ಆ್ಯಪ್ನಗರ

ಝರಿ ನೀರಿನಿಂದ ಘಂಟಾನಾದ

ಕಾರವಾರ : ತಾಲೂಕಿನ ತೋಡೂರು ಗ್ರಾ.ಪಂ. ವ್ಯಾಪ್ತಿಯ ಮರ್ಗಿಹೊಂಡದ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಭಕ್ತ ಮಂಜುನಾಥ ನಾಯ್ಕ ಅವರು ಹರಿಯುವ ಝರಿ ನೀರು ಬಳಸಿ ಸರಳ ತಂತ್ರಜ್ಞಾನದಲ್ಲಿ ನಿರಂತರ ಘಂಟಾನಾದ ಮೊಳಗಿಸುವ ಮೂಲಕ ಗಮನ ಸೆಳೆದಿದ್ದಾರೆ.

Vijaya Karnataka 3 Jan 2019, 5:00 am
ಕಾರವಾರ : ತಾಲೂಕಿನ ತೋಡೂರು ಗ್ರಾ.ಪಂ. ವ್ಯಾಪ್ತಿಯ ಮರ್ಗಿಹೊಂಡದ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಭಕ್ತ ಮಂಜುನಾಥ ನಾಯ್ಕ ಅವರು ಹರಿಯುವ ಝರಿ ನೀರು ಬಳಸಿ ಸರಳ ತಂತ್ರಜ್ಞಾನದಲ್ಲಿ ನಿರಂತರ ಘಂಟಾನಾದ ಮೊಳಗಿಸುವ ಮೂಲಕ ಗಮನ ಸೆಳೆದಿದ್ದಾರೆ.
Vijaya Karnataka Web giri from the zari water
ಝರಿ ನೀರಿನಿಂದ ಘಂಟಾನಾದ


ತೋಡೂರಿನ ಜನವಸತಿ ಪ್ರದೇಶದಿಂದ ಎತ್ತರದಲ್ಲಿರುವ ಮರ್ಗಿಹೊಂಡದ ಸುತ್ತ ದಟ್ಟ ಅರಣ್ಯ ಇದೆ. ಗುಡ್ಡದ ತುದಿಯ ಬಯಲು ಪ್ರದೇಶದಲ್ಲಿ ಅಯ್ಯಪ್ಪನ ಭಕ್ತರು ಸ್ವಾಮಿಯ ಸನ್ನಿಧಾನ ನಿರ್ಮಿಸಿಕೊಂಡಿದ್ದಾರೆ. ಇಲ್ಲಿ ಗುಡ್ಡದ ಝರಿಯಿಂದ ಹರಿದು ಬರುವ ನೀರಿಗೆ ಪೈಪ್‌ ಅಳವಡಿಸಿ ನೀರನ್ನು ಒಂದು ಚಕ್ರದ ಮೇಲೆ ಬೀಳುವಂತೆ ಮಾಡಲಾಗಿದೆ. ಆ ಚಕ್ರದ ಸುತ್ತ ಪ್ಲಾಸ್ಟಿಕ್‌ ತಂಬಿಗೆಗಳನ್ನು ಕಟ್ಟಲಾಗಿದೆ. ಪೈಪ್‌ನಿಂದ ಬೀಳುವ ನೀರು ತಂಬಿಗೆ ತುಂಬಿಸುತ್ತದೆ. ನಂತರ ಚಕ್ರ ವೇಗವಾಗಿ ತಿರುಗುತ್ತದೆ. ಚಕ್ರಕ್ಕೆ ಅಳವಡಿಸಿದ ಹಗ್ಗದ ಸಹಾಯದಿಂದ ಗುಡಿಯಲ್ಲಿ ಘಂಟೆ ನಿರಂತರವಾಗಿ ಮೊಳಗುತ್ತಿರುತ್ತದೆ.

ಪ್ರಸ್ತುತ ದಿನದಲ್ಲಿ ಸಾಕಷ್ಟು ಭಕ್ತರು ಅಯ್ಯಪ್ಪನ ಮಾಲೆ ಧರಿಸಿ ಇಲ್ಲಿಯೇ ಇದ್ದು ಅಯ್ಯಪ್ಪನ ವೃತಾಚರಣೆ ಮಾಡುತ್ತಾರೆ. ಮರ್ಗಿಹೊಂಡದಲ್ಲಿ ಅಯ್ಯಪ್ಪನ ಸನ್ನಿಧಾನ ನಿರ್ಮಾಣಗೊಂಡ ಬಳಿಕ ಅಲ್ಲಿಂದ ಸ್ವಾಮಿ ಮಾಲೆ ಧರಿಸಿದ ಸ್ವಾಮಿಗಳು ಶಬರಿ ಮಲೆ ಯಾತ್ರೆಗೆ ತೆರಳುತ್ತಾರೆ.

ಈಗ ಈ ಸನ್ನಿಧಾನದಲ್ಲಿ ಸುಮಾರು 18ಕ್ಕೂ ಹೆಚ್ಚು ಜನ ಸ್ವಾಮಿಮಾಲೆ ಧರಿಸುತ್ತಿದ್ದಾರೆ. ಇಲ್ಲಿಂದಲೇ ಪ್ರತಿವರ್ಷ ಈ ಗುಡ್ಡದಿಂದಲೇ ಶಬರಿಮಲೆಗೆ ತೆರಳಿ ಅಯ್ಯಪ್ಪ ಸ್ವಾಮಿಯ ಯಾತ್ರೆಗೆ ಸಂಪನ್ನಗೊಳಿಸುತ್ತಾರೆ.


ಹಣ್ಣುಗಳನ್ನು ಕೋತಿ ಮುಟ್ಟುವುದಿಲ್ಲ : ಮರ್ಗಿಹೊಂಡ ಸಂಪೂರ್ಣ ಅರಣ್ಯ ಪ್ರದೇಶ. ಮಂಗ, ಕೋತಿ ಹಾಗೂ ಇನ್ನಿತರ ಕಾಡು ಪ್ರಾಣಿಗಳ ಸಂಖ್ಯೆ ಹೆಚ್ಚಾಗಿದೆ. ಇಲ್ಲಿ ಬೆಳೆಯುವ ಬಾಳೆಗೊನೆ, ಪೇರಲೆ ಹಣ್ಣು, ಪಪ್ಪಾಯಿಯಂಥ ಹಣ್ಣುಗಳನ್ನು ಮಂಗ, ಕೋತಿಗಳು ಮುಟ್ಟುವುದಿಲ್ಲ. ಸಾಕಷ್ಟು ಬಾಳೆ, ಪೇರಲೆ ಹಣ್ಣಿನ ಗಿಡಗಳಿದ್ದರೂ ಅವುಗಳ ಬಳಿ ಸುಳಿಯುವುದಿಲ್ಲ ಎಂದು ಇಲ್ಲಿನ ಅಯ್ಯಪ್ಪ ಮಾಲಾಧಾರಿ ಭಕ್ತರು ಹೇಳುತ್ತಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ