ ಶೆಟ್ಟಿ, ಆರೋಗ್ಯದ ಗುಟ್ಟು ಅಡುಗೆ ಮನೆಯಲ್ಲಿದೆ. ಮಹಿಳೆ ಮನೆಮದ್ದನ್ನು ತಿಳಿದಿದ್ದರೆ ನೆಗಡಿ, ಕೆಮ್ಮಿನಂತಹ ಸಾಮಾನ್ಯ ಸಮಸ್ಯೆಗಳಿಗೆ ಸಾಂಬಾರ ಬಟ್ಟಲಿನಿಂದಲೇ ಕಷಾಯ ಸಿದ್ಧಪಡಿಸಿ ಕೊಡಬಹುದು ಎಂದರು.

ಸರಕಾರಿ ಆಯುರ್ವೇದ ಆಸ್ಪತ್ರೆ ವೈದ್ಯೆ ಡಾ. ಭಾಗ್ಯಲಕ್ಷ್ಮೇ ಕೆ., ಮಹಿಳೆ ಪತಿ ಮತ್ತು ಮಕ್ಕಳ ಕಾಳಜಿ ಮಾಡುವ ಜತೆಗೆ

ತನ್ನ ಆರೋಗ್ಯದತ್ತ ಗಮನ ಹರಿಸಬೇಕು. ಋುತುಬಂಧದಂತಹ ಸಂದರ್ಭದಲ್ಲಿಮಾನಸಿಕ ಉದ್ವೇಗ ಹಾಗೂ ಪರಿಣಾಮ ಎದುರಿಸಲು ಯೋಗ, ಧ್ಯಾನ ಉಪಯುಕ್ತ ಎಂದರು. ಆದರ್ಶ ವನಿತಾ ಸಮಾಜದ ಸಂಸ್ಥಾಪಕ ಅಧ್ಯಕ್ಷೆ ವಾಸಂತಿ ಹೆಗಡೆ ಮಾತನಾಡಿದರು. ನೇರಳೆ, ಉಪ್ಪಾಗೆ, ನೆಲ್ಲಿ, ರಕ್ತಚಂದನ ಮುಂತಾದ ಔಷಧ ಗಿಡಗಳನ್ನು ಕಾರ್ಯಕ್ರಮದಲ್ಲಿಭಾಗವಹಿಸಿದ್ದ 36 ಫಲಾನುಭವಿಗಳಿಗೆ ವಿತರಿಸಲಾಯಿತು.

ಆಶಾ ಕೆರೆಗದ್ದೆ ಪ್ರಾರ್ಥಿಸಿದರು. ಆದರ್ಶ ವನಿತಾ ಸಮಾಜದ ಅಧ್ಯಕ್ಷೆ ಸೀತಾ ಕೂರ್ಸೆ ಸ್ವಾಗತಿಸಿದರು. ಉಪಕಾರ್ಯದರ್ಶಿ ಅರುಂಧತಿ ಹೆಗಡೆ ನಿರೂಪಿಸಿದರು. ಸಮಾಜದ ಕಾರ್ಯದರ್ಶಿ ಶಾಂತಲಾ ಹೆಗಡೆ ವಂದಿಸಿದರು.

ಸರಕಾರಿ ಆಯುರ್ವೇದ ಆಸ್ಪತ್ರೆಯ ಕೃಷ್ಣಮೂರ್ತಿ, ವೀರಣ್ಣ ನಡುವಿನಮನಿ. ರೇಣುಕಾ ನಾಯ್ಕ ಸಂಘಟಣೆಗೆ ಸಹಕರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ