ಆ್ಯಪ್ನಗರ

ಕೋಗಿಲಬನದಲ್ಲಿಉಚಿತ ಆರೋಗ್ಯ ತಪಾಸಣೆ

ದಾಂಡೇಲಿ : ಸಮೀಪದ ಕೋಗಿಲಬನ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿಆರೋಗ್ಯ ಉಚಿತ ತಪಾಸಣೆ ಮತ್ತು ಔಷಧಿ ವಿತರಣಾ ಶಿಬಿರ ಏರ್ಪಡಿಸಲಾಗಿತ್ತು.

Vijaya Karnataka 28 Sep 2019, 5:00 am
ದಾಂಡೇಲಿ : ಸಮೀಪದ ಕೋಗಿಲಬನ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿಆರೋಗ್ಯ ಉಚಿತ ತಪಾಸಣೆ ಮತ್ತು ಔಷಧಿ ವಿತರಣಾ ಶಿಬಿರ ಏರ್ಪಡಿಸಲಾಗಿತ್ತು.
Vijaya Karnataka Web free health checkups
ಕೋಗಿಲಬನದಲ್ಲಿಉಚಿತ ಆರೋಗ್ಯ ತಪಾಸಣೆ


ದಾಂಡೇಲಿ ಶಿಕ್ಷಣ ಸಂಸ್ಥೆಯ ಬಂಗೂರನಗರ ಪದವಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕ, ರೆಡ್‌ ಕ್ರಾಸ್‌ ಕ್ಲಬ್‌ ಮತ್ತು ಭಾರತೀಯ ವೈದ್ಯರ ಸಂಘ ದಾಂಡೇಲಿ ಇವರ ಆಶ್ರಯದಲ್ಲಿರಾಷ್ಟ್ರೀಯ ಸೇವಾ ಯೋಜನೆಯ ಸುವರ್ಣ ಮಹೋತ್ಸವದ ಅಂಗವಾಗಿ ನಡೆದ ಶಿಬಿರದಲ್ಲಿಹಿರಿಯ ವೈದ್ಯ ಡಾ.ಆರ್‌.ಕೆ.ಕುಲಕರ್ಣಿ, ಡಾ.ಶೇಖರ ಹಿರೇಮಠ ಅವರು ಗ್ರಾಮದ ಜನರ ಆರೋಗ್ಯ ತಪಾಸಣೆ ಮಾಡುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು. ಡಾ.ಭಾವನಾ ಅಂಕೋಲೆಕರ, ಡಾ.ಬಿ.ಕೆ.ಪಾಟೀಲ, ಡಾ.ಎ.ಕೆ.ಚಿದಾನಂದ, ಡಾ.ಸಲ್ಮಾನ್‌ ಅವರು ಸುಮಾರು 250ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ಮಾಡಿ ಔಷಧಿ ವಿತರಿಸಿದರು.

ಬಂಗೂರನಗರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಶೋಭಾ ಶರ್ಮಾ, ಉಪ ಪ್ರಾಚಾರ್ಯ ಡಾ.ಎಚ್‌.ವೈ.ಮೆರವಾಡೆ, ಪ್ರೊ.ಲಕ್ಷಿತ್ರ್ಮ ಪರಬ, ಗ್ರಾಪಂ ಉಪಾಧ್ಯಕ್ಷ ಗಣೇಶ ನಾಯಕ, ವಕೀಲ ಎಂ.ಸಿ.ಹೆಗಡೆ, ಸ.ಕಿ.ಪ್ರಾ. ಶಾಲೆಯ ಮುಖ್ಯಾಧ್ಯಾಪಕ ಕೆ.ಎಲ್‌.ರಾಠೋಡ, ವಕೀಲ ಸೋಮಕುಮಾರ ಎಸ್‌., ಹಿಂದೂ ಜಾಗರಣಾ ವೇದಿಕೆಯ ಮುಖ್ಯಸ್ಥರಾದ ಸುಧೀರ ಶೆಟ್ಟಿ, ವಿನಯಕುಮಾರ ಹುಕ್ಕೇರಿ, ಪ್ರಭು ಅರೋಟಗಿ, ಪ್ರವೀಣ ಪರಮಾಲ, ಎನ್‌.ಎಸ್‌.ಎಸ್‌.ದಂಡ ನಾಯಕ ಭರತ ಗಡೆಪ್ಪನವರ, ದಂಡ ನಾಯಕಿ ಜ್ಯೋತಿ ಮಾಲುಗೋಳ, ರೆಡ್‌ ಕ್ರಾಸ್‌ ನಾಯಕಿ ಫಜಿಲತ್‌ ಶೇಖ್‌ ಮತ್ತು 50ಕ್ಕೂ ಹೆಚ್ಚು ಎನ್‌.ಎಸ್‌.ಎಸ್‌. ಸ್ವಯಂ ಸೇವಕ/ಸೇವಕಿಯರು ಪಾಲ್ಗೊಂಡಿದ್ದರು. ಫಜಿಲತ್‌ ಶೇಖ ಸ್ವಾಗತಿಸಿದರು. ಪ್ರೊ.ಎಸ್‌.ಎಸ್‌.ಹಿರೇಮಠ ವಂದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ