ಆ್ಯಪ್ನಗರ

ಪರಿಸರ ಸ್ವಚ್ಛತೆಯಿಂದ ಉತ್ತಮ ಆರೋಗ್ಯ

ಯಲ್ಲಾಪುರ : ದೇಹ ಶುದ್ಧತೆಯಿಂದ ನಾವು ಹೇಗೆ ಆರೋಗ್ಯವಂತರಾಗಿರುತ್ತೇವೆಯೋ ಹಾಗೆಯೇ ದೇಶದ ಸ್ವಚ್ಛತೆ ಮತ್ತು ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ನಾವೆಲ್ಲರೂ ಆರೋಗ್ಯದಿಂದ ಉತ್ತಮ ಜೀವನ ನಡೆಸಲು ಸಾಧ್ಯ ಎಂದು ಫಾ.ರೇಮಂಡ್‌ ಫೆರ್ನಾಂಡೀಸ್‌ ಹೇಳಿದರು.

Vijaya Karnataka 16 Dec 2022, 2:17 pm
ಯಲ್ಲಾಪುರ : ದೇಹ ಶುದ್ಧತೆಯಿಂದ ನಾವು ಹೇಗೆ ಆರೋಗ್ಯವಂತರಾಗಿರುತ್ತೇವೆಯೋ ಹಾಗೆಯೇ ದೇಶದ ಸ್ವಚ್ಛತೆ ಮತ್ತು ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ನಾವೆಲ್ಲರೂ ಆರೋಗ್ಯದಿಂದ ಉತ್ತಮ ಜೀವನ ನಡೆಸಲು ಸಾಧ್ಯ ಎಂದು ಫಾ.ರೇಮಂಡ್‌ ಫೆರ್ನಾಂಡೀಸ್‌ ಹೇಳಿದರು.
Vijaya Karnataka Web cleanliness drive


ಪಟ್ಟಣದ ಹೋಲಿ ರೋಜರಿ ಪ್ರೌಢ ಶಾಲೆಯಲ್ಲಿ ಇಕೋ ಕ್ಲಬ್‌ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಾಯು ಮಾಲಿನ್ಯ ಮುಕ್ತ ಪರಿಸರ ಹಾಗೂ ಪ್ಲಾಸ್ಟಿಕ್‌ ಮುಕ್ತ ಪರಿಸರ ನಮ್ಮದಾಗಬೇಕು ಎಂದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸ್ಲೋಗನ್‌ ಬರೆಸುವ ಸ್ಫರ್ಧೆ ನಡೆಸಲಾಯಿತು. ಪರಿಸರಕ್ಕೆ ಸಂಬಂಧಿಸಿದ ವಿವಿಧ ಆಕರ್ಷಕ ಸ್ಲೋಗನ್‌ಗಳನ್ನು ಹಾಗೂ ಭಿತ್ತಿ ಚಿತ್ರವನ್ನು ವಿದ್ಯಾರ್ಥಿಗಳು ರಚಿಸಿದರು. ಶಿಕ್ಷ ಕ ಎಂ.ರಾಜಶೇಖರ ಅವರು ಪರಿಸರ ಮಹತ್ವದ ಕುರಿತು ಮಾತನಾಡಿದರು. ಶಿಕ್ಷ ಕ ವೆಂಕಟ್ರಮಣ ಭಟ್ಟ ನಿರ್ವಹಿಸಿದರು. ಜಗದೀಶ ಭಟ್ಟ, ಅಂಥೋನಿ ರೋಡ್ರಿಗಸ್‌, ದಾಸಿಂತ್‌ ಫೆರ್ನಾಂಡೀಸ್‌ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ