ಆ್ಯಪ್ನಗರ

ಕಾರವಾರಕ್ಕೆ ಮೊದಲ ಮಳೆ ಸಂಭ್ರಮ

ಕಾರವಾರ : ಅರಬ್ಬೀ ಸಮುದ್ರಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಉ.ಕ. ಜಿಲ್ಲೆಯ ಕರಾವಳಿಯ ತಾಲೂಕುಗಳಲ್ಲಿ ಮಳೆಯಾಗುತ್ತಿದೆ. ಇನ್ನೆರಡು ದಿನದಲ್ಲಿ ಇದು ನಿಲ್ಲುವುದರೊಡನೆ ಮುಂಗಾರು ಪ್ರವೇಶಿಸಲಿದ್ದು, ಸಾಂಪ್ರದಾಯಿಕ ವರ್ಷಧಾರೆಗೆ ಚಾಲನೆ ದೊರೆಯಲಿದೆ.

Vijaya Karnataka 13 Jun 2019, 5:00 am
ಕಾರವಾರ : ಅರಬ್ಬೀ ಸಮುದ್ರಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಉ.ಕ. ಜಿಲ್ಲೆಯ ಕರಾವಳಿಯ ತಾಲೂಕುಗಳಲ್ಲಿ ಮಳೆಯಾಗುತ್ತಿದೆ. ಇನ್ನೆರಡು ದಿನದಲ್ಲಿ ಇದು ನಿಲ್ಲುವುದರೊಡನೆ ಮುಂಗಾರು ಪ್ರವೇಶಿಸಲಿದ್ದು, ಸಾಂಪ್ರದಾಯಿಕ ವರ್ಷಧಾರೆಗೆ ಚಾಲನೆ ದೊರೆಯಲಿದೆ.
Vijaya Karnataka Web first rain rush to karwar
ಕಾರವಾರಕ್ಕೆ ಮೊದಲ ಮಳೆ ಸಂಭ್ರಮ


2 ತಿಂಗಳಿಂದ ಬಿಸಿಲ ಧಗೆಗೆ ತತ್ತರಿಸಿದ್ದ ಜನತೆಗೆ ಮಳೆಯ ಸಿಂಚನವು ಸಂತಸವನ್ನು ನೀಡಿತು. ಪಶ್ಚಿಮ ಕರಾವಳಿಯಲ್ಲಿ ಚಂಡಮಾರುತದ ಭಯವಿದ್ದರೂ, ಮಳೆ ವಾತಾವರಣ ತಂಪನ್ನಾಗಿಸಿ ಮುದ ನೀಡಿತು.

ಕಾರವಾರದ ನಗರದಲ್ಲಂತೂ ನಾಗರಿಕರು ಛತ್ರಿ, ರೇನ್‌ಕೋಟು ಧರಿಸಿ ರಸ್ತೆಗಿಳಿದು ತಮ್ಮ ಎಂದಿನ ಕಾಯಕದಲ್ಲಿ ತೊಡಗಿಕೊಂಡರು. ಶಾಲಾ ವಿದ್ಯಾರ್ಥಿಗಳಂತೂ ಲವಲವಿಕೆಯಿಂದ ಮೊದಲ ಮಳೆಯ ಸಂಭ್ರಮ ಅನುಭವಿಸಿದರು. ಮಳೆಯ ರಭಸದಿಂದ, ರಸ್ತೆಯ ಮೇಲೆಲ್ಲಾ ಅಪಾರ ಪ್ರಮಾಣದ ನೀರು ಹರಿದಿದ್ದರಿಂದ ಚರಂಡಿಗಳು ಕೆಲಕಾಲ ತುಂಬಿ ಹರಿದವು.

ಮುಂಗಾರು ಇನ್ನೆರಡು ದಿನ ತಡ : ಮಂಗಾರು ಕೇರಳ ರಾಜ್ಯವನ್ನು ಸಂಪೂರ್ಣ ಪ್ರವೇಶಿಸಿದೆ. ಆದರೆ ಕರ್ನಾಟಕದ ಕರಾವಳಿಯ ತೀರದ ಭಾಗಗಳಲ್ಲಿ ವಾಯುಭಾರ ಕುಸಿತದ ಪರಿಣಾಮ, ಅತಿಯಾದ ಗಾಳಿಗೆ ಮುಂಗಾರು ನೆರೆಯ ಮಹಾರಾಷ್ಟ್ರದತ್ತ ಸಾಗಿದೆ. ವಾಯುಭಾರ ಕುಸಿತ ಕಡಿಮೆಯಾದ ಮೇಲೆ ಮುಂಗಾರು ಇಲ್ಲಿಯ ಕಡಲ ತಡಿಯ ಧರೆಗೆ ಅಪ್ಪಳಿಸಲಿದೆ.

ಧರೆಗುರುಳಿದ ಮರಗಳು : ಕಾರವಾರ, ಅಂಕೋಲಾ, ಕುಮಟಾ, ಭಟ್ಕಳ ಭಾಗಗಳಲ್ಲಿ ಮರಗಳು ಬಿದ್ದು, ಹಾನಿಯಾದ ಬಗ್ಗೆ ವರದಿಯಾಗಿದೆ. ಭೂಮಿಯು ಮಳೆಯಿಂದ ತೇವಗೊಳ್ಳುತ್ತಲೇ, ಮಣ್ಣು ಸಡಿಲಗೊಂಡು ಮರಗಳು ಉರುಳುತ್ತಿದೆ. ಗಾಳಿಯ ಆರ್ಭಟವು ಕೂಡ ಹೆಚ್ಚಾಗಿದೆ.

ಜಿಲ್ಲೆಯಲ್ಲಿ ಮುಂಗಾರು ಎದುರಿಸಲು ಸಾಕಷ್ಟು ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆ ಎಂದು ಜಿಲ್ಲಾಡಳಿತ ಪ್ರಕಟಿಸಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಸಿದ್ಧತೆ ನಡೆದಿಲ್ಲ ಎನ್ನುವುದು ನಾಗರಿಕರ ಆರೋಪವಾಗಿದೆ.

ಕಂಟ್ರೋಲ್‌ ರೂಂ ಆರಂಭ : ಮಳೆಗಾಲದಲ್ಲಿ ಸಾರ್ವಜನಿಕರ ಸುರಕ್ಷ ತೆಯ ದೃಷ್ಟಿಯಿಂದ 27*7 ತುರ್ತು ಸೇವೆಗೆ ಜಿಲ್ಲಾಡಳಿತ ಕಂಟ್ರೋಲ್‌ ರೂಂ ತೆರೆದಿದೆ. ಸಾರ್ವಜನಿಕರು ಟೋಲ್‌ ಫ್ರೀ ಸಂಖ್ಯೆ 1077 ಅಥವಾ ವಾಟ್ಸ್‌ಆ್ಯಪ್‌ ನಂ. 9483511015 ಸಂಪರ್ಕಿಸಲು ಕೋರಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ