ಆ್ಯಪ್ನಗರ

ಗೋಕರ್ಣ ರಸ್ತೆ ಸಂಪೂರ್ಣ ಜಲಾವೃತ

ಗೋಕರ್ಣ : ಶುಕ್ರವಾರ ಸುರಿದ ಭಾರಿ ಮಳೆಗೆ ಗೋಕರ್ಣ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು, ಸ್ಥಳೀಯರು, ಪ್ರವಾಸಿಗರು ಪರದಾಡುವಂತಾಯಿತು. ಮುಖ್ಯರಸ್ತೆಯ ರಥಬೀದಿಯ ರಸ್ತೆ ಸಂಪೂರ್ಣ ನದಿಯಾಗಿ ಮಾರ್ಪಟ್ಟಿತ್ತು. ಜನರು ಹರಸಾಹಸ ಮಾಡಿ ದಾಟಲು ಯತ್ನಿಸಿದರು.

Vijaya Karnataka 28 Jul 2019, 5:00 am
ಗೋಕರ್ಣ : ಶುಕ್ರವಾರ ಸುರಿದ ಭಾರಿ ಮಳೆಗೆ ಗೋಕರ್ಣ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು, ಸ್ಥಳೀಯರು, ಪ್ರವಾಸಿಗರು ಪರದಾಡುವಂತಾಯಿತು. ಮುಖ್ಯರಸ್ತೆಯ ರಥಬೀದಿಯ ರಸ್ತೆ ಸಂಪೂರ್ಣ ನದಿಯಾಗಿ ಮಾರ್ಪಟ್ಟಿತ್ತು. ಜನರು ಹರಸಾಹಸ ಮಾಡಿ ದಾಟಲು ಯತ್ನಿಸಿದರು.
Vijaya Karnataka Web gokarna road is a complete waterfront
ಗೋಕರ್ಣ ರಸ್ತೆ ಸಂಪೂರ್ಣ ಜಲಾವೃತ


ಹಲವರು ಕಾಲು ಜಾರುವುದರಿಂದ ಹೇಗೂ ತಪ್ಪಿಸಿಕೊಂಡು ಬದಿಗೆ ಬಂದರು. ದ್ವಿಚಕ್ರವಾಹನ ಸವಾರರು ನೀರಿನ ಮಧ್ಯದಲ್ಲಿ ಸಿಕ್ಕಿಹಾಕಿಕೊಂಡು ವಾಹನ ತೆಗೆಯಲು ಹರಸಾಹಸ ಪಟ್ಟರು. ಪ್ರತಿ ವರ್ಷ ಈ ಸಮಸ್ಯೆ ಪುನರಾವರ್ತನೆಯಾಗುತ್ತಿದ್ದು, ಈ ಸಮಸ್ಯೆ ಬಗ್ಗೆ ಸ್ಥಳೀಯ ಆಡಳಿತವಾಗಲಿ, ಯಾವುದೇ ಕ್ರಮ ತೆಗೆದುಕೊಳ್ಳದಿರುವುದಕ್ಕೆ ಸ್ಥಳೀಯರು ಹಿಡಿ ಶಾಪ ಹಾಕುತ್ತಿದ್ದಾರೆ.

ಪ್ರತಿ ವರ್ಷ ಹೂಳು ಎತ್ತುವ ಕೆಲಸವನ್ನಾದರೂ ಗ್ರಾಮ ಪಂಚಾಯಿತಿ ಮಾಡುತ್ತಿತ್ತು, ಆದರೆ ಈ ವರ್ಷ ಮಾಡದಿರುವುದರಿಂದ ಸ್ವಲ್ಪ ಪ್ರಮಾಣದಲ್ಲಿ ಬರುತ್ತಿದ್ದ ನೀರು ಈ ವರ್ಷ ಪ್ರವಾಹದ ರೀತಿ ರಸ್ತೆಯಲ್ಲಿ ಹರಿಯಿತು. ಇದಲ್ಲದೆ ಇಲ್ಲಿನ ಅಂಗಡಿಗಳಿಗೆ ಸಹ ನೀರು ನುಗ್ಗಿದೆ.

ರಥಬೀದಿ ದೇವಾಲಯದ ಪ್ರದೇಶವೂ ಜಲಮಯ : ಮಹಾಬಲೇಶ್ವರ ದೇವಾಲಯದ ಪಕ್ಕ ಮಹಾಗಣಪತಿ ದೇವಾಲಯದ ಎದುರು ಸಹ ನೀರು ತುಂಬಿತ್ತು. ಇದರಂತೆ ರಥಬೀದಿ ಹಾಗೂ ಮೇಲಿನಕೇರಿಯ ರಸ್ತೆಯಲ್ಲಿ ಹೊಲಸು ರಾಡಿ, ಪ್ಲಾಸ್ಟಿಕ್‌ ತ್ಯಾಜ್ಯಗಳ ರಾಶಿಯೊಂದಿಗೆ ಸಂಪೂರ್ಣ ಜಲಮಯವಾಯಿತು.

ಪುರಾಣ ಪ್ರಸಿದ್ಧ ಕ್ಷೇತ್ರದಲ್ಲಿ ಸಮಸ್ಯೆಗಳ ಆಗರವಾಗಿದ್ದು, ಸ್ಥಳೀಯರು ಈ ಬಗ್ಗೆ ಅದೆಷ್ಟೂ ಬಾರಿ ಮನವಿ ಸಲ್ಲಿಸಿದರೂ ಕ್ರಮ ಕೈಗೊಳ್ಳದ ಕಾರಣ ರೋಸಿ ಹೋಗಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ತಕ್ಷ ಣ ಕಾರ್ಯಪ್ರವೃತ್ತರಾಗಬೇಕು, ಇಲ್ಲವಾದರೆ ರಾಜ್ಯ ಸರಕಾರ ಅಥವಾ ಕೇಂದ್ರ ಸರಕಾರವಾದರೂ ಗೋಕರ್ಣವನ್ನು ಅಭಿವೃದ್ದಿ ಪಡಿಸಲು ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ