ಆ್ಯಪ್ನಗರ

ಕೊರ್ಲಕೈ ಗ್ರಾಪಂ ವ್ಯಾಪ್ತಿಯ ಜಿಡ್ಡಿ ಸೀಲ್‌ಡೌನ್‌

ಸಿದ್ದಾಪುರ : ತಾಲೂಕಿನ ಕೊರ್ಲಕೈ ಗ್ರಾಪಂ ವ್ಯಾಪ್ತಿಯ ಜಿಡ್ಡಿ ಗ್ರಾಮದ ವಿದೇಶದಿಂದ ಬಂದ 32 ವರ್ಷದ ವ್ಯಕ್ತಿಯಲ್ಲಿಕೊರೊನಾ ಪಾಸಿಟಿವ್‌ ಇರುವುದು ಖಚಿತವಾಗಿದ್ದು ಅವರನ್ನು ಕಾರವಾರದ ಐಸೊಲೇಷನ್‌ ಕೇಂದ್ರಕ್ಕೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿದೆ ಎಂದು ತಹಸೀಲ್ದಾರ ಮಂಜುಳಾ ಭಜಂತ್ರಿ ತಿಳಿಸಿದರು.

Vijaya Karnataka 1 Jun 2020, 5:00 am
ಸಿದ್ದಾಪುರ : ತಾಲೂಕಿನ ಕೊರ್ಲಕೈ ಗ್ರಾಪಂ ವ್ಯಾಪ್ತಿಯ ಜಿಡ್ಡಿ ಗ್ರಾಮದ ವಿದೇಶದಿಂದ ಬಂದ 32 ವರ್ಷದ ವ್ಯಕ್ತಿಯಲ್ಲಿಕೊರೊನಾ ಪಾಸಿಟಿವ್‌ ಇರುವುದು ಖಚಿತವಾಗಿದ್ದು ಅವರನ್ನು ಕಾರವಾರದ ಐಸೊಲೇಷನ್‌ ಕೇಂದ್ರಕ್ಕೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿದೆ ಎಂದು ತಹಸೀಲ್ದಾರ ಮಂಜುಳಾ ಭಜಂತ್ರಿ ತಿಳಿಸಿದರು.
Vijaya Karnataka Web giddy sealedown in the korlakai grap range
ಕೊರ್ಲಕೈ ಗ್ರಾಪಂ ವ್ಯಾಪ್ತಿಯ ಜಿಡ್ಡಿ ಸೀಲ್‌ಡೌನ್‌

ವಿದೇಶದಿಂದ ಬಂದ ವ್ಯಕ್ತಿಯನ್ನು ಬೆಂಗಳೂರಿನಲ್ಲಿಹೊಟೆಲ್‌ ಕ್ವಾರೆಂಟನ್‌ ಮಾಡಲಾಗಿತ್ತು. ಏಳುದಿನದ ನಂತರ ವರದಿ ನೆಗೆಟಿವ್‌ ಬಂದ ಕಾರಣ ಅಲ್ಲಿಂದ ಅವರ ಸ್ವಗ್ರಾಮವಾದ ಜಿಡ್ಡಿಯಲ್ಲಿಹೊಂಕ್ವಾರೆಂಟೆನ್‌ಗೆ ಒಳಪಡಿಸಲಾಗಿತ್ತು. ಆದರೆ ಈಗ ದ್ವಿತೀಯ ವರದಿ ಬಂದಿದ್ದು ಅದರಲ್ಲಿಕೊವಿಡ್‌ ಲಕ್ಷಣ ಇರುವುದು ಖಚಿತವಾಗಿದೆ. ಆದ್ದರಿಂದ ನಿಯಮದಂತೆ ಅವರು ವಾಸ್ತವ್ಯ ಹೂಡಿದ್ದ ಮನೆಯಿಂದ ಸುಮಾರು 200 ಮೀಟರ್‌ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗುವುದು. ಮತ್ತು ಗ್ರಾಮದ ಪ್ರತಿಯೊಬ್ಬರನ್ನು ಸ್ವಾಬ್‌ ಟೆಸ್ಟ್‌ ನಡೆಸಲಾಗುವುದು. ಗ್ರಾಮಕ್ಕೆ ಹೊರಗಿನಿಂದ ಯಾರೂ ಬರದಂತೆ ಹಾಗೂ ಇಲ್ಲಿಂದ ಯಾರೂ ಹೊರಗೆ ಹೋಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.

ತಾಲೂಕಿನಲ್ಲಿಇನ್ನೂ ಒಂದು ಕೊವಿಡ್‌ ಪ್ರಕರಣ ದಾಖಲಾಗಿದೆ. ಮಹಾರಾಷ್ಟ್ರದಿಂದ ಬಂದು ಕಿತ್ತೂರುರಾಣಿಚೆನ್ನಮ್ಮ ಹಾಸ್ಟೆಲ್‌ನಲ್ಲಿಕ್ವಾರೆಂಟೆನ್‌ಲ್ಲಿದ್ದ ವ್ಯಕ್ತಿಯೊಬ್ಬನಲ್ಲೂಪಾಸಿಟಿವ್‌ ಇರುವುದು ದೃಢಪಟ್ಟಿದೆ. ಈಗಾಗಲೇ ಕಾರವಾರದಲ್ಲಿಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯ ಸಂಬಂಧಿಕರು ಇವರಾಗಿದ್ದು ಇವರನ್ನು ಚಿಕಿತ್ಸೆಗಾಗಿ ಕಾರವಾರಕ್ಕೆ ಕಳಿಸಲಾಗಿದೆ. ತಾಲೂಕಿನಲ್ಲಿಒಟ್ಟಾರೆ ಮೂರು ಪ್ರಕರಣ ದಾಖಲಾದಂತಾಗಿದೆ ಎಂದು ಮಾಹಿತಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ