ಆ್ಯಪ್ನಗರ

ನೆಟ್‌ವರ್ಕ್ ಸೇವೆ ಸರಿಪಡಿಸಿ

ಕಾರವಾರ : ಜಿಲ್ಲೆಯಲ್ಲಿಬಿಎಸ್‌ಎನ್‌ಎಲ್‌ ಇಂಟರ್‌ನೆಟ್‌ ಸೇವೆ ಮಂದಗತಿಯಲ್ಲಿದ್ದು, ಇದರಿಂದ ಸಾರ್ವಜನಿಕರ ಕೆಲಸ ವಿಳಂಬ ವಾಗುತ್ತಿದೆ. ಸರಕಾರದ ಯೋಜನೆ ಯಶಸ್ವಿಯಾಗುವಲ್ಲಿಬಿಎಸ್‌ಎನ್‌ಎಲ್‌ ಕಾರ್ಯನಿರ್ವಹಿಸುವಲ್ಲಿಸಕ್ರಿಯವಾಗಬೇಕು ಎಂದು ಸಂಸದ ಅನಂತಕುಮಾರ ಹೆಗಡೆ ಅಧಿಕಾರಿಗಳಿಗೆ ಸೂಚಿಸಿದರು.

Vijaya Karnataka 24 Jun 2020, 5:00 am
ಕಾರವಾರ : ಜಿಲ್ಲೆಯಲ್ಲಿಬಿಎಸ್‌ಎನ್‌ಎಲ್‌ ಇಂಟರ್‌ನೆಟ್‌ ಸೇವೆ ಮಂದಗತಿಯಲ್ಲಿದ್ದು, ಇದರಿಂದ ಸಾರ್ವಜನಿಕರ ಕೆಲಸ ವಿಳಂಬ ವಾಗುತ್ತಿದೆ. ಸರಕಾರದ ಯೋಜನೆ ಯಶಸ್ವಿಯಾಗುವಲ್ಲಿಬಿಎಸ್‌ಎನ್‌ಎಲ್‌ ಕಾರ್ಯನಿರ್ವಹಿಸುವಲ್ಲಿಸಕ್ರಿಯವಾಗಬೇಕು ಎಂದು ಸಂಸದ ಅನಂತಕುಮಾರ ಹೆಗಡೆ ಅಧಿಕಾರಿಗಳಿಗೆ ಸೂಚಿಸಿದರು.
Vijaya Karnataka Web fix network service
ನೆಟ್‌ವರ್ಕ್ ಸೇವೆ ಸರಿಪಡಿಸಿ


ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಬಿಎಸ್‌ಎನ್‌ಎಲ್‌, ಬಿಬಿಎನ್‌ಎಲ್‌, ಸಿಎಸ್‌ಸಿ, ಹೆಸ್ಕಾಂ, ನಾಡಕಚೇರಿ, ಆಹಾರ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಭೆಯನ್ನುದ್ದೇಶಿಸಿ ಅವರು ಮಾತನಾಡಿ,ಜಿಲ್ಲೆಯಲ್ಲಿಬಿಎಸ್‌ಎನ್‌ಎಲ್‌ ನೆಟವರ್ಕ್ ವೇಗ ಹಾಗೂ ಸಂಪರ್ಕವನ್ನು ಜುಲೈ 15ರೊಳಗೆ ಕಾರ್ಯಗತಗೊಳಿಸಬೇಕು. ಕಳಪೆಮಟ್ಟದ ಕನೆಕ್ಷನ್‌ ಸರಿಪಡಿಸಿ ಉತ್ತಮ ಮಟ್ಟದ ಸೇವೆ ಒದಗಿಸುವ ವ್ಯವಸ್ಥೆ ಶೀಘ್ರವೇ ಜಾರಿಯಾಗಬೇಕು, ಪ್ರತಿ ತಿಂಗಳು ಜಿಪಂ ಜೊತೆಗೆ ಬಿಎಸ್‌ಎನ್‌ಎಲ್‌ ಅಧಿಕಾರಿಗಳು ಸಭೆ ನಡೆಸಿ ವರದಿಯನ್ನು ಸಲ್ಲಿಸಬೇಕು ಎಂದು ಸಂಸದರು ಹೇಳಿದರು.

ಜಿಲ್ಲಾಧಿಕಾರಿ ಡಾ.ಹರೀಶಕುಮಾರ ಕೆ. ಅವರು ಮಾತನಾಡಿ, ಬಿಎಸ್‌ಎನ್‌ಎಲ್‌ನ ಸ್ಥಳೀಯ ಹಾಗೂ ಉನ್ನತಮಟ್ಟದ ಅಧಿಕಾರಿಗಳು ಸಮಸ್ಯೆ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡಿದ್ದಾರೆ. ಸಂಸ್ಥೆಗಳ ನಡುವೆ ಯಾವುದೇ ಆತಂರಿಕ ಭಿನ್ನಾಬಿಪ್ರಾಯಗಳಿಗೆ ಆಸ್ಪದ ನೀಡದೇ ಜುಲೈ 15ರೊಳಗೆ ಸಮಸ್ಯೆ ಬಗೆ ಹರಿಸಿ ಉತ್ತಮ ಮಟ್ಟದ ನೆಟವರ್ಕ್ ಸಂಪರ್ಕವನ್ನು ಒದಗಿಸುವಲ್ಲಿಕಾರ್ಯಪ್ರವೃತ್ತರಾಗಬೇಕೆಂದರು.

ಸಭೆಯಲ್ಲಿಜಿಲ್ಲಾಪಂಚಾಯತ ಸಿಇಒ ಎಂ.ರೋಷನ್‌, ಶಾಸಕಿ ರೂಪಾಲಿ ನಾಯ್ಕ, ಬಿಎಸ್‌ಎನ್‌ಎಲ್‌ ಅಧಿಕಾರಿಗಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ