ಆ್ಯಪ್ನಗರ

ಶಿರಸಿ: ಲಾಕ್‌ಡೌನ್‌ ವೇಳೆ ಮನೆ ಬಾಗಿಲಿಗೆ ಅಗತ್ಯ ವಸ್ತುಗಳ ಪೂರೈಕೆ

ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಪೇಟೆ ಪಟ್ಟಣ ಪ್ರದೇಶದಲ್ಲಿಮನೆ ಬಾಗಿಲಿಗೆ ಅಗತ್ಯ ವಸ್ತುಗಳ ಪೂರೈಕೆಗೆ ಅಧಿಕಾರಿಗಳು ವ್ಯವಸ್ಥೆ ಮಾಡುತ್ತಿದ್ದಾರೆ. ಈ ಬಗ್ಗೆ ಬೇಡಿಕೆ ಜಾಸ್ತಿ ಇದೆ ಆದರೆ ಪೂರೈಕೆ ಮಾತ್ರ ಸೀಮಿತವಾಗಿದೆ.

Vijaya Karnataka 30 Mar 2020, 6:28 pm
ಶಿರಸಿ: ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಪೇಟೆ ಪಟ್ಟಣ ಪ್ರದೇಶದಲ್ಲಿಮನೆ ಬಾಗಿಲಿಗೆ ಅಗತ್ಯ ವಸ್ತುಗಳ ಪೂರೈಕೆಗೆ ಅಧಿಕಾರಿಗಳು ವ್ಯವಸ್ಥೆ ಮಾಡುತ್ತಿದ್ದಾರೆ. ಈ ಬಗ್ಗೆ ಬೇಡಿಕೆ ಜಾಸ್ತಿ ಇದೆ ಆದರೆ ಪೂರೈಕೆ ಮಾತ್ರ ಸೀಮಿತವಾಗಿದೆ.
Vijaya Karnataka Web ಲಾಕ್‌ಡೌನ್
ಲಾಕ್‌ಡೌನ್


ಸಾರ್ವಜನಿಕರು ಮನೆಯಲ್ಲೇ ಇರಬೇಕು ರಸ್ತೆಗೆ ಬರಬಾರದು, ಅಂಗಡಿ ಮುಂಗಟ್ಟುಗಳನ್ನು ತೆರೆಯಬಾರದು ಎಂಬ ನಿಯಮಗಳು ದಿನದಿಂದ ದಿನಕ್ಕೆ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿದೆ. ಇದರ ಪರಿಣಾಮದ ಅರಿವು ಕ್ರಮೇಣ ಸಾರ್ವಜನಿಕರಿಗೆ ಆಗುತ್ತಿದೆ.

ಮನೆಯಲ್ಲಿನ ದಿನಸಿ ಸಾಮಗ್ರಿಗಳು ಒಂದೊಂದಾಗಿ ಖಾಲಿಯಾಗುತ್ತಲೇ ಸಾರ್ವಜನಿಕರು ಮುಂದೇನು ಮಾಡಬೇಕು ಎಂಬ ಯೋಚನೆಗೆ ಬಿದ್ದಿದ್ದಾರೆ.ಒಂದೆಡೆ ಅಂಗಡಿ ಮುಂಗಟ್ಟು ತೆರೆಯುವುದಕ್ಕೆ ನಿರ್ಬಂಧ ಹೇರಿರುವ ಸ್ಥಳೀಯ ಆಡಳಿತವು ಇನ್ನೊಂದೆಡೆ ಮನೆಮನೆಗೆ ಅಗತ್ಯ ವಸ್ತುಗಳ ಪೂರೈಕೆಗೆ ಕೂಡ ಮುಂದಾಗಿದೆ.ಅದಕ್ಕಾಗಿ ಸ್ವಯಂ ಸೇವಾ ಸಂಸ್ಥೆಗಳ ನೆರವು ಪಡೆಯುತ್ತಿದೆ. ಅಲ್ಲದೆ ವಾಹನಗಳ ಮೂಲಕ ವಾರ್ಡುಗಳಿಗೆ ತರಕಾರಿ ಹಣ್ಣು ದಿನಸಿ ಸಾಮಗ್ರಿಗಳನ್ನು ಕಳುಹಿಸುವ ಸೌಲಭ್ಯ ಪ್ರಾರಂಭಿಸಿದೆ.

ಬೇಡಿಕೆ ಹೆಚ್ಚು: ಈ ಮಧ್ಯೆ ಹೀಗೆ ಪೂರೈಕೆ ಮಾಡುವವರ ಬಳಿ ಗ್ರಾಹಕರು ಹೆಚ್ಚಿನ ಪ್ರಮಾಣದ ಸಾಮಗ್ರಿಗೆ ಬೇಡಿಕೆ ಹೇಳುತ್ತಿದ್ದಾರೆ. ಮುಂದಿನ ವಾರ ಮತ್ತಷ್ಟು ಬಿಗಿ ಕ್ರಮಗಳು ಜಾರಿಯಾಗುತ್ತವೆ ಎಂಬ ಹಿನ್ನೆಲೆಯಲ್ಲಿಆ ಬಗ್ಗೆಯೂ ಗ್ರಾಹಕರು ಹೆಚ್ಚು ಸಂಗ್ರಹ ಮಾಡಿಟ್ಟುಕೊಳ್ಳುವ ಯೋಚನೆಯಲ್ಲಿದ್ದಾರೆ..

ಪೂರೈಕೆ ಸೀಮಿತ: ಆದರೆ ಮನೆ ಬಾಗಿಲಿಗೆ ಬಂದ ಪೂರೈಕೆದಾರರು ಗ್ರಾಹಕರು ಸಾರ್ವಜನಿಕರು ಬೇಡಿಕೆ ಇಟ್ಟಷ್ಟು ಹೆಚ್ಚಿನ ಪ್ರಮಾಣದ ಸಾಮಗ್ರಿಗಳನ್ನು ನೀಡುವುದಕ್ಕೆ ಸಿದ್ಧರಾಗುತ್ತಿಲ್ಲ. ಕೆಲವು ಸಾಮಗ್ರಿಗಳನ್ನು ಮೂರ್ನಾಲ್ಕು ಕೆಜಿ ಕೇಳಿದರೆ ಒಂದು ಕೆಜಿ ಕೊಡುತ್ತೇನೆ ಎನ್ನುವಂತ ಸಂದರ್ಭವೂ ಎದುರಾಗುತ್ತಿದೆ ಇಲ್ಲವಾದರೆ ತಂದಿಟ್ಟು ಸಾಮಗ್ರಿಗಳು ಕೆಲವೇ ಸಮಯದಲ್ಲಿಮತ್ತು ಸೀಮಿತ ಪ್ರದೇಶದಲ್ಲಿಖಾಲಿಯಾಗಿಬಿಡುವ ಮತ್ತು ಇನ್ನಷ್ಟು ಮಂದಿಗೆ ಪೂರೈಕೆ ಮಾಡಲು ಆಗದ ಇರುವ ರಚಿಸಿ ನಿರ್ಮಾಣವಾಗುವ ಹಿನ್ನೆಲೆಯಲ್ಲಿಸೀಮಿತ ಪ್ರಮಾಣದಲ್ಲಿಸಾಮಗ್ರಿ ನೀಡಲಾಗುತ್ತಿದೆ.

ಸೂರ್ಪ ಮಾರ್ಕೆಟ್‌ ಪೂರೈಕೆ ಸ್ಥಗಿತ: ಗ್ರಾಹಕರನ್ನು ಒಳಕ್ಕೆ ಬಿಡದೇ ಹೊರಗಿನಿಂದಲೇ ಸಾಮಗ್ರಿ ಪೂರೈಕೆ ಮಾಡುತ್ತಿದ್ದ ಟಿಎಸ…ಎಸ್‌ ಸಹಕಾರಿ ಸಂಸ್ಥೆಯ ಸೂರ್ಪ ಮಾರ್ಕೆಟ್‌ ಕೂಡ ಭಾನುವಾರದಿಂದ ಇಂಥ ಪೂರೈಕೆಯನ್ನು ಸಂಪೂರ್ಣವಾಗಿ ಸ್ಥಗಿತ ಮಾಡುವುದಾಗಿ ಪ್ರಕಟಿಸಿದೆ. ಸರಕಾರದ ಆದೇಶದ ಅನ್ವಯ ಹೀಗೆ ಮಾಡುತ್ತಿರುವುದಾಗಿ ತಿಳಿಸಿದೆ. ಆದರೆ ಔಷಧ ಅಂಗಡಿ ವಿಭಾಗ ಮಾತ್ರ ತೆರೆದಿರುತ್ತದೆ ಎಂದು ಪ್ರಕಟಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ