ಆ್ಯಪ್ನಗರ

ತಂಗುದಾಣದಲ್ಲಿಬೆಳೆಯಿತು ಹುತ್ತ..!

ಯಲ್ಲಾಪುರ : ತಾಲೂಕಿನ ನಂದೊಳ್ಳಿ ಗ್ರಾಪಂ ವ್ಯಾಪ್ತಿಯ ಅಣಲಗಾರ್‌ ಸಮೀಪದ ತಟ್ಟಿಗದ್ದೆ ಕ್ರಾಸ್‌ನಲ್ಲಿರುವ ಬಸ್‌ ತಂಗುದಾಣದ ಒಳಗೆ ದೊಡ್ಡದಾದ ಹುತ್ತವೊಂದು ಬೆಳೆಯುತ್ತಿದ್ದು, ಇದು ನೋಡುಗರಿಗೆ ಕುತೂಹಲ ಮೂಡಿಸಿದೆ. ಕೋವಿಡ್‌ ಕಾರಣದಿಂದ ಕಳೆದ ಆರು ತಿಂಗಳಿನಿಂದ ಈ ರಸ್ತೆಯಲ್ಲಿಬಸ್‌ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದಾಗಿ ಪ್ರಯಾಣಿಕರು, ಸಾರ್ವಜನಿಕರು ಬಸ್‌ ತಂಗುದಾಣದ ಕಡೆ ಸುಳಿದಿರಲಿಲ್ಲ. ಬಸ್‌ ತಂಗುದಾಣದ ಒಳಗಡೆ

Vijaya Karnataka 14 Oct 2020, 5:00 am
ಯಲ್ಲಾಪುರ : ತಾಲೂಕಿನ ನಂದೊಳ್ಳಿ ಗ್ರಾಪಂ ವ್ಯಾಪ್ತಿಯ ಅಣಲಗಾರ್‌ ಸಮೀಪದ ತಟ್ಟಿಗದ್ದೆ ಕ್ರಾಸ್‌ನಲ್ಲಿರುವ ಬಸ್‌ ತಂಗುದಾಣದ ಒಳಗೆ ದೊಡ್ಡದಾದ ಹುತ್ತವೊಂದು ಬೆಳೆಯುತ್ತಿದ್ದು, ಇದು ನೋಡುಗರಿಗೆ ಕುತೂಹಲ ಮೂಡಿಸಿದೆ. ಕೋವಿಡ್‌ ಕಾರಣದಿಂದ ಕಳೆದ ಆರು ತಿಂಗಳಿನಿಂದ ಈ ರಸ್ತೆಯಲ್ಲಿಬಸ್‌ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದಾಗಿ ಪ್ರಯಾಣಿಕರು, ಸಾರ್ವಜನಿಕರು ಬಸ್‌ ತಂಗುದಾಣದ ಕಡೆ ಸುಳಿದಿರಲಿಲ್ಲ. ಬಸ್‌ ತಂಗುದಾಣದ ಒಳಗಡೆ ಈಗ ದೊಡ್ಡ ಹುತ್ತ ಬೆಳೆದಿರುವ ಕಾರಣದಿಂದಾಗಿ ಕುಳಿತು ಕೊಳ್ಳಲೂ ಆಗದ ಸ್ಥಿತಿ ನಿರ್ಮಾಣವಾಗಿದೆ. ಸುತ್ತಲಿನ ಹತ್ತಾರು ಊರುಗಳ ಬಸ್‌ ಪ್ರಯಾಣಿಕರು ಬಸ್‌ ಪ್ರಯಾಣಕ್ಕಾಗಿ ಆಗಮಿಸಿದಾಗ ನಿಲ್ಲಲು,ಕುಳಿತುಕೊಳ್ಳಲು ಇದೇ ಬಸ್‌ ತಂಗುದಾಣವನ್ನೇ ಅವಲಂಬಿಸಬೇಕಾಗಿದೆ. ಸದ್ಯವೇ ಈ ಮಾರ್ಗದಲ್ಲಿಬಸ್‌ ಸಂಚಾರ ಪ್ರಾರಂಭವಾಗುವ ನಿರೀಕ್ಷೆ ಇದೆ. ಶಾಲಾ-ಕಾಲೇಜುಗಳು ಪ್ರಾರಂಭವಾದರೆ ಬಸ್‌ನಲ್ಲಿಪ್ರಯಾಣಿಸಲು ನಿತ್ಯ ಹತ್ತಾರು ವಿದ್ಯಾರ್ಥಿಗಳೂ ಈ ನಿಲ್ದಾಣದಲ್ಲಿಕುಳಿತುಕೊಳ್ಳುತ್ತಾರೆ. ಮಳೆ-ಬಿಸಿಲಿನಿಂದ ರಕ್ಷಿಸಿಕೊಳ್ಳಲೂ ಆಧಾರವಾಗಿರುವ ಈ ಬಸ್‌ ತಂಗುದಾಣದ ಒಳಗೆ ಹುತ್ತ ಬೆಳೆದ ಕಾರಣದಿಂದಾಗಿ ಈಗ ಯಾರೂ ಒಳಗಡೆ ಕುಳಿತುಕೊಳ್ಳುವುದು ಹಾಗಿರಲಿ, ಪ್ರವೇಶಿಸಲು ಸಹ ಅಂಜುವಂತಾಗಿದೆ.
Vijaya Karnataka Web 4957004011 YLP 1_24
ಯಲ್ಲಾಪುರ ತಾಲೂಕಿನ ನಂದೊಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಣಲಗಾರ್‌ ಸಮೀಪದ ತಟ್ಟಿಗದ್ದೆ ಕ್ರಾಸ್‌ನಲ್ಲಿರುವ ಬಸ್‌ ತಂಗುದಾಣದ ಒಳಗೆ ದೊಡ್ಡದಾದ ಹುತ್ತವೊಂದು ಬೆಳೆಯುತ್ತಿದೆ.



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ