ಆ್ಯಪ್ನಗರ

ಭೂಸುಧಾರಣೆ ಕಾಯ್ದೆ ತಿದ್ದುಪಡಿ ಸರಕಾರದ ದೊಡ್ಡ ಪ್ರಮಾದ

ಸಿದ್ದಾಪುರ: ದಿ.ರಾಮಕೃಷ್ಣ ಹೆಗಡೆಯವರ ಪಂಚಾಯತ್‌ ರಾಜ್ಯ ಕಾನೂನು ಹಾಗೂ ದಿ.ದೇವರಾಜ ಅರಸು ಜಾರಿಗೆ ತಂದ ಭೂಸುಧಾರಣೆ ಕಾನೂನು ನಮ್ಮ ದೇಶದಲ್ಲೆಅತ್ಯುತ್ತಮ ಕಾನೂನುಗಳಾಗಿದ್ದು ಅಂತಹ ಭೂಸುಧಾರಣೆ ಕಾಯ್ದೆಯನ್ನು ತಿದ್ದುಪಡಿ ಮಾಡಲು ಹೊರಟಿರುವುದು ಸರಕಾರದ ದೊಡ್ಡ ಪ್ರಮಾದವಾಗಿದೆ ಎಂದು ಜೆಡಿಎಸ್‌ ಮುಖಂಡ ಡಾ.ಶಶಿಭೂಷಣ ಹೆಗಡೆ ಹೇಳಿದರು.

Vijaya Karnataka 16 Jun 2020, 5:00 am
ಸಿದ್ದಾಪುರ: ದಿ.ರಾಮಕೃಷ್ಣ ಹೆಗಡೆಯವರ ಪಂಚಾಯತ್‌ ರಾಜ್ಯ ಕಾನೂನು ಹಾಗೂ ದಿ.ದೇವರಾಜ ಅರಸು ಜಾರಿಗೆ ತಂದ ಭೂಸುಧಾರಣೆ ಕಾನೂನು ನಮ್ಮ ದೇಶದಲ್ಲೆಅತ್ಯುತ್ತಮ ಕಾನೂನುಗಳಾಗಿದ್ದು ಅಂತಹ ಭೂಸುಧಾರಣೆ ಕಾಯ್ದೆಯನ್ನು ತಿದ್ದುಪಡಿ ಮಾಡಲು ಹೊರಟಿರುವುದು ಸರಕಾರದ ದೊಡ್ಡ ಪ್ರಮಾದವಾಗಿದೆ ಎಂದು ಜೆಡಿಎಸ್‌ ಮುಖಂಡ ಡಾ.ಶಶಿಭೂಷಣ ಹೆಗಡೆ ಹೇಳಿದರು.
Vijaya Karnataka Web governments biggest blunder is the land acquisition act
ಭೂಸುಧಾರಣೆ ಕಾಯ್ದೆ ತಿದ್ದುಪಡಿ ಸರಕಾರದ ದೊಡ್ಡ ಪ್ರಮಾದ


ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದರು. ಯಾರನ್ನೊ ಮೆಚ್ಚಿಸಲು ಇಲ್ಲವೆ ಯಾರಿಗೋ ಲಾಭ ಮಾಡಿಕೊಡಲು ರಾಜ್ಯಸರಕಾರ ಕಾಯ್ದೆ ತಿದ್ದುಪಡಿಗೆ ಮುಂದಾಗಿದೆ. ಈ ಕಾಯ್ದೆ ಜಾರಿಯಿಂದ ರಾಜ್ಯದಲ್ಲಿಭೂಮಿ ಖರೀದಿಗೆ ಯಾವುದೇ ನಿರ್ಬಧ ಇರುವುದಿಲ್ಲ. ದೊಡ್ಡ ಉದ್ಯಮಿಗಳು ತಮ್ಮ ತೆರಿಗೆ ಹಣವನ್ನು ತಪ್ಪಿಸಿ ತೊಡಗಿಸಲು ಅನುಕೂಲವಾಗುತ್ತದೆ. ಇದರಿಂದ ದೇಶದ ಆರ್ಥಿಕ ಪರಿಸ್ಥಿತಿಯೂ ಹದಗೆಡಲಿದೆ. ರಾಜ್ಯದಲ್ಲಿಸಣ್ಣ ಮತ್ತು ಅತಿಸಣ್ಣ ರೈತರು ಹೆಚ್ಚಾಗಿದ್ದಾರೆ. ಇವರ ಜಮೀನನ್ನು ಆಮಿಷ ಅಥವಾ ಬೆದರಿಕೆಯಿಂದ ಉಳ್ಳವರು ಕಿತ್ತುಕೊಳ್ಳಲು ಅನುಕೂಲವಾಗುತ್ತದೆ. ಸರಕಾರದ ಯೋಜನೆಗಳು ಸಣ್ಣರೈತರಿಗೆ ಸಿಗುವ ಕೊಂಡಿ ಮಾಯವಾಗುತ್ತದೆ. ಸಮಾಜದ ಆರ್ಥಿಕ ಮಾನದಂಡ ಬದಲಾಗುತ್ತದೆ. ಇದರಿಂದ ನಿರುದ್ಯೋಗ ಹೆಚ್ಚಾಗುತ್ತದೆ.

ಒಬ್ಬ ವ್ಯಕ್ತಿ ಒಂದು ಸಿದ್ಧಾಂತವನ್ನು ಅತಿಯಾಗಿ ನಂಬುವುದು ತಪ್ಪು. ಸರಕಾರದ ಯೋಜನೆಗಳನ್ನು ವಿಶ್ಲೇಷಣೆ ಮಾಡುವುದು ತಪ್ಪು ಎನ್ನುವಂತಹ ಭಾವನೆಗಳನ್ನು ಬೆಳೆಸುತ್ತಿರುವುದು ಖಂಡನೀಯ. ಭೂಸುಧಾರಣೆ ಕಾಯ್ದೆ ಜನಸಾಮಾನ್ಯರಿಗೆ, ಸಹಕಾರಿ ತತ್ವಕ್ಕೆ ಅನುಕೂಲವಾಗಿರುವಂಥದ್ದು. ಸಣ್ಣ ಹಿಡುವಳಿದಾರರಿಗೆ ಅನುಕೂಲವಾಗುವಂತೆ ಸಹಕಾರಿ ತತ್ವದಲ್ಲಿಕೃಷಿ ಚಟುವಟಿಕೆ ನಡೆಸುವುದಕ್ಕೆ ಸರಕಾರ ಉತ್ತೇಜನ ಕೊಡಬೇಕು. ಅದು ಬಿಟ್ಟು ಉಳ್ಳವರಿಗೆ ಅನುಕೂಲ ಮಾಡಿಕೊಡುವಂತೆ ತಿದ್ದುಪಡಿ ಮಾಡುವುದನ್ನು ಕೈಬಿಡಬೇಕು. ಸಹಕಾರಿ ಸಂಘಸಂಸ್ಥೆಗಳು,ಆತ್ಮಸಾಕ್ಷಿಯುಳ್ಳ ಬಿಜೆಪಿ ಶಾಸಕರು ಇದನ್ನು ವಿರೋಧಿಸಬೇಕು. ಜನರು ತಮ್ಮ ಕ್ಷೇತ್ರದ ಶಾಸಕರಿಗೆ ಭೂಸುಧಾರಣೆ ಕಾಯ್ದೆ ತಿದ್ದುಪಡಿ ಮಾಡದಂತೆ ಒತ್ತಡ ಹೇರಬೇಕು ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ