ಆ್ಯಪ್ನಗರ

ಕೈಗಾ ವಿಸ್ತರಣೆಗೆ ವಿರೋಧ: ಸ್ವರ್ಣವಲ್ಲೀ ಶ್ರೀಗಳಿಂದ ಅಮಿತ್‌ ಶಾ ಭೇಟಿ

ಕೈಗಾ ಅಣು ವಿದ್ಯುತ್‌ ಸ್ಥಾವರ ವಿಸ್ತರಣೆಯನ್ನು ವಿರೋಧಿಸಿ ಅಮಿತ್‌ ಶಾ ಅವರನ್ನು ಶ್ರೀ ಸೋಂದಾ ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಭೇಟಿ ಮಾಡಿದ್ದಾರೆ. ಅಮಿತ್‌ ಶಾ ಹುಬ್ಬಳ್ಳಿಗೆ ಬಂದಾಗ ಈ ಭೇಟಿ ನಡೆದಿದೆ.

Vijaya Karnataka Web 19 Jan 2020, 6:50 am
ಶಿರಸಿ: ಹುಬ್ಬಳ್ಳಿಗೆ ಶನಿವಾರ ಆಗಮಿಸಿದ್ದ ಕೇಂದ್ರ ಗೃಹ ಮಂತ್ರಿ ಅಮಿತ್‌ ಶಾ ಅವರನ್ನು ಶ್ರೀ ಸೋಂದಾ ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರು ಭೇಟಿಯಾಗಿ ಉತ್ತರ ಕನ್ನಡದ ಕೈಗಾ ಅಣು ವಿದ್ಯುತ್‌ ಸ್ಥಾವರದ ದುಷ್ಪರಿಣಾಮಗಳ ಬಗ್ಗೆ ಸಮಾಲೋಚಿಸಿದರು.
Vijaya Karnataka Web 4bda4ad5-0292-4353-be0e-ce156031c4bc


ಅಣು ವಿದ್ಯುತ್‌ ಸ್ಥಾವರ ಸ್ಥಾಪನೆ ಮಾಡಿದ ನಂತರ ಸುತ್ತಲಿನ ಪ್ರದೇಶಗಳ ಜನರಲ್ಲಿ ಕ್ಯಾನ್ಸರ್‌ ಸೇರಿದಂತೆ ನಾನಾ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಅದರ ಬಗ್ಗೆ ಕೇಂದ್ರ ಸರಕಾರ ಸಮಗ್ರ ಸಮೀಕ್ಷೆ ನಡೆಸಬೇಕು ಮತ್ತು ಇದೇ ಕಾರಣದಿಂದ ಕೈಗಾ ಅಣು ಸ್ಥಾವರದ ಉದ್ದೇಶಿತ 5, 6ನೇ ಘಟಕಗಳ ವಿಸ್ತರಣೆ ಕೈಬಿಡಬೇಕು ಎಂಬುದಾಗಿ ಶ್ರೀಗಳು ಅಮಿತ್‌ ಶಾ ಅವರಲ್ಲಿ ಮನವಿ ಮಾಡಿಕೊಂಡರು.

ಇದಕ್ಕೆ ಸ್ಪಂದಿಸಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಈ ಹಿಂದೆ ಮುಂಬಯಿಯ ಟಾಟಾ ಇನ್ಸ್ಟಿಟ್ಯೂಟ್ ನಡೆಸಿದ ಆರೋಗ್ಯ ಸಮೀಕ್ಷೆ ವರದಿ ಅಂಶಗಳನ್ನು ತರಿಸಿಕೊಂಡು ಪರಿಶೀಲಿಸುವುದಾಗಿ ತಿಳಿಸಿದರು. ಅಲ್ಲದೇ ನಂತರದಲ್ಲಿ ತಮ್ಮ ನೇತೃತ್ವದ ನಿಯೋಗವನ್ನು ದೆಹಲಿಗೆ ಕರೆಸಿಕೊಂಡು ಸಮಾಲೋಚಿಸುವುದಾಗಿ ಹೇಳಿದರು.

ಹುಬ್ಬಳ್ಳಿಗೆ ಅಮಿತ್ ಶಾ ಆಗಮನ: ಕಪ್ಪು ಬಲೂನು ಹಾರಾಟ, ಪ್ರತಿಭಟನಾಕಾರರ ಬಂಧನ!

ಈ ವೇಳೆ ಸೋಂದಾ ಸಾದ್ವಿ ಜೈನ ಮಠದ ಶ್ರೀ ಭಟ್ಟಾಕಲಂಕ ಸ್ವಾಮೀಜಿ, ಸಂಸದರಾದ ಪ್ರಹ್ಲಾದ ಜೋಶಿ ಮತ್ತು ನಳಿನ್‌ ಕುಮಾರ್‌ ಕಟೀಲ್‌, ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ್, ವಿ.ಎಸ್‌. ಪಾಟೀಲ್‌, ರೂಪಾಲಿ ನಾಯ್ಕ, ಕೈಗಾ ಅಣು ವಿದ್ಯುತ್‌ ಸ್ಥಾವರ ವಿಸ್ತರಣೆ ವಿರೋಧಿ ಹೋರಾಟ ಸಮಿತಿಯ ಗುರುಪ್ರಸಾದ್‌ ಪಾಯ್ದೆ ಮತ್ತು ಶಾಂತಾರಾಮ ಬಾಂದೇಕರ, ಸ್ವರ್ಣವಲ್ಲೀ ಸಂಸ್ಥಾನದ ಅಧ್ಯಕ್ಷ ವಿ ಎನ್‌ ಹೆಗಡೆ ಬೊಮ್ಮನಳ್ಳಿ, ನಾರಾಯಣ ಹೆಗಡೆ ಗಡಿಕೆ ಮತ್ತಿತರರಿದ್ದರು.

ಕೆಲವೇ ತಿಂಗಳಲ್ಲಿ ದೇಶದ ಜ್ವಲಂತ ಸಮಸ್ಯೆ ನಿವಾರಿಸಿದ್ದು ಅಮಿತ್‌ ಶಾ: ಬಿಎಸ್‌ವೈ ಪ್ರಶಂಸೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ