ಆ್ಯಪ್ನಗರ

ಸೂರ್ಯನಾರಾಯಣ ಪ್ರೌಢಶಾಲೆಗೆ ಸುವರ್ಣ ಸಂಭ್ರಮ

ಶಿರಸಿ : ಗ್ರಾಮೀಣ ಭಾಗದಲ್ಲಿ ನಿರಂತರ ಐದು ದಶಕಗಳಿಂದ ಶಿಕ್ಷ ಣ ಕೊಡುಗೆ ನೀಡುತ್ತ ಬಂದಿರುವ ತಾಲೂಕಿನ ಬಿಸಲಕೊಪ್ಪದ ಶ್ರೀ ಸೂರ್ಯನಾರಾಯಣ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಸಮಾರಂಭ ಜೂ.2ರಂದು ನಡೆಯಲಿದೆ.

Vijaya Karnataka 29 May 2019, 5:00 am
ಶಿರಸಿ : ಗ್ರಾಮೀಣ ಭಾಗದಲ್ಲಿ ನಿರಂತರ ಐದು ದಶಕಗಳಿಂದ ಶಿಕ್ಷ ಣ ಕೊಡುಗೆ ನೀಡುತ್ತ ಬಂದಿರುವ ತಾಲೂಕಿನ ಬಿಸಲಕೊಪ್ಪದ ಶ್ರೀ ಸೂರ್ಯನಾರಾಯಣ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಸಮಾರಂಭ ಜೂ.2ರಂದು ನಡೆಯಲಿದೆ.
Vijaya Karnataka Web golden jubilee for suryanarayana high school
ಸೂರ್ಯನಾರಾಯಣ ಪ್ರೌಢಶಾಲೆಗೆ ಸುವರ್ಣ ಸಂಭ್ರಮ


ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್‌.ಎಂ. ಹೆಗಡೆ ಹಾಗೂ ಪದಾಧಿಕಾರಿಗಳು ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ವಿವರ ನೀಡಿದರು.

ಐದು ದಶಕಗಳಷ್ಟು ಹಿಂದೆ 1968ರಲ್ಲಿ ಸ್ವರ್ಣವಲ್ಲೀ ಸಂಸ್ಥಾನದ ಶ್ರೀ ಸರ್ವಜ್ಞೇಂದ್ರ ಸರಸ್ವತೀ ಸ್ವಾಮೀಜಿ ಈ ಪ್ರೌಢ ಶಾಲೆಯನ್ನು ಉದ್ಘಾಟಿಸಿದ್ದರು. ಎಸ್‌. ಆರ್‌. ಹೆಗಡೆ ಕಡವೆ, ರಾಮಕೃಷ್ಣ ಹೆಗಡೆ ದೊಡ್ಮನೆ ಇನ್ನಿತರ ಹಿರಿಯ ನಾಯಕರ ಮಾರ್ಗದರ್ಶನದೊಂದಿಗೆ ಶಿಕ್ಷ ಣ ಸಂಸ್ಥೆ ವರ್ಷದಿಂದ ವರ್ಷಕ್ಕೆ ಪ್ರಗತಿಯ ದಾಪುಗಾಲು ಹಾಕಿದೆ. ಸಾಮಾಜಿಕವಾಗಿ ಹಿಂದುಳಿದ ಈ ಪ್ರದೇಶದಲ್ಲಿ ಶಿಕ್ಷ ಣಕ್ಕೆ ಪ್ರೇರಣೆ ನೀಡುವ ಮೂಲಕ ಮಾದರಿಯಾಗಿದೆ. ಸರಕಾರ ಬಿಸಿಯೂಟ ಯೋಜನೆ ಆರಂಭಿಸುವ 3 ವರ್ಷಗಳಿಗೂ ಮೊದಲು ಇಲ್ಲಿ ವಿದ್ಯಾರ್ಥಿಗಳಿಗೆ 2 ರೂ.ಗೆ ಊಟ ನೀಡುವ ವ್ಯವಸ್ಥೆ ಆರಂಭಿಸಲಾಗಿತ್ತು ಎಂದರು.

ಈಗ ಸುವರ್ಣ ಮಹೋತ್ಸವದ ಸಮಾರಂಭ ಜೂ.1ರ ಬೆಳಗ್ಗೆ 10.30ಕ್ಕೆ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಸಂಸದ ಅನಂತಕುಮಾರ ಹೆಗಡೆ, ಶಾಸಕರಾದ ಶಿವರಾಮ ಹೆಬ್ಬಾರ, ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರು, ತಾಪಂ ಸದಸ್ಯರು ಪಾಲ್ಗೊಳ್ಳುವರು.

ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಆರ್‌. ವಾಸುದೇವ, ಮುಂಬಯಿಯ ಚಾರ್ಟರ್ಡ್‌ ಅಕೌಂಟಂಟ್‌ ಸದಾನಂದ ಭಟ್ಟ ಹಾಗೂ ಜನಪ್ರತಿನಿಧಿಗಳು ಪಾಲ್ಗೊಳ್ಳುತ್ತಿದ್ದಾರೆ. ತಿಮ್ಮಪ್ಪ ಹೆಗಡೆ ಸಭಾ ವೇದಿಕೆಯ ಉದ್ಘಾಟನೆ, ಸಂಸ್ಥಾಪಕ ಸದಸ್ಯರ ಭಾವಚಿತ್ರ ಅನಾವರಣ, ಹಿಂದಿನ ಅಧ್ಯಕ್ಷ ರಿಗೆ ಹಾಗೂ ಶಿಕ್ಷ ಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದರು.

ಸಂಸ್ಥೆ ಪದಾಧಿಕಾರಿಗಳಾದ ಜಿ. ಕೆ. ಹೆಗಡೆ, ಜಿ. ವಿ. ಹೆಗಡೆ, ಡಿ. ಆರ್‌. ಭಟ್ಟ, ಬಿ.ಜಿ. ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ