ಆ್ಯಪ್ನಗರ

ಮೀನುಗಾರರಿಗೆ ಪರಿಹಾರ ನೀಡಿ

ಕಾರವಾರ: ರಾಜ್ಯದ ಕರಾವಳಿಯ ಮೀನುಗಾರರು ಮತ್ಸತ್ರ್ಯ ಕ್ಷಾಮದಿಂದ ತತ್ತರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿಮೀನುಗಾರ ಕುಟುಂಬಗಳು ಪ್ರಕೃತಿ ವಿಕೋಪ ಸಂತ್ರಸ್ತರೆಂದು ಪರಿಗಣಿಸಿ ಪರಿಹಾರ ನೀಡಬೇಕು, ಬೈತಖೋಲ ಮೀನುಗಾರಿಕೆ ಬಂದರಿನಲ್ಲಿಮೂಲ ಸೌಕರ್ಯ ಅಭಿವೃದ್ಧಿ ಮಾಡಬೇಕು ಎಂದು ಕಾರವಾರದ ವಿವಿಧ ಮೀನುಗಾರ ಸಂಘಟನೆಯವರು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಶುಕ್ರವಾರ ಕುಮಟಾದಲ್ಲಿಭೇಟಿ ಮಾಡಿ ಮನವಿ ಸಲ್ಲಿಸಿದರು.

Vijaya Karnataka 16 Nov 2019, 5:00 am
ಕಾರವಾರ: ರಾಜ್ಯದ ಕರಾವಳಿಯ ಮೀನುಗಾರರು ಮತ್ಸತ್ರ್ಯ ಕ್ಷಾಮದಿಂದ ತತ್ತರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿಮೀನುಗಾರ ಕುಟುಂಬಗಳು ಪ್ರಕೃತಿ ವಿಕೋಪ ಸಂತ್ರಸ್ತರೆಂದು ಪರಿಗಣಿಸಿ ಪರಿಹಾರ ನೀಡಬೇಕು, ಬೈತಖೋಲ ಮೀನುಗಾರಿಕೆ ಬಂದರಿನಲ್ಲಿಮೂಲ ಸೌಕರ್ಯ ಅಭಿವೃದ್ಧಿ ಮಾಡಬೇಕು ಎಂದು ಕಾರವಾರದ ವಿವಿಧ ಮೀನುಗಾರ ಸಂಘಟನೆಯವರು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಶುಕ್ರವಾರ ಕುಮಟಾದಲ್ಲಿಭೇಟಿ ಮಾಡಿ ಮನವಿ ಸಲ್ಲಿಸಿದರು.
Vijaya Karnataka Web give relief to fishermen
ಮೀನುಗಾರರಿಗೆ ಪರಿಹಾರ ನೀಡಿ


ರಾಜ್ಯಾದ್ಯಂತ ಲಕ್ಷಾಂತರ ಮೀನುಗಾರ ಕುಟುಂಬಗಳಿಗೆ ಮೀನುಗಾರಿಕೆಯೊಂದೇ ಜೀವನಾಧಾರವಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿಮತ್ಸತ್ರ್ಯ ಕ್ಷಾಮ ಉಂಟಾಗಿದ್ದು, ಮೀನು ಸಿಗುವುದೇ ದುಸ್ತರವಾಗಿದೆ. ಅದರಲ್ಲೂಈ ವರ್ಷ ಮೀನುಗಾರಿಕೆ ಹಂಗಾಮು ಆರಂಭವಾದ ಬಳಿಕವೂ ಪದೇ ಪದೆ ಚಂಡಮಾರುತ, ಅತಿವೃಷ್ಟಿಯಿಂದಾಗಿ ಮೀನುಗಾರಿಕೆಗೆ ತೀವ್ರ ಹಿನ್ನಡೆಯಾಗಿದೆ.

ಮೀನುಗಾರ ಕುಟುಂಬಗಳು ವಿವಿಧ ಬ್ಯಾಂಕ್‌ಗಳಲ್ಲಿತಮ್ಮ ಉದ್ಯೋಗ ವಹಿವಾಟಿಗೆ ಸಾಲ ಮಾಡಿಕೊಂಡಿದ್ದಾರೆ. ಮೀನುಗಾರರಿಗೆ ಆದಾಯವೇ ಇಲ್ಲದಿದ್ದರೂ, ಬ್ಯಾಂಕುಗಳಿಂದ ಕಿರುಕುಳ ತಪ್ಪಿಲ್ಲ. ಈ ಹಿನ್ನೆಲೆಯಲ್ಲಿಸತ್ಯಾಸತ್ಯತೆಯನ್ನು ಪರಿಶೀಲಿಸಿ ಮೀನುಗಾರರಿಗೆ ಪ್ರಕೃತಿ ವಿಕೋಪದಡಿ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು. ಅಲ್ಲದೇ ಮೀನುಗಾರ ಕುಟುಂಬಗಳ ಆರ್ಥಿಕ ದುಸ್ಥಿತಿ ಪರಿಗಣಿಸಿ ಬ್ಯಾಂಕುಗಳು ಕಿರುಕುಳ ಕೊಡದಂತೆ ಸರಕಾರ ಸುತ್ತೋಲೆ ಹೊರಡಿಸಬೇಕು ಎಂದು ಮನವಿಯಲ್ಲಿಉಲ್ಲೇಖಿಸಲಾಗಿದೆ.

ಮೂಲ ಸೌಕರ್ಯ ಅಭಿವೃದ್ಧಿ: ಕಾರವಾರದ ಬೈತಖೋಲ ಬಂದರಿನಲ್ಲಿಹೂಳು ತುಂಬಿಕೊಂಡಿದ್ದು ದೋಣಿಗಳನ್ನು ನಿಲುಗಡೆ ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಬಂದರಿನಲ್ಲಿಮಹಿಳಾ ಶೌಚಾಲಯ ಮತ್ತು ವಿಶ್ರಾಂತಿ ಕೊಠಡಿ ಕಾಮಗಾರಿ ಅರ್ಧಂಬರ್ಧ ಆಗಿದ್ದು, ಮೀನುಗಾರ ಮಹಿಳೆಯರಿಗೆ ವಿಪರೀತ ತೊಂದರೆಯಾಗಿದೆ.

ಈ ಹಿನ್ನೆಲೆಯಲ್ಲಿಬಂದರಿನ ಹೂಳು ತೆಗೆಯುವ ಕಾಮಗಾರಿಯನ್ನು ಕೈಗೊಳ್ಳಬೇಕು. ಅಲ್ಲದೇ ಮಹಿಳೆಯರ ವಿಶ್ರಾಂತಿ ಕೊಠಡಿ, ಶೌಚಾಲಯಗಳ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಬೇಕು ಎಂದು ಮನವಿಯಲ್ಲಿತಿಳಿಸಲಾಗಿದೆ.

ಮನವಿ ಸ್ವೀಕರಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಕಾರವಾರ ತಾಲೂಕು ಪರ್ಸೀನ್‌ ಬೋಟ್‌ ಯೂನಿಯನ್‌ ಅಧ್ಯಕ್ಷ ಮೋಹನ ಬೋಳಶಿಟ್ಟಾಕರ್‌, ವಾಮನ ಹರಿಕಂತ್ರ, ವೆಂಟೇಶ ತಾಂಡೇಲ, ಕೆ.ಟಿ.ತಾಂಡೇಲ, ವಿನಾಯಕ ಹರಿಕಂತ್ರ, ಸುಧಾಕರ ಹರಿಕಂತ್ರ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ