ಆ್ಯಪ್ನಗರ

ಬಿಜ್ಜೂರಿನ ಸುಗ್ಗಿ ಹಬ್ಬ ಮುಕ್ತಾಯ

ಗೋಕರ್ಣ : 7 ಗ್ರಾಮಗಳನ್ನೊಳಗೊಂಡ ಬಿಜ್ಜೂರು ಹೋಬಳಿಯ ದೊಡ್ಡ ಸುಗ್ಗಿ ಎಂದೇ ಪ್ರಸಿದ್ಧವಾದ ಹಾಲಕ್ಕಿಗಳ ಹಬ್ಬ ಸಂಭ್ರಮದಿಂದ ಕೊನೆಗೊಂಡಿತು. ಕೊನೆಯ ದಿನ ಅಪಾರ ಜನಸ್ತೋಮ ನೆರೆದಿತ್ತು.

Vijaya Karnataka 10 May 2019, 5:00 am
ಗೋಕರ್ಣ : 7 ಗ್ರಾಮಗಳನ್ನೊಳಗೊಂಡ ಬಿಜ್ಜೂರು ಹೋಬಳಿಯ ದೊಡ್ಡ ಸುಗ್ಗಿ ಎಂದೇ ಪ್ರಸಿದ್ಧವಾದ ಹಾಲಕ್ಕಿಗಳ ಹಬ್ಬ ಸಂಭ್ರಮದಿಂದ ಕೊನೆಗೊಂಡಿತು. ಕೊನೆಯ ದಿನ ಅಪಾರ ಜನಸ್ತೋಮ ನೆರೆದಿತ್ತು.
Vijaya Karnataka Web finish the harvest season of bijjur
ಬಿಜ್ಜೂರಿನ ಸುಗ್ಗಿ ಹಬ್ಬ ಮುಕ್ತಾಯ


ಇಲ್ಲಿನ ಆಲದಕೆರೆ ಬಿಜ್ಜೂರು ಹೋಬಳಿಯ ಮಧ್ಯದ ವಿಶಾಲ ಗದ್ದೆ ಬಯಲಲ್ಲಿ ಸುಗ್ಗಿ ಹಬ್ಬ ನಡೆಯಿತು. ಸಂಜೆ ವೇಳೆ ಕಳಶ ಜತೆಗೆ ಕರಿದೇವರನ್ನು ತಲೆ ಮೇಲೆ ಹೊತ್ತ ಗೌಡರಿಗೆ ಒಮ್ಮೆಲೇ ಆವೇಶ ಬಂದು ಹನುಮನ ಗುತ್ತಿನೆಡೆ ಓಡಿದರು. ಗೌಡರ ಆವೇಶವನ್ನು ಶಮನಗೊಳಿಸಲು ಆತನ ಹಿಂದೆ ಸುಗ್ಗಿ ಹೈಕಳು ಸಾಗಿದರು. ಇದು ನಿಜಕ್ಕೂ ರೋಮಾಂಚನದ ಅನುಭವ ನೀಡುವಂತಿತ್ತು. ನೆರೆದ ಭಕ್ತರು ಪುಳಕಗೊಂಡರು.

ನೂರಾರು ವರ್ಷದ ಐತಿಹಾಸಿಕ ಅಸ್ತಿತ್ವ ಪಡೆದ ಮೂಲನಿವಾಸಿಗಳ ಹಾಲಕ್ಕಿ ಸುಗ್ಗಿ ಹಬ್ಬದ ಜನಪದ ಕಲೆಗೆ ತೆರೆ ಬಿದ್ದಿತು. ಹಬ್ಬದಲ್ಲಿ ಪಾಲ್ಗೊಂಡವರು ಸಮುದ್ರ ಸ್ನಾನ ಮಾಡಿ ಸಮುದ್ರ ರಾಜನನ್ನು ನಮಿಸಿ ನಾಲ್ಕು ದಿನಗಳ ಹಬ್ಬವನ್ನು ಸಂಪನ್ನಗೊಳಿಸಿದರು. ಪರಂಪರಾಗತವಾಗಿ ಬಂದ ಈ ಕಲೆಯನ್ನು ಸರಕಾರ ದೇಶ ಮಟ್ಟದಲ್ಲಿ ಪ್ರಸಿದ್ಧಿ ಪಡೆಯುವಂತೆ ಗುರುತಿಸುವುದು ಅಗತ್ಯವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ