Please enable javascript.ಕ್ಯಾಶ್‌ಲೆಸ್‌ ವ್ಯವಹಾರಕ್ಕೆ ಯುವಕರೇ ಫಸ್ಟ್‌ - First, young men kyasles business - Vijay Karnataka

ಕ್ಯಾಶ್‌ಲೆಸ್‌ ವ್ಯವಹಾರಕ್ಕೆ ಯುವಕರೇ ಫಸ್ಟ್‌

ವಿಕ ಸುದ್ದಿಲೋಕ 3 Jan 2017, 5:00 am
Subscribe

ಕಾರವಾರ:ಜಿಲ್ಲೆಯಲ್ಲಿ ಕ್ಯಾಶ್‌ಲೆಸ್‌ ವ್ಯವಹಾರದತ್ತ ಯುವಜನತೆ ವಾಲುತ್ತಿರುವುದು ಗೋಚರಿಸುತ್ತಿದ್ದು,ಪ್ರಧಾನಿ ಆಧುನೀಕರಣದ ಡಿಜಿಟಲ್‌ ಇಂಡಿಯಾ ಪರಿಕಲ್ಪನೆಗೆ

first young men kyasles business
ಕ್ಯಾಶ್‌ಲೆಸ್‌ ವ್ಯವಹಾರಕ್ಕೆ ಯುವಕರೇ ಫಸ್ಟ್‌

ಕಾರವಾರ:ಜಿಲ್ಲೆಯಲ್ಲಿ ಕ್ಯಾಶ್‌ಲೆಸ್‌ ವ್ಯವಹಾರದತ್ತ ಯುವಜನತೆ ವಾಲುತ್ತಿರುವುದು ಗೋಚರಿಸುತ್ತಿದ್ದು,ಪ್ರಧಾನಿ ಆಧುನೀಕರಣದ ಡಿಜಿಟಲ್‌ ಇಂಡಿಯಾ ಪರಿಕಲ್ಪನೆಗೆ ಯುವಜನತೆ ಅತ್ಯಂತ ಆಸಕ್ತಿಯಿಂದ ಸ್ಪಂಧಿಸುತ್ತಿದೆ.ಆದರೆ ಆಧುನಿಕ ಯುಗದ ವೇಗಕ್ಕೆ ತಕ್ಕಂತೆ ಹೊಂದಿಕೊಳ್ಳಲು ಸಾಧ್ಯವಾಗದ ಹಿರಿಯ ತಲೆಮಾರು ಮಾತ್ರ ಈ ವ್ಯವಹಾರಕ್ಕೆ ಸೂಕ್ತವಾಗಿ ಸ್ಪಂದಿಸಲು ಹಿಂದೇಟು ಹಾಕುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.

ಜಿಲ್ಲೆಯ ವಿವಿಧ ಶೋರೂಮ್‌,ಪೆಟ್ರೋಲ್‌ ಬಂಕ್‌,ಡಿಪಾರ್ಟ್‌ಮೆಂಟಲ್‌ ಸ್ಟೋರ್‌ಗಳಲ್ಲಿ ಈಗಾಗಲೇ ಸ್ವೈಪ್‌ ಮಶೀನ್‌ಗಳನ್ನು ಅಳವಡಿಸಿಕೊಂಡು ವ್ಯವಹಾರ ನಡೆಸಲಾಗುತ್ತಿದೆ.ಯುವಜನರು ಕ್ರೆಡಿಟ್‌, ಡೆಬಿಟ್‌ಕಾರ್ಡ್‌, ಫೀಚರ್‌ ಫೋನ್‌ ಬಳಸಿಕೊಳ್ಳಲು ಉತ್ಸುಕತೆಯಿಂದ ಮುಂದಾಗುತ್ತಿರುವುದು ಕಂಡು ಬರುತ್ತಿದೆ.

ಇದಲ್ಲದೇ ಸ್ಮಾರ್ಟ್‌ ಫೋನ್‌ ಬಳಸುವವರಿಗೆ ಯುಪಿಐ ಆ್ಯಪ್‌,ಮೊಬೈಲ್‌ ವ್ಯಾಲೇಟ್‌,ಪ್ರಿಪೇಯ್ಡ್‌ ಕಾರ್ಡ್‌,ಪಿಒಎನ್‌,ಇಂಟರ್‌ನೆಟ್‌ ಬ್ಯಾಂಕಿಂಗ್‌,ಮೊಬೈಲ್‌ ಬ್ಯಾಂಕಿಂಗ್‌,ಮೈಕ್ರೋ ಎಟಿಎಂ ಗಳನ್ನು ಯುವಕರು ಹೆಚ್ಚಿನ ಆಸಕ್ತಿಯಿಂದ ಬಳಸಿಕೊಳ್ಳುತ್ತಿದ್ದಾರೆ.

ಎಲ್ಲ ವರ್ಗದ ಯುವಕರಿಗೂ ಪ್ರಯೋಜನ:ಇಂದಿನ ಕಂಪ್ಯೂಟರ್‌ ಯುಗದಲ್ಲಿ ಯುವಜನರು ಅಧಿಕ ಜ್ಞಾನ ಹೊಂದಿದ್ದು,ಇದು ಆಧುನಿಕ ಸಲಕರಣೆಗಳನ್ನು ಬಳಸಲು ಅವರಿಗೆ ನೆರವಾಗಿದೆ. ಮುಂದಿನ ದಿನಗಳಲ್ಲಿ ಸದ್ಯ ಬಿಡುಗಡೆ ಮಾಡಿರುವ ಭೀಮ್‌ ಆ್ಯಪ್‌ಗಳು ಡಿಜಿಟಲ್‌ ಇಂಡಿಯಾದ ಕ್ಯಾಶ್‌ಲೆಸ್‌ ವಹಿವಾಟಿಗೆ ವೇಗ ಹೆಚ್ಚಿಸಲಿವೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಗ್ರಾಮೀಣ ಯುವಕರಲ್ಲಿಯೂ ಆಸಕ್ತಿ:ಕಂಪ್ಯೂಟರ್‌ , ಮೊಬೈಲ್‌,ಇಂಟರ್‌ನೆಟ್‌,ಆನ್‌ ಲೈನ್‌ ವ್ಯವಹಾರ ನಡೆಸುವ ಯುವಕರ ಗುಂಪು ಒಂದೆಡೆಯಾದರೆ,ಇವುಗಳ ಕಿಂಚಿತ್ತೂ ಜ್ಞಾನ ಇಲ್ಲದ ಎಲ್ಲ ವರ್ಗದ ಜನರಿಗೆ ಭೀಮ್‌ ಆ್ಯಪ್‌ ಸಹಕಾರಿಯಾಗಲಿದೆ ಎಂದು ಸರಕಾರ ಹೇಳಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು,ಮೀನುಗಾರರು,ಅಸಂಘಟಿತ ವಲಯದ ಕೂಲಿ ಕಾರ್ಮಿಕರು ಇದರ ಸದುಪಯೋಗ ಪಡೆದುಕೊಳ್ಳಲಿದ್ದಾರೆ. ಈ ಎಲ್ಲ ಸಮುದಾಯ,ವರ್ಗಗಳ ಯುವಜನರಲ್ಲಿ ಹೆಚ್ಚಿನವರು 10 ನೇ ತರಗತಿ ದಾಟದವರಾಗಿದ್ದಾರೆ.

ಇವರಲ್ಲಿ ಅಧಿಕ ಸಂಖ್ಯೆಯ ಜನರು ಗ್ರಾಮೀಣ ಭಾಗದಲ್ಲಿ ವಾಸವಾಗಿದ್ದಾರೆ. ಜಿಲ್ಲೆಯ ಪ್ರತಿಯೊಂದು ಓಣಿ, ಕೇರಿಗಳಲ್ಲಿ ಮಕ್ಕಳು,ಮಹಿಳೆಯರು,ಯುವಕರು, ಹಿರಿಯರ ಕೈಯಲ್ಲಿ ಮೊಬೈಲ್‌ ಸೆಟ್‌ ನೋಡಬಹುದು.ಇದಲ್ಲದೇ ವಿವಿಧ ಬ್ಯಾಂಕ್‌ಗಳು ನೀಡಿರುವ ಕ್ರೆಡಿಟ್‌,ಡೆಬಿಟ್‌ ಕಾರ್ಡ್‌ಗಳನ್ನು ಉಪಯೋಗಿಸುತ್ತಿದ್ದಾರೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಕೂಡ ಕ್ಯಾಸ್‌ಲೆಸ್‌ ವ್ಯವಹಾರಕ್ಕೆ ಹೆಚ್ಚಿನ ಉತ್ತೇಜನ ಸಿಗುತ್ತಿದೆ.

ನಗದು ರಹಿತ ಹಳ್ಳಿಗಳಾಗಿ ಪರಿವರ್ತಿಸಲು ಬ್ಯಾಂಕ್‌ ಪಣ:ಜಿಲ್ಲೆಯ ಪ್ರಮುಖ ಬ್ಯಾಂಕ್‌ಗಳು ಜಿಲ್ಲೆಯ ಹಲವು ಗ್ರಾಮಗಳನ್ನು ದತ್ತು ಪಡೆದುಕೊಂಡು ಡಿಜಿಟಲ್‌ ಇಂಡಿಯಾದ ಮೂಲ ಉದ್ದೇಶ ಸಾಕಾರಗೊಳಿಸಲು ಪ್ರಯತ್ನಿಸುತ್ತಿವೆ. ನಗದು ರಹಿತ ಹಳ್ಳಿಗಳಾಗಿ ಪರಿವರ್ತಿಸಲು ಬ್ಯಾಂಕ್‌ಗಳು ಪಣ ತೊಟ್ಟಿವೆ. ಅವುಗಳಲ್ಲಿ ಕಾರವಾರದ ಸಿಂಡಿಕೇಟ್‌ ಬ್ಯಾಂಕ್‌ ಅಂಕೋಲಾ ತಾಲೂಕಿನ ಹಾರವಾಡ ಗ್ರಾಮವನ್ನು ದತ್ತು ಪಡೆದುಕೊಂಡಿದೆ.ಗ್ರಾಮದಲ್ಲಿ ನೂರಕ್ಕೆ ನೂರು ನಗದು ರಹಿತ ವ್ಯವಹಾರ ಮಾಡಲು ಯೋಜನೆ ರೂಪಿಸಿದೆ. ಗ್ರಾಮದ ಜನರಲ್ಲಿ ವಿಶೇಷವಾಗಿ ಯುವಕರಲ್ಲಿ ಜಾಗೃತಿ ಮೂಡಿಸುತ್ತಿದೆ.ಇಂತಹ ಜಾಗೃತಿ ಶಿಬಿರಗಳಲ್ಲಿ ಯುವಕ,ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕಾರವಾರ,ಅಂಕೋಲಾ,ಶಿರಸಿ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ನಗದು ರಹಿತ ವ್ಯವಹಾರಕ್ಕಾಗಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಆ ಮೂಲಕ ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಕ್ಯಾಸ್‌ಲೆಸ್‌ ವ್ಯವಹಾರ ಯಶಸ್ವಿಗೊಳಿಸಲು ಬ್ಯಾಂಕ್‌ ಸರ್ವ ರೀತಿಯ ಪ್ರಯತ್ನ ನಡೆಸುತ್ತಿದೆ ಎನ್ನುತ್ತಾರೆ ಬ್ಯಾಂಕ್‌

ನಗದು ರಹಿತ ವ್ಯವಹಾರಕ್ಕೆ ಬಹುಮಾನ :

ಕೇಂದ್ರ ಸರಕಾರ ಡಿಜಿಟಲ್‌ ಇಂಡಿಯಾ ಮೂಲಕ ನಗದು ರಹಿತ ವ್ಯವಹಾರಕ್ಕಾಗಿ ನಗದು ಬಹುಮಾನ ನೀಡುವುದರ ಮೂಲಕ ಉತ್ತೇಜಿಸುತ್ತಿದೆ. ಇದರಿಂದ ಯುವಕರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಡಿಜಿಟಲ್‌ ಇಂಡಿಯಾಕ್ಕೆ ಹೊಂದಿಕೊಳ್ಳಲಾಗದ ಹಿರಿಯರು ಹಾಗೂ ಫೋನ್‌ ಬಳಸದವರಿಗೆ ಆಧಾರ್‌ ಕಾರ್ಡ್‌ ಎಇಪಿಎಸ್‌ ಸಹಕಾರಿಯಾಗಲಿದೆ. ಅಲ್ಲದೇ ಕೇಂದ್ರ ಸರಕಾರ ಬಿಡುಗಡೆ ಮಾಡಿರುವ ಭೀಮ್‌ ಆ್ಯಪ್‌ ನೆರವಾಗಲಿದೆ ಎಂಬ ಮಾತು ಜಿಲ್ಲೆಯ ಜನರಿಂದ ಕೇಳಿ ಬರುತ್ತಿದೆ.

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ