ಆ್ಯಪ್ನಗರ

ಎಲ್ಲ ರೈತರಿಗೆ ಆರ್ಥಿಕ ನೆರವು

ಹಿರೇಕೆರೂರು : 2019-20ನೇ ಸಾಲಿನಲ್ಲಿಲಾಕ್‌ಡೌನ್‌ನಿಂದಾಗಿ ಜಿಲ್ಲೆಯಲ್ಲಿಪ್ರಮುಖವಾಗಿ ಮುಸುಕಿನ ಜೋಳ ಬೇಡಿಕೆ ಇಲ್ಲದ ಕಾರಣ ಸಂಕಷ್ಟಕ್ಕೊಳಗಾದ ರೈತರಿಗೆ ಆರ್ಥಿಕ ನೆರವು ನೀಡುವುದು ಅವಶ್ಯಕವಾಗಿರುವುದನ್ನು ಮನಗಂಡು ರಾಜ್ಯ ಸರಕಾರವು ಮೆಕ್ಕೆಜೋಳ ಬೆಳೆದ ಪ್ರತಿಯೊಬ್ಬ ರೈತರಿಗೂ 5000 ರೂ.ಗಳ ಆರ್ಥಿಕ ನೆರವನ್ನು ನೇರ ನಗದು ವರ್ಗಾವಣೆ ಮುಖಾಂತರ ನೀಡಲು ರಾಜ್ಯ ಸರಕಾರದ ಮೂಲಕ ಆದೇಶ ಹೊರಡಿಸಿರುತ್ತಾರೆ. (ಆದೇಶ ಸಂ: ಅಗ್ರಿ-ಆ್ಯಕ್ಟ್ /104/2020 ಬೆಂಗಳೂರು ದಿನಾಂಕ:28.05.2020(ಪಿ1)).

Vijaya Karnataka 9 Jul 2020, 5:00 am
ಹಿರೇಕೆರೂರು : 2019-20ನೇ ಸಾಲಿನಲ್ಲಿಲಾಕ್‌ಡೌನ್‌ನಿಂದಾಗಿ ಜಿಲ್ಲೆಯಲ್ಲಿಪ್ರಮುಖವಾಗಿ ಮುಸುಕಿನ ಜೋಳ ಬೇಡಿಕೆ ಇಲ್ಲದ ಕಾರಣ ಸಂಕಷ್ಟಕ್ಕೊಳಗಾದ ರೈತರಿಗೆ ಆರ್ಥಿಕ ನೆರವು ನೀಡುವುದು ಅವಶ್ಯಕವಾಗಿರುವುದನ್ನು ಮನಗಂಡು ರಾಜ್ಯ ಸರಕಾರವು ಮೆಕ್ಕೆಜೋಳ ಬೆಳೆದ ಪ್ರತಿಯೊಬ್ಬ ರೈತರಿಗೂ 5000 ರೂ.ಗಳ ಆರ್ಥಿಕ ನೆರವನ್ನು ನೇರ ನಗದು ವರ್ಗಾವಣೆ ಮುಖಾಂತರ ನೀಡಲು ರಾಜ್ಯ ಸರಕಾರದ ಮೂಲಕ ಆದೇಶ ಹೊರಡಿಸಿರುತ್ತಾರೆ. (ಆದೇಶ ಸಂ: ಅಗ್ರಿ-ಆ್ಯಕ್ಟ್ /104/2020 ಬೆಂಗಳೂರು ದಿನಾಂಕ:28.05.2020(ಪಿ1)).
Vijaya Karnataka Web financial assistance to all farmers
ಎಲ್ಲ ರೈತರಿಗೆ ಆರ್ಥಿಕ ನೆರವು


ಈ ಕುರಿತು ರೈತರಿಗೆ ಅಲ್ಪಾವಧಿ ಆರ್ಥಿಕ ನೆರವು ನೀಡಲು ಕರ್ನಾಟಕ ಸರ್ಕಾರದ ಇ-ಆಡಳಿತದ ವತಿಯಿಂದ ಕೈಗೊಳ್ಳಲಾದ 2019-20ನೇ ಸಾಲಿನ ಬೆಳೆ ಸಮೀಕ್ಷೆ ತಂತ್ರಾಂಶದಲ್ಲಿದಾಖಲಾಗಿರುವ ಮುಸುಕಿನ ಜೋಳ ಬೆಳೆದ ರೈತರ ಪಟ್ಟಿಯನ್ನು ಗ್ರಾಮ ಪಂಚಾಯಿತಿ ಸೂಚನಾ ಫಲಕಗಳಲ್ಲಿಪ್ರಕಟಿಸಲು ಕ್ರಮ ಕೈಗೊಂಡಿದ್ದು ಇರುತ್ತದೆ. ಈ ಕುರಿತು ರೈತರು ತಮ್ಮ ಗ್ರಾಮ ಪಂಚಾಯಿತಿ ಮಟ್ಟದಲ್ಲಿಪ್ರಕಟಿಸಲಾದ ಪಟ್ಟಿಯಲ್ಲಿತಮ್ಮ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳಬೇಕಾಗಿ ತಿಳಿಸಿದೆ.

ಪಟ್ಟಿಯಲ್ಲಿರುವ ಜಂಟಿ ಖಾತೆ ಹೊಂದಿರುವ ರೈತರು 20 ರೂ. ಛಾಪಾ ಕಾಗದದಲ್ಲಿಎಲ್ಲಜಂಟಿ ಮಾಲೀಕರಿಂದ ಒಬ್ಬರಿಗೆ ಹಣ ವರ್ಗಾಯಿಸಲು ಒಪ್ಪಿಗೆ ನೀಡಿ ಅದನ್ನು ನೋಟರಿಯವರಿಂದ ಪ್ರಮಾಣೀಕರಿಸಿ ನಂತರ ಸಂಬಂಧಿಸಿದವರ ಆಧಾರ ಕಾರ್ಡ್‌, ಬ್ಯಾಂಕ್‌ ಪಾಸ್‌ ಪುಸ್ತಕ ಹಾಗೂ ಜಮೀನಿನ ಉತಾರದ ( ಆರ್‌ಟಿಸಿ) ಜೆರಾಕ್ಸ್‌ ಪ್ರತಿ ಲಗತ್ತಿಸಿ ತಮ್ಮ ಹೋಬಳಿ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಕ್ಕೆ ಸಲ್ಲಿಸುವುದು.

ಪೌತಿ ಪ್ರಕರಣಗಳಲ್ಲಿತಮ್ಮ ಪೂರ್ವಜರ ಹೆಸರಿನಲ್ಲಿಜಮೀನು ಇರುವ ರೈತರು ಗ್ರಾಮ ಲೆಕ್ಕಾಧಿಕಾರಿಗಳಿಂದ ವಂಶವೃಕ್ಷ ಮತ್ತು ವಾರಸುದಾರರ ಪ್ರಮಾಣ ಪತ್ರ ಹಾಗೂ ಇತರೆ ಕುಟುಂಬದ ಸದಸ್ಯರಿಂದ ನಿರಾಪೇಕ್ಷಣಾ ಪತ್ರವನ್ನು ಪಡೆದು ನೋಟರಿಯವರಿಂದ ದೃಢೀಕರಿಸಿ ನಂತರ ಸಂಬಂಧಿಸಿದವರ ಆಧಾರ ಕಾರ್ಡ, ಬ್ಯಾಂಕ್‌ ಪಾಸ್‌ಪುಸ್ತಕ ಹಾಗೂ ಜಮೀನಿನ ಎಲ್ಲಾಕಂಪ್ಯೂಟರ್‌ ಉತಾರದ (ಆರ್‌ಟಿಸಿ) ಜೆರಾಕ್ಸ್‌ ಪ್ರತಿಯನ್ನು ಲಗತ್ತಿಸಿ ಗ್ರಾಮ ಲೆಕ್ಕಾಧಿಕಾರಿಗಳಿಗೆ ಅಥವಾ ತಮ್ಮ ಹೋಬಳಿ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಕ್ಕೆ ಸಲ್ಲಿಸುವುದು.

ಈ ಸೌಲಭ್ಯವನ್ನು ಇಲಾಖೆಯ ಫ್ರೂಟ್ಸ್‌ ತಂತ್ರಾಂಶದಲ್ಲಿನೋಂದಣಿಯಾದ ರೈತರಿಗೆ ನೆರವು ವರ್ಗಾಯಿಸಲು ಸಾಧ್ಯವಾಗುತ್ತದೆ. ಆದ್ದರಿಂದ ತಂತ್ರಾಂಶದಲ್ಲಿನೊಂದಣಿಯಾಗದಿರುವ ರೈತರ ಪಟ್ಟಿ ಪ್ರಕಟಿಸಲಾಗಿದ್ದು ಪಟ್ಟಿ ಪರಿಶೀಲಿಸಿಕೊಂಡು ರೈತರು ತಮ್ಮ ಆಧಾರ ಮತ್ತು ಬ್ಯಾಂಕ್‌ ಪಾಸ್‌ ಪುಸ್ತಕದ ಜೆರಾಕ್ಸ್‌ ಪ್ರತಿ, ಸರ್ವೆ ನಂಬರ್‌ ವಿವರದೊಂದಿಗೆ ರೈತ ಸಂಪರ್ಕ ಕೇಂದ್ರದಲ್ಲಿಶೀಘ್ರವಾಗಿ ನೋಂದಣಿ ಮಾಡಿಸಿಕೊಳ್ಳುವುದು.ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಕಛೇರಿಯಯನ್ನು ಸಂಪರ್ಕಿಸಲು ಕೋರಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ